ಭಾನುವಾರ ಬಂದ್ರೆ ಸಾಕು ಹುಡುಗಿ ನೋಡೋಕ್ಕೆ ಹೋಗ್ತಾರೆ ವಿನಯ್
Recommended Video

ವಿನಯ್ ರಾಜ್ ಕುಮಾರ್ ಹೊಸ ಸಿನಿಮಾ ಟೀಸರ್ ರಿಲೀಸ್ | Filmibeat Kannada
ಭಾನುವಾರ ಎಲ್ಲರಿಗೂ ಒಂದೊಂದು ಪ್ಲಾನ್ ಇರುತ್ತದೆ. ಆದರೆ, ವಿನಯ್ ರಾಜ್ ಕುಮಾರ್ ಭಾನುವಾರ ಬಂದ್ರೆ ಸಾಕು ಹುಡುಗಿ ನೋಡೋಕ್ಕೆ ಹೋಗ್ತಾರೆ. ಹೌದು, 'ಅನಂತು V/S ನುಸ್ರತ್' ಸಿನಿಮಾದ ಟೀಸರ್ ನೋಡಿದರೆ ನಾವು ಹೇಳುತ್ತಿರೋ ವಿಷಯ ನಿಮ್ಗೆ ಸಿಂಕ್ ಆಗುತ್ತದೆ.
'ಅನಂತು V/S ನುಸ್ರತ್' ವಿನಯ್ ಅಭಿನಯದ ಹೊಸ ಸಿನಿಮಾ. ಈ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಟೀಸರ್ ನಲ್ಲಿ ವೀಕೆಂಡ್ ನಲ್ಲಿ ಹುಡುಗಿ ನೋಡೋಕ್ಕೆ ಹೋಗುವ ಅನಂತು ಆಗಿ ವಿನಯ್ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಟೀಸರ್ ನಲ್ಲಿ ಇರುವ ಡೈಲಾಗ್ ಸಖತ್ ಇಷ್ಟ ಆಗುತ್ತದೆ. ಮ್ಯೂಸಿಕ್, ಕ್ಯಾಮರಾ ಗಮನ ಸೆಳೆಯುತ್ತದೆ. ವಿನಯ್ ರಾಜ್ ಕುಮಾರ್ ಲಾಯರ್ ಆಗಿದ್ದಾರೆ. ಮುಸ್ಲಿಂ ಹುಡುಗಿಯಾಗಿ ಮುದ್ದು ಮುದ್ದಾಗಿ ಲತಾ ಹೆಗಡೆ ಕಾಣಿಸಿಕೊಂಡಿದ್ದಾರೆ.
ಮೊದಲ ನೋಟದಲ್ಲಿ ಟೀಸರ್ ಎಲ್ಲರ ಮನ ಗೆಲ್ಲುವಂತೆ ಇದೆ. ಸುಧೀರ್ ಶಾನ್ ಭೋಗ್ ನಿರ್ದೇಶನ ಮಾಡಿದ್ದಾರೆ. ಮಾಣಿಕ್ಯ ಪ್ರೋಡಕ್ಷನ್ ನಲ್ಲಿ ಚಿತ್ರ ನಿರ್ಮಾಣ ಆಗಿದೆ.
English summary
Kannada Actor Vinay Rajkumar and Actress Latha Hegde's 'Ananthu vs Nusruth' movie teaser released.


Click it and Unblock the Notifications