'ರಾಬರ್ಟ್' ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್?

Recommended Video

ದರ್ಶನ್ ರಾಬರ್ಟ್ ಸಿನಿಮಾದಿಂದ ಹೊರಬಂತೊಂದು ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸದ್ಯ ಸ್ಯಾಂಡಲ್ ವುಡ್ ನ ಟಾಕ್ ಆಫ್ ದಿ ಟೌನ್ ಆಗಿದೆ. ಭಾರಿ ಕುತೂಹಲ, ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

ಚಿತ್ರಸೆಟ್ಟೇರಿದಾಗಿನಿಂದಲು ಒಂದಲ್ಲೊಂದು ವಿಚಾರದಲ್ಲಿ ಸದ್ದು ಸುದ್ದಿ ಮಾಡುತ್ತಲೆ ಇರುವ ರಾಬರ್ಟ್ ಚಿತ್ರದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಹೌದು, ರಾಬರ್ಟ್ ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ಸಿನಿಮಾದಿಂದ ಯಾವುದೆ ಮಾಹಿತಿ ಬಹಿರಂಗವಾಗಬಾರದು ಎನ್ನುವ ಕಾರಣಕ್ಕೆ ಮೊಬೈಲ್ ಕೂಡ ಬಳಸಬಾರದು ಎಂದು ಬ್ಯಾನ್ ಮಾಡುವ ಮೂಲಕ ಸಾಕಷ್ಟು ಎಚ್ಚರಿಕೆಯಿಂದ ಚಿತ್ರೀಕರಣ ಮಾಡಲಾಗುತ್ತಿದೆ. ಆದ್ರೂ ಸಹ ಒಂದಿಷ್ಟು ವಿಚಾರಗಳು ಲೀಕ್ ಆಗುತ್ತವೆ. ಮುಂದೆ ಓದಿ.

ರಾಬರ್ಟ್ ನಲ್ಲಿ ವಿನೋದ್

ರಾಬರ್ಟ್ ನಲ್ಲಿ ವಿನೋದ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಕಾಣಸಿಕೊಳ್ಳುವುದು ಹೊಸದೇನಲ್ಲ. ಈ ಮೊದಲ 'ಯಜಮಾನ' ಚಿತ್ರದಲ್ಲು ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕು ಮೊದಲು 'ನವಗ್ರಹ' ಸಿನಿಮಾದಲ್ಲಿ ದರ್ಶನ್ ಜೊತೆ ತೆರೆಹಂಚಿಕೊಂಡಿದ್ದರು. ಈಗ ಮೂರನೆ ಬಾರಿ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷ ಪಾತ್ರದಲ್ಲಿ ವಿನೋದ್

ವಿಶೇಷ ಪಾತ್ರದಲ್ಲಿ ವಿನೋದ್

ರಾಬರ್ಟ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಪಾತ್ರದ ಬಗ್ಗೆ ಇನ್ನು ಬಹಿರಂಗಗೊಂಡಿಲ್ಲ. ಆದ್ರೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೆ ವಿನೋದ್ ಭಾಗದ ಚಿತ್ರೀಕರಣ ಕೂಡ ಬಹುತೇಕ ಮುಗಿದಿದೆಯಂತೆ. ದರ್ಶನ್ ಮತ್ತು ವಿನೋದ್ ಇಬ್ಬರು ಉತ್ತಮ ಸ್ನೇಹಿತರು.

ರಾಬರ್ಟ್ ಗೆ ಸಿಕ್ಕಿಲ್ಲ ನಾಯಕಿ

ರಾಬರ್ಟ್ ಗೆ ಸಿಕ್ಕಿಲ್ಲ ನಾಯಕಿ

ಕುತೂಹಲ ಮೂಡಿಸಿರುವ ವಿಚಾರ ಅಂದ್ರೆ ರಾಬರ್ಟ್ ಚಿತ್ರಕ್ಕೆ ಇನ್ನು ನಾಯಕಿ ಸಿಕ್ಕಿಲ್ಲ. ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಮಣಿಯರ ಹೆಸರುಗಳು ದರ್ಶನ್ ಚಿತ್ರಕ್ಕೆ ಕೇಳಿ ಬರುತ್ತಿವೆ. ಆದ್ರೆ ಇದುವರೆಗೂ ಯಾವ ನಟಿಯ ಹೆಸರು ಫೈನಲ್ ಆಗಿಲ್ಲ. ಆದ್ರೆ ದರ್ಶನ್ ಜೊತೆ ಕನ್ನಡದ ನಟಿ ಇರ್ತಾರಾ ಅಥವಾ ಪರಭಾಷ ನಟಿ ರೋಮ್ಯಾನ್ಸ್ ಮಾಡ್ತಾರಾ ಎನ್ನುವುದು ಸಧ್ಯದಲ್ಲೇ ಗೊತ್ತಾಗಲಿದೆ.

ರಾಬರ್ಟ್ ಬಳಗದಲ್ಲಿ ಯಾರೆಲ್ಲ ಇದ್ದಾರೆ

ರಾಬರ್ಟ್ ಬಳಗದಲ್ಲಿ ಯಾರೆಲ್ಲ ಇದ್ದಾರೆ

ರಾಬರ್ಟ್ ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದೆ. ಪಾಂಡಿಚೇರಿಯಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ದರ್ಶನ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಬರ್ಟ್' ನಲ್ಲಿ ಸದ್ಯ ವಿಲನ್ ಆಗಿ ಖ್ಯಾತ ನಟ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಟಗರು ಚಿತ್ರದ ಕಾಕ್ರೋಚ್ ಖ್ಯಾತಿಯ ನಟ ಸುಧಿ ಮತ್ತು ನಟಿ ಪ್ರಣೀತಾ ಸದ್ಯ 'ರಾಬರ್ಟ್' ಬಳಗದಲ್ಲಿದ್ದಾರೆ. ಆದ್ರೆ ಇನ್ನು ಯಾರೆಲ್ಲ ಸೇರ್ಪಡೆಯಾಗಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ ಚಿತ್ರತಂಡ.

More from Filmibeat

English summary
Kannada actor vinod prabhakar playing important role in Robert kannada movie. Challenging star darshan starrer Robert movie directed by tharun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X