ಬಾಟಲ್ ಓಪನ್ ಚಾಲೆಂಜ್ ಮಾಡಿದ ದರ್ಶನ್ ಪುತ್ರ
ಬಾಟಲ್ ಓಪನ್ ಚಾಲೆಂಜ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಹಾಲಿವುಡ್ ನಿಂದ ಹಿಡಿದು ಸ್ಯಾಂಡಲ್ ವುಡ್ ಸ್ಟಾರ್ಸ್ ವರೆಗೆ ಅನೇಕರು ಈ ಸಾವಲನ್ನು ಸ್ವೀಕರಿಸಿದ್ದಾರೆ.
ಈಗ ನಟ ದರ್ಶನ್ ಪುತ್ರ ಕೂಡ ಬಾಟಲ್ ಓಪನ್ ಚಾಲೆಂಜ್ ಮಾಡಿದ್ದಾರೆ. ವಿನೀಶ್ ದರ್ಶನ್ ಕಾಲಿನಿಂದ ಬಾಟಲ್ ಓಪನ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮಗನ ಈ ವಿಡಿಯೋವನ್ನು ವಿಜಯಲಕ್ಷ್ಮಿ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದೊಡ್ಡ ದೊಡ್ಡ ಸ್ಟಾರ್ ಗಳ ನಡುವೆ ಪುಟ್ಟ ಬಾಲಕ ಈ ಸಾವಲನ್ನು ಸ್ವೀಕರಿಸಿದ್ದು, ದರ್ಶನ್ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಚಾಲೆಂಜ್ ಅನ್ನು ಸ್ವೀಕರಿಸಿ ತಾವು ಚಾಲೆಂಜಿಂಗ್ ಸ್ಟಾರ್ ಗೆ ತಕ್ಕ ಪುತ್ರ ಎನ್ನುವುದನ್ನು ವಿನೀಶ್ ಸಾಬೀತು ಮಾಡಿದ್ದಾರೆ.

ವಿನೀಶ್ ಈ ಹಿಂದೆ 'ಐರಾವತ' ಸಿನಿಮಾದಲ್ಲಿ ದರ್ಶನ್ ಜೊತೆಗೆ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗಷ್ಟೆ 'ಯಜಮಾನ' ಸಿನಿಮಾದ ಟೈಟಲ್ ಹಾಡಿನಲ್ಲಿಯೂ ಬಂದು ಹೋಗಿದ್ದರು.
ಅಂದಹಾಗೆ, ಕನ್ನಡದ ನಟ ಗಣೇಶ್, ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ, ನಟಿ ರಚಿತಾ ರಾಮ್ ಸೇರಿದಂತೆ ಅನೇಕರು ಬಾಟಲ್ ಓಪನ್ ಚಾಲೆಂಜ್ ಅನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ


Click it and Unblock the Notifications











