24 ವರ್ಷದ ಹಿಂದಿನ ನೆನಪು ಹಂಚಿಕೊಂಡ ವಿನಾಯಕ್ ಜೋಷಿ
ನಟ ವಿನಾಯಕ್ ಜೋಷಿ ಬಾಲ ನಟನಾಗಿ ಅಭಿನಯಿಸಿದ ಚಿತ್ರ 'ನಮ್ಮೂರ ಮಂದಾರ ಹೂವೆ'. ಈ ಚಿತ್ರದ ಒಂದು ಮಧುರ ನೆನಪನ್ನು ಅವರು ಇದೀಗ ಹಂಚಿಕೊಂಡಿದ್ದಾರೆ.
'ನಮ್ಮೂರ ಮಂದಾರ ಹೂವೆ' ಸಿನಿಮಾಗೆ ವರನಟ ಡಾ ರಾಜ್ ಕುಮಾರ್ ಕ್ಯಾಮರಾ ಚಾಲನೆ ಮಾಡಿದ್ದರು. ಈ ಚಿತ್ರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅದರ ಕೆಲ ವಿವರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
''ಇದು 1995 ರಲ್ಲಿ ನಡೆದ 'ನಮ್ಮೂರ ಮಂದಾರ ಹೂವೆ' ಸಿನಿಮಾದ ಮುಹೂರ್ತ. ನನ್ನ ಜೀವನದ ಸಾದಾ ನೆನಪಿನಲ್ಲಿ ಇರುವ ದಿನ ಇದು. ಈ ಅವಕಾಶ ನೀಡಿದ್ದಕ್ಕೆ ಸುನೀಲ್ ಕುಮಾರ್ ದೇಸಾಯಿ ಹಾಗೂ ಜಯಶ್ರೀ ದೇವಿ ಮೇಡಮ್ ಗೆ ಧನ್ಯವಾದ. ನಾನು ಆಗ ಕೇವಲ 7 ವರ್ಷದ ಹುಡುಗನಾಗಿದ್ದೆ. ನಾನು ಈ ಚಿತ್ರದ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎನ್ನುವುದೂ ಕೂಡ ತಿಳಿದಿರಲಿಲ್ಲ.'' ಎಂದು ಆ ದಿನವನ್ನು ವಿವರಿಸಿದ್ದಾರೆ.
''ಅಪ್ಪು ಸಿನಿಮಾ ಮಾಡಿದಾಗ ತಮ್ಮ ಪಾತ್ರ ನೋಡಿ ಡಾ ರಾಜ್ ಕುಮಾರ್ ಮೆಚ್ಚಿಕೊಂಡು ಆಶೀರ್ವಾದ ಮಾಡಿದ್ದರು. ನಾನು ಅವರ ಜೊತೆಗೆ ಊಟ ಮಾಡಿದ್ದೇನೆ, ನಕ್ಕಿದ್ದೇನೆ, ಅವರೊಂದಿಗೆ ಸಮಯ ಕಳೆದಿದ್ದೇನೆ.'' ಎಂದು ಅಪೂರ್ವ ಕ್ಷಣಗಳ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

'ನಮ್ಮೂರ ಮಂದಾರ ಹೂವೆ' ಸಿನಿಮಾ ನಟ ಶಿವರಾಜ್ ಕುಮಾರ್, ರಮೇಶ್, ಪ್ರೇಮಾ ಅಭಿನಯದ ಸೂಪರ್ ಹಿಟ್ ಸಿನಿಮಾವಾಗಿದೆ.


Click it and Unblock the Notifications











