ವಿನೋದ್ ಪ್ರಭಾಕರ್ 'ಸಿ ಎಂ' ಆಗೋದಕ್ಕೆ ಬೇಕಿದೆ ಉಪ್ಪಿ ಪರ್ಮಿಷನ್
ಸದ್ಯ ರಾಜ್ಯದ ಎಲ್ಲಾ ಕಡೆ ಚುನಾವಣೆಯದ್ದೇ ಸದ್ದು. ಮುಂದಿನ ಸಿ ಎಂ ಯಾರು ಆಗುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನುವ ಕುತೂಹಲ ಜನರಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯ ರಾಜಕೀಯದಲ್ಲಿ ಸಿ ಎಂ ಸುದ್ದಿಯಂತೆ ಸ್ಯಾಂಡಲ್ ವುಡ್ ನಲ್ಲಿಯೂ ಸಿ ಎಂ ವಿಚಾರ ಸಾಕಷ್ಟು ಚರ್ಚೆ ಆಗುತ್ತೆ.
ಸದ್ಯ ಸಿನಿಮಾರಂಗದಲ್ಲಿ 'ಸಿ ಎಂ' ಆಗಲು ತಯಾರಾಗಿರುವವರು ನಟ ವಿನೋದ್ ಪ್ರಭಾಕರ್. ಆದರೆ ಅದಕ್ಕೆ ಉಪೇಂದ್ರ ಅವರ ಅನುಮತಿ ಬೇಕಾಗಿದೆಯಂತೆ. ಹೌದು ವಿನೋದ್ ಪ್ರಬಾಕರ್ ಅಭಿನಯದ ಹೊಸ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಚಿತ್ರಕ್ಕೆ 'ಸಿ ಎಂ' ಎನ್ನುವ ಶೀರ್ಷಿಕೆ ಫಿಕ್ಸ್ ಮಾಡಲು ಸಿನಿಮಾ ನಿರ್ದೇಶಕರು ತಯಾರಿ ಮಾಡಿಕೊಂಡಿದ್ದಾರೆ.

ಆದರೆ 'ಸಿ ಎಂ' ಅನ್ನುವ ಟೈಟಲ್ ಉಪೇಂದ್ರ ಅವರ ಬಳಿ ಇದೆ. ಆದ್ದರಿಂದ ಉಪ್ಪಿ ಕಾಮನ್ ಮ್ಯಾನ್(ಸಿ ಎಂ) ಎನ್ನುವ ಟೈಟಲ್ ಬಿಟ್ಟುಕೊಟ್ಟರೆ ಚಿತ್ರಕ್ಕೆ ಉಪಯೋಗವಾಗುತ್ತೆ ಅಂತಾರೆ ಡೈರೆಕ್ಟರ್ ರವಿಗೌಡ. ನಿರ್ದೇಶಕ ರವಿಗೌಡ ಈ ಹಿಂದೆ ಪೂರಿ ಜಗನ್ನಾಥ್ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಅಂದ್ಹಾಗೆ ವಿನೋದ್ ಪ್ರಭಾಕರ್ ಅಭಿನಯದ ಹೊಸ ಚಿತ್ರವನ್ನ ಕುಮಾರ್ ಹಾಗೂ ಚಕ್ರಿ ಎನ್ನುವವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಮೇ 11 ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು ಮೇ 15 ರಿಂದ ಹೈದ್ರಾಬಾದ್ ನಲ್ಲಿ ಚಿತ್ರೀಕರಣ ನಡೆಯಲಿದೆ.


Click it and Unblock the Notifications











