For Quick Alerts
  ALLOW NOTIFICATIONS  
  For Daily Alerts

  ಅಪ್ಪು ಬಗ್ಗೆ ದರ್ಶನ್‌ಗೆ ಅಪಾರ ಗೌರವವಿದೆ, ಫ್ಯಾಮಿಲಿಯಲ್ಲಿ ಫ್ಯಾನ್ ವಾರ್ ಬೇಡ: ವಿನೋದ್ ಪ್ರಭಾಕರ್!

  |

  ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿ ಎಂದರೆ ನಟ ದರ್ಶನ್ ವಿರುದ್ಧ ಪುನೀತ್

  ರಾಜ್‌ಕುಮಾರ್ ಅಭಿಮಾನಿಗಳು ಕಿಡಿಕಾರುತ್ತಾ ಇರುವುದು. ನಟ ದರ್ಶನ್ ಪುನೀತ್ ರಾಜ್‌ಕುಮಾರ್ ಬಗ್ಗೆ ನೀಡಿದ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳುವಂತೆ ಅಪ್ಪು ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.

  'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಅಂದವರು ಈ ಸ್ಟೋರಿ ನೋಡಿ!'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಅಂದವರು ಈ ಸ್ಟೋರಿ ನೋಡಿ!

  ಇದು ದಿನೇ ದಿನೇ ಹೆಚ್ಚುತ್ತಲೇ ಇದೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ದರ್ಶನ್ ಕ್ಷಮೆ ಕೇಳದೆ ಇದ್ದರೆ, ಕ್ರಾಂತಿ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.

  ಈಗ ಈ ವಿಚಾರಕ್ಕೆ ನಟ ವಿನೋದ್ ಪ್ರಭಾಕರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈಗ ನಡೆಯುತ್ತಾ ಇರುವ ಬೆಳವಣಿಗೆ ಉತ್ತಮವಲ್ಲ ಎಂದು ಹೇಳಿದ್ದಾರೆ. ಜೊತೆಗೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ವಿಡಿಯೋ ಮಾಡುವ ಮೂಲಕ ಈ ಬೆಳವಣಿಗೆಯ ಬಗ್ಗೆ ಮಾತನಾಡಿದ್ದಾರೆ.

  ದರ್ಶನ್, ಪುನೀತ್ ಬಗ್ಗೆ ವಿನೋದ್ ಪ್ರಭಾಕರ್ ಮಾತು!

  ದರ್ಶನ್, ಪುನೀತ್ ಬಗ್ಗೆ ವಿನೋದ್ ಪ್ರಭಾಕರ್ ಮಾತು!

  ನಟ ವಿನೋದ್ ಪ್ರಭಾಕರ್ ಸದ್ಯದ ಬೆಳವಣಿಗೆಯ ಬಗ್ಗೆ ಮಾತನಾಡಿದ್ದಾರೆ. "ನಿನ್ನೆಯಿಂದ ನಾನು ನೋಡುತ್ತಾ ಇದ್ದೇನೆ ಸೋಷಿಯಲ್ ಮೀಡಿಯದಲ್ಲಿ. ನೆಚ್ಚಿನ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಚಾಲೆಂಜ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವೆ ಏನು ಈ ಫ್ಯಾನ್ ವಾರ್ ಕ್ರಿಯೇಟ್ ಆಗ್ತಿದೆ. ನಾನು ಕೂಡ ದರ್ಶನ್ ಅವ್ರ ವಿಡಿಯೋವನ್ನು ಪದೇ, ಪದೇ ನೋಡುತ್ತಿದ್ದೇನೆ. ಇದರ ಬಗ್ಗೆ ನನ್ನ ಅನಿಸಿಕೆ ಏನು, ನನ್ನ ಅಭಿಪ್ರಾಯ ತಿಳಿಸಲು ಬಂದಿದ್ದೇನೆ." ಎಂದಿದ್ದಾರೆ.

  ಅಪ್ಪು ಮೇಲೆ ದರ್ಶನ್‌ಗೆ ಗೌರವ!

  ಅಪ್ಪು ಮೇಲೆ ದರ್ಶನ್‌ಗೆ ಗೌರವ!

