ಗಾಯಗೊಂಡಿದ್ದರು ಶೂಟಿಂಗ್ ಮುಗಿಸಿಕೊಟ್ಟ ವಿನೋದ್ ಪ್ರಭಾಕರ್

ಸ್ಯಾಂಡಲ್ ವುಡ್ ನಟ ವಿನೋದ್ ಪ್ರಭಾಕರ್ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ. ವಿನೋದ್ ಅಭಿನಯದ 'ವರದ' ಚಿತ್ರದ ಸಾಹಸ ದೃಶ್ಯ ಚಿತ್ರೀಕರಣ ವೇಳೆ ಈ ಘಟನೆ ಸಂಭವಿಸಿದೆ. ವಿನೋದ್ ಪ್ರಭಾಕರ್ ಎಡಗಾಲಿಗೆ ಪೆಟ್ಟು ಬಿದ್ದಿದೆ. ಮೂಳೆ ಕ್ರ್ಯಾಕ್ ಆಗಿರುವ ಕಾರಣ ಬ್ಯಾಂಡೇಜ್ ಮಾಡಲಾಗಿದೆ.

ಚಿಕಿತ್ಸೆ ಪಡೆದುಕೊಂಡಿರುವ ವಿನೋದ್ ಪ್ರಭಾಕರ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಕೆಲವು ದಿನಗಳು ರೆಸ್ಟ್ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರಂತೆ. 'ರಗಡ್' ಚಿತ್ರದ ರಿಲೀಸ್ ನಂತರ ವಿನೋದ್ ಪ್ರಭಾಕರ್ 'ವರದ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಅಂದ್ಹಾಗೆ, ವರದ ಚಿತ್ರದ ಚಿತ್ರೀಕರಣ ಬೆಂಗಳೂರಿನ ಟಿಂಬರ್ ಫ್ಯಾಕ್ಟರಿಯಲ್ಲಿ ನಡೆಯುತ್ತಿತ್ತು. ಸಾಹಸ ದೃಶ್ಯ ಸರೆಹಿಡಿಯುವಾಗ ಜಂಪ್ ಮಾಡಿದ ವಿನೋದ್ ಕಾಲು ಟ್ವಿಸ್ಟ್ ಆಗಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಮಾಗಡಿ ರೋಡಿನಲ್ಲಿರುವ ಆರ್ಥೋಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Vinod Prabhakar taking rest after injured in shooting

ಕಾಲು ಮುರಿದುಕೊಂಡು ನೋವಿನಲ್ಲಿದ್ದರು ವಿನೋದ್ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರದ ಟಾಕಿ ಪೋಷನ್ ಮುಗಿಸಿ ವಾಪಸ್ ಆಗಿದ್ದಾರೆ. ನಿರ್ಮಾಪಕರಿಗೆ ನಷ್ಟವಾಗಬಾರದು ಎನ್ನುವ ಕಾರಣಕ್ಕೆ ವಿನೋದ್ ತನ್ನ ಕೆಲಸವನ್ನು ಮಾಡಿ ಮುಗಿಸಿ ಬಂದಿದ್ದಾರೆ.

More from Filmibeat

English summary
Kannada actor Vinod Prabhakar taking rest after injured in shooting. he injured in Varada movie Shooting spot. Doctor suggest him to take rest to few days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X