'ಯಜಮಾನ' ದರ್ಶನ್ ಜೊತೆ ಕಾಣಿಸಿದ ಗೆಳೆಯ ವಿನೋದ್ ಪ್ರಭಾಕರ್
Recommended Video

ನಟ ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಇಬ್ಬರು ಒಳ್ಳೆಯ ಗೆಳೆಯರು. ಖ್ಯಾತ ಖಳ ನಾಯಕರ ಪುತ್ರರಾದ ಈ ಇಬ್ಬರು ನಾಯಕ ನಟನಾಗಿ ಸ್ಥಾನ ಪಡೆದಿದ್ದಾರೆ. ವಿನೋದ್ ಪ್ರಭಾಕರ್ ಅವರ ಪ್ರತಿ ಸಿನಿಮಾಗೆ ದರ್ಶನ್ ಸಾಥ್ ನೀಡುತ್ತಿದ್ದಾರೆ.
ಇತ್ತೀಚಿಗಷ್ಟೆ 'ಯಜಮಾನ' ಸಿನಿಮಾದ ಶೂಟಿಂಗ್ ಸೆಟ್ ಗೆ ವಿನೋದ್ ಪ್ರಭಾಕರ್ ಭೇಟಿ ನೀಡಿದ್ದರು. ಗೆಳೆಯ ದರ್ಶನ್ ಅವರ ಚಿತ್ರೀಕರಣವನ್ನು ನೋಡಿ ಕೆಲಕಾಲ ಅವರ ಜೊತೆಗೆ ಮಾತನಾಡಿದರು. ವಿಶೇಷ ಅಂದರೆ ಈ ಚಿತ್ರದ ಒಂದು ಹಾಡಿನಲ್ಲಿ ವಿನೋದ್ ಪ್ರಭಾಕರ್ ಕೂಡ ಇದ್ದಾರೆ. ಅಂದಹಾಗೆ, ವಿನೋದ್ ಪ್ರಭಾಕರ್ 'ಯಜಮಾನ' ಚಿತ್ರದ ಶೂಟಿಂಗ್ ಸೆಟ್ ಗೆ ಬಂದ ಫೋಟೋಗಳನ್ನು ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ಇತ್ತೀಚಿಗಷ್ಟೆ ವಿನೋದ್ ಪ್ರಭಾಕರ್ ಅವರ 'ಫೈಟರ್' ಸಿನಿಮಾವನ್ನು ಲಾಂಚ್ ಮಾಡಿದ್ದರು. ಈ ಚಿತ್ರ ಮಾತ್ರವಲ್ಲದೆ ವಿನೋದ್ ಪ್ರಭಾಕರ್ ಅವರ ಅನೇಕ ಸಿನಿಮಾದ ಹಿಂದೆ ದರ್ಶನ್ ನಿಂತಿದ್ದಾರೆ.

ಅಂದಹಾಗೆ, ವಿನೋದ್ ಪ್ರಭಾಕರ್ ಭೇಟಿ ನೀಡಿದ್ದ ವೇಳೆ 'ಯಜಮಾನ' ಸಿನಿಮಾದ ನಿರ್ಮಾಪಕರಾದ ಬಿ.ಸುರೇಶ್, ಶೈಲಜಾ ನಾಗ್ ಹಾಗೂ 'ಫೈಟರ್' ಚಿತ್ರದ ನಿರ್ದೇಶಕ ನೂತನ್ ಉಮೇಶ್ ಸಹ ಇದ್ದರು.


Click it and Unblock the Notifications











