ತೆಲುಗಿನ ಈ ಸಿನಿಮಾ 'ಕೆಜಿಎಫ್' ರೀತಿ ಇದೆ ಎಂದ ವರ್ಮಾ.!
Recommended Video

ಕೆಜಿಎಫ್ ಚಿತ್ರಕ್ಕೆ ವರ್ಲ್ಡ ವೈಡ್ ಆಡಿಯೆನ್ಸ್ ಫಿದಾ ಆಗಿದ್ದಾರೆ. ಐದು ಭಾಷೆಯಲ್ಲಿ ತೆರೆಕಂಡಿರುವ ಈ ಕೆಜಿಎಫ್ ಬಾಕ್ಸ್ ಆಫೀಸ್ ನಲ್ಲೂ ಚಿಂದಿ ಉಡಾಯಿಸುತ್ತಿದೆ.
ಈ ಮಧ್ಯೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಜಿಎಫ್ ಚಿತ್ರಕ್ಕೆ ಶುಭಕೋರಿದ್ದರು. ''ಬಾಹುಬಲಿ' ಯಿಂದ ಶುರುವಾಗಿ '2.O' ಬಂತು. ಈಗ ಕನ್ನಡದ 'ಕೆಜಿಎಫ್' ಹಿಂದಿಯಲ್ಲಿ ಸೂಪರ್ ಸಕ್ಸಸ್ ಆಗಿದೆ. ಇದು ಒಳ್ಳೆಯ ಸಿನಿಮಾಗಳಿಗೆ ಗಡಿ ಇಲ್ಲ ಎನ್ನುವುದನ್ನ ನಿರೂಪಿಸಿದೆ. ಒಳ್ಳೆಯ ಸಿನಿಮಾವನ್ನ ಎಲ್ಲ ಕಡೆ ಮಾಡಬಹುದು, ಒಳ್ಳೆಯ ಸಿನಿಮಾ ಎಲ್ಲ ಕಡೆ ಓಡುತ್ತದೆ. ಇಡೀ 'ಕೆಜಿಎಫ್' ಚಿತ್ರತಂಡಕ್ಕೆ ಶುಭಾಶಯಗಳು" ಎಂದಿದ್ದರು.
ಇದೀಗ, ರಾಮ್ ಚರಣ್ ತೇಜ ಅಭಿನಯದ 'ವಿನಯ ವಿಧೇಯ ರಾಮ' ಸಿನಿಮಾದ ಟ್ರೈಲರ್ ಮೆಚ್ಚಿಕೊಂಡಿರುವ ವರ್ಮಾ, ಬಯೋಪಟಿ ಶೀನು ನಿರ್ದೇಶನದ ಟ್ರೈಲರ್ ವಾಹ್. ಈ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾಗಿದೆ. ಇದು ನೋಡಲು ಡೈಮೆಂಡ್ ಜೊತೆ ಮಿಶ್ರಿಣವಾಗಿರುವ ಗೋಲ್ಡ್ (ಕೆಜಿಎಫ್) ನಂತಿದೆ. ಇದು ರಾಮ್ ಚರಣ್ ಅವರ ಮೊದಲ ಹಿಂದಿ ಸಿನಿಮಾ ಆಗಬೇಕಿತ್ತು'' ಎಂದು ಆರ್.ಜಿ.ವಿ ವಿಶ್ ಮಾಡಿದ್ದಾರೆ.

ಈ ಟ್ವೀಟ್ ನಲ್ಲಿ ಕೆಜಿಎಫ್ ನಂತಿದೆ ಎಂದು ಹೇಳಿರುವುದು ನಿಜಕ್ಕೂ ಚರ್ಚೆಗೆ ಕಾರಣವಾಗಿದೆ. ಅಂದ್ರೆ, 'ವಿನಯ ವಿಧೇಯ ರಾಮ' ಚಿತ್ರದಲ್ಲೂ ಇಂತಹದ್ದೇ ಕೆಜಿಎಫ್ ರೀತಿ ಚಿನ್ನದ ಕಥೆ ಬರಬಹುದು ಎನ್ನಲಾಗಿದೆ.
ಇನ್ನುಳಿದಂತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಮ್ ಚರಣ್ ಸಿನಿಮಾ ಬರ್ತಿದ್ದು, ಸಿನಿಮಾ ಬಂದ್ಮೇಲೆ ವರ್ಮಾ ಹೇಳಿದ್ದೇನು ಎಂಬುದು ತಿಳಿಯಲಿದೆ.


Click it and Unblock the Notifications