  "ನಾನು ಕಂಡಂತೆ ದರ್ಶನ್ ಸರ್‌ಗೆ ಪುನೀತ್ ಸರ್ ಮೇಲೆ ಅಪಾರವಾದ ಗೌರವ, ಅಭಿಮಾನ, ಪ್ರೀತಿ ಇದೆ. ಯಾಕೆಂದರೆ ನಾವು ಎಷ್ಟೋ ಸಾರಿ ಸೇರಿದಾಗ ದರ್ಶನ್ ಸರ್ ನಾನು ಸೇರಿದಾಗ ಪುನೀತ್ ಸರ್ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಪುನೀತ್ ಸರ್ ನಿಧನ ಆದಾಗ ಅಲ್ಲಿಗೆ ಹೋಗಿದ್ದಾಗ, ಆ ಟೈಮ್‌ನಲ್ಲಿ ಅವರ ಒಡನಾಟ ನೆನೆದು, ತುಂಬಾನೆ ಕಣ್ಣೀರು ಹಾಕಿದ್ದರು. ಆಮೇಲೆ ದರ್ಶನ್ ಸರ್ ನಾನು ತುಂಬಾ ಸಮಯ ಅಲ್ಲಿ ಇದ್ದೆವು. ನಾವೆಲ್ಲರೂ ವಿಪರೀತ ಅತ್ತೆವು, ದರ್ಶನ್ ಸರ್ ಕೂಡ ಅಪ್ಪು ಅವ್ರನ್ನ ನೆನೆದು ಎಷ್ಟು ಅತ್ತಿದ್ದಾರೆ ಅಂತ ನನಗೆ ಗೊತ್ತಿದೆ."- ವಿನೋದ್ ಪ್ರಭಾಕರ್.

  ಫ್ಯಾನ್ಸ್ ವಾರ್ ಬೇಡ!

  ಫ್ಯಾನ್ಸ್ ವಾರ್ ಬೇಡ!

  "ಇವತ್ತು ಫ್ಯಾನ್ಸ್ ವಾರ್ ನಡೀತಿದೆ. ಡಿ ಬಾಸ್ ಸೋಲ್ಡ್‌ಜರ್ಸ್ ಅನ್ ಲೈನ್ ಪೇಜಲ್ಲಿ ಏನೋ ಕೆಟ್ಟದಾಗಿ ಹಾಕಿದ್ದಾರಂತೆ. ಅವ್ರ ಬಳಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈಗ ನೀವು ನಿಮ್ಮ ಹೆಸರಲ್ಲಿ, ನಿಮ್ಮ ಫೋಟೋ ಹಾಕಿಕೊಂಡು ಮಾಡುತ್ತಿದ್ದೀರಿ ಎಂದರೆ ಅದು ಯಾರ ಗಮನಕ್ಕು ಬರುವುದಿಲ್ಲ. ನೀವು ದರ್ಶನ್ ಸರ್ ಅವ್ರನ್ನ ರೆಪ್ರೆಸೆಂಟ್ ಮಾಡುತ್ತಿದ್ದೀದ್ದೀರಿ ಹಾಗಾಗಿ ನೀವು ಏನೆ ಮಾಡಿದರು ಅದು ನೇರವಾಗಿ ದರ್ಶನ್ ಸರ್‌ಗೆ ಧಕ್ಕೆ ಉಂಟಾಗುತ್ತದೆ. ದಯವಿಟ್ಟು ಇದು ಬೇಡ. ಕನ್ನಡ ಇಂಡಸ್ಟ್ರಿ ಒಂದು ಫ್ಯಾಮಿಲಿ ಇದ್ದ ಹಾಗೆ. ದಯವಿಟ್ಟು ಈ ಫ್ಯಾಮಿಲಿಯಲ್ಲಿ ಫ್ಯಾನ್ ವಾರ್ ಬೇಡ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ ವಿನೋದ್ ಪ್ರಭಾಕರ್.

  ದರ್ಶನ್ ಹೇಲಿದ್ದೇನು?

  ದರ್ಶನ್ ಹೇಲಿದ್ದೇನು?

  ಹೀಗೆ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ, ದರ್ಶನ್ ಪುನೀತ್ ರಾಜ್‌ಕುಮರ್ ಅಭಿಮಾನಿಗಳ ಬಗ್ಗೆಯೂ ಮಾತನಾಡಿದ್ದಾರೆ. "ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ, ಫ್ಯಾನ್ಸ್‌ಗಳು ಅಂದ್ರೆ ಹೇಗೆ ಎಂದು. ಪುನೀತ್ ರಾಜ್‌ಕುಮಾರ್ ಒಬ್ಬರದ್ದೇ ಸಾಕು. ಆದ್ರೆ ನಾನು ಬದುಕಿದ್ದಾಗಲೇ ಫ್ಯಾನ್ಸ್‌ಗಳು ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು". ಎಂದು ದರ್ಶನ್ ಹೇಳಿದ್ದಾರೆ. ಇಲ್ಲಿ ಅಭಿಮಾನಿಗಳ ಶಕ್ತಿ ಎಂಥದ್ದು ಎನ್ನುವುದರ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

  English summary
  Vinod Prabhakar Reveal Darshan Puneeth Rajkumar Friendship And Says Stop fan War, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X