For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಸ್ಥಿತಿ ಹೇಗಿದೆ? ವಿನೋದ್ ಪ್ರಭಾಕರ್ ನೀಡಿದ ಮಾಹಿತಿ

  |
  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್, ದೇವರಾಜ್, ಪ್ರಜ್ವಲ್..! | Filmibeat Kannada

  ನಟ ದರ್ಶನ್ ಕಾರು ಅಪಘಾತವಾಗಿದೆ. ಮೈಸೂರಿನ ಹೊರ ವಲಯದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯ ಸಮಯದಲ್ಲಿ ಅವಘಾತ ನಡೆದಿದೆ.

  ದರ್ಶನ್ ಸ್ಥಿತಿ ಈಗ ಹೇಗಿದೆ ಎಂದು ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಈಗಾಗಲೇ ಆಸ್ಪತ್ರೆಯ ಬಳಿ ದರ್ಶನ್ ಕುಟುಂಬ ಹಾಗೂ ದೇವರಾಜ್ ಕುಟುಂಬ ಬಂದು ಆರೋಗ್ಯ ವಿಚಾರಿಸುತ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಮಗ ವಿನೀಶ್ ಸುದ್ದಿ ತಿಳಿದ ತಕ್ಷಣ ಆಸ್ಪತ್ರಗೆ ಆಗಮಿಸಿದ್ದಾರೆ.

  ಮೈಸೂರಿನಲ್ಲಿ ನಟ ದರ್ಶನ್ ತೂಗುದೀಪ ಕಾರು ಅಪಘಾತ

  ಅಂದಹಾಗೆ, ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ಅವರ ಸ್ನೇಹಿತ ಹಾಗೂ ನಟ ವಿನೋದ್ ಪ್ರಭಾಕರ್ ಇದೀಗ ಮಾತನಾಡಿದ್ದಾರೆ. ಮುಂದೆ ಓದಿ...

  ವಿನೋದ್ ಪ್ರಭಾಕರ್ ಮಾಹಿತಿ

  ವಿನೋದ್ ಪ್ರಭಾಕರ್ ಮಾಹಿತಿ

  ''ಇಂದು ಬೆಳಗ್ಗೆಯೇ ನಾನು ಶಾಕಿಂಗ್ ಸುದ್ದಿ ಕೇಳಿ ಬಿಟ್ಟೆ. ನಮ್ಮ ಫ್ರೆಂಡ್ ಒಬ್ಬರು ಫೋನ್ ಮಾಡಿ ದರ್ಶನ್ ಗೆ ಅಪಘಾತವಾಗಿದೆ ಎಂಬ ವಿಷಯವನ್ನು ತಿಳಿಸಿದರು. ನನಗೆ ಆ ವಿಷಯ ಕೇಳಿದಾಗ ಆತಂಕವಾಯ್ತು. ಅವಘಾತದಲ್ಲಿ ದರ್ಶನ್ ಕೈಗೆ ಪೆಟ್ಟಾಗಿದೆ ಅಂತ ಹೇಳಿದರು.'' - ವಿನೋದ್ ಪ್ರಭಾಕರ್, ನಟ

  ಮೈಸೂರಿನಲ್ಲಿ ಕಾರು ಅಪಘಾತ, 'ದಾಸ' ದರ್ಶನ್ ಗೆ ಕೈ ಮುರಿತ ಮೈಸೂರಿನಲ್ಲಿ ಕಾರು ಅಪಘಾತ, 'ದಾಸ' ದರ್ಶನ್ ಗೆ ಕೈ ಮುರಿತ

  ನಾನು ಕಾರ್ ನಲ್ಲಿ ಹೋಗಬೇಕಿತ್ತು

  ನಾನು ಕಾರ್ ನಲ್ಲಿ ಹೋಗಬೇಕಿತ್ತು

  ''ನಾನು ಕೂಡ ಆಸ್ಪತ್ರೆ ಬಳಿ ಹೋಗುತ್ತಿದ್ದೇನೆ. ಎಲ್ಲರಿಗೆ ಕರೆ ಮಾಡುತ್ತಿದ್ದೇನೆ ಯಾರು ಈ ಕ್ಷಣ ಫೋನ್ ತೆಗೆಯುತ್ತಿಲ್ಲ. ನಾನು ಕೂಡ ದರ್ಶನ್ ಜೊತೆಗೆ ಕಾರ್ ನಲ್ಲಿ ಹೋಗಬೇಕಿತ್ತು. ಆದರೆ, ಶೂಟಿಂಗ್ ಇರುವ ಕಾರಣ ಹೋಗುವುದಕ್ಕೆ ಸಾಧ್ಯ ಆಗಲಿಲ್ಲ. ಇಂದು ನಮ್ಮ ಚಿತ್ರತಂಡಕ್ಕೆ ಹೇಳಿ ನಾನು ಮೈಸೂರಿಗೆ ಹೋಗುತ್ತಿದ್ದೇನೆ'' - ವಿನೋದ್ ಪ್ರಭಾಕರ್, ನಟ

  ದರ್ಶನ್ ಕಾರು ಕಾಣುತ್ತಿಲ್ಲ

  ದರ್ಶನ್ ಕಾರು ಕಾಣುತ್ತಿಲ್ಲ

  ಅಪಘಾತವಾದ ಸ್ಥಳದಿಂದ ದರ್ಶನ್ ಆಡಿ ಕ್ಯೂ 7 ಕಾರು ನಾಪತ್ತೆ ಆಗಿದೆ. ದರ್ಶನ್ ಕಾರನ್ನು ನೋಡಿದರೆ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ, ಜೊತೆಗೆ ಅಭಿಮಾನಿಗಳ ಆತಂಕ ಇನ್ನಷ್ಟು ಜಾಸ್ತಿ ಆಗುತ್ತದೆ ಎನ್ನುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆಯಂತೆ.

  ಆಸ್ಪತ್ರೆ ಮೂಲಗಳು ಮಾಹಿತಿ

  ಆಸ್ಪತ್ರೆ ಮೂಲಗಳು ಮಾಹಿತಿ

  ದರ್ಶನ್ ಅವರ ಕೈ ಮುರಿದ ಪರಿಣಾಮ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ದೇವರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಪ್ರಜ್ವಲ್ ದೇವರಾಜ್ ಅವರಿಗೆ ಕುತ್ತಿಗೆ ಭಾಗಕ್ಕೆ ಪೆಟ್ಟಾಗಿದೆ. ಈಗಾಗಲೇ ಆಸ್ಪತ್ರೆಗೆ ಎರಡೂ ಕುಟುಂಬಗಳು ಬಂದಿದೆ.

  ಘಟನೆ ದಾಖಲು ಆಗಿಲ್ಲ

  ಘಟನೆ ದಾಖಲು ಆಗಿಲ್ಲ

  ದರ್ಶನ್ ಕಾರು ಅಪಘಾತವಾಗಿರುವ ಘಟನೆ ಇನ್ನು ಕೂಡ ವಿ ವಿ ಪುರಂ ಪೋಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಸದ್ಯ ದರ್ಶನ್ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಂತರ ಬೆಂಗಳೂರಿಗೆ ಅವರನ್ನು ಕರೆದುಕೊಂಡು ಹೋಗಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.

  English summary
  Kannada actor Vinod Prabhakar spoke about Darshan condition. Darshan along with actors Devraj and Prajwal Devraj met with an accident near Mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X