ಕಾಲಿಗೆ ಪೆಟ್ಟಾದರು ವರ್ಕೌಟ್ ಬಿಡದ ಮರಿ ಟೈಗರ್

ಸ್ಯಾಂಡಲ್ ವುಡ್ ನ ಮರಿ ಟೈಗರ್ ವಿನೋದ್ ಪ್ರಭಾಕರ್ ಇತ್ತೀಚಿಗಷ್ಟೆ ಚಿತ್ರೀಕರಣ ವೇಳೆ ಗಾಯಗೊಂಡಿದ್ದರು. ವಿನೋದ್ ಪ್ರಭಾಕರ್ ಅಭಿನಯದ 'ವರದ' ಚಿತ್ರದ ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಜಂಪ್ ಮಾಡುವಾಗ ಆಯತಪ್ಪಿ ಬಿದ್ದು ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದರು.

ಎಡಗಾಲಿಗೆ ಬಲವಾದ ಏಟು ಬಿದ್ದ ಕಾರಣ ಬ್ಯಾಂಡೇಜ್ ಮಾಡಲಾಗಿದೆ. ಅಲ್ಲದೆ 5 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಮರಿ ಟೈಗರ್ ಗೆ ಸೂಚಿಸಿದ್ದಾರೆ. ಆದ್ರೆ ವಿನೋದ್ ಪ್ರಭಾಕರ್ ಕಾಲು ನೋವನ್ನು ಲೆಕ್ಕಿಸದೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ.

ಬ್ಯಾಂಡೇಜ್ ಹಾಕಿದ್ದರು ಅದೇ ಕಾಲನ್ನು ಎಳೆದುಕೊಳ್ಳುತ್ತಾ ಜಿಮ್ ಗೆ ಹೋಗಿ ದೇಹ ಹುರಿಗೊಳಿಸುವಲ್ಲಿ ಬ್ಯುಸಿಯಾಗಿದ್ದಾರೆ. ಡೆಡಿಕೇಟಿವ್ ನಟ ಅಂತಾನೆ ಖ್ಯಾತಿಗಳಿಸರುವ ವಿನೋದ್ ಈಗ ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ವಿನೋದ್ ಅವರಿಗೆ ಸ್ನೇಹಿತರು ಸಹಾಯ ಮಾಡುತ್ತಿದ್ದಾರೆ.

Vinod Prabhakar workout in gym with injured leg

ವಿನೋದ್ ಪ್ರಭಾಕರ್ ಅವರಿಗೆ ಸಿನಿಮಾ ಪ್ರೀತಿ ಎಷ್ಟಿದೆ ಎಂದರೆ ಕಾಲಿಗೆ ಪೆಟ್ಟಾಗಿದ್ದರು ಸಹ ಚಿತ್ರದ ಟಾಕಿ ಪೋಷನ್ ನಲ್ಲಿ ಭಾಗಿಯಾಗಿ ತಮ್ಮ ಕೆಲಸ ಮಾಡಿ ಮುಗಿಸಿಕೊಟ್ಟಿದ್ದರು. ಆದ್ರೀಗ ಮುಂದಿನ 'ವರದ' ಚಿತ್ರಕ್ಕಾಗಿ ಕಾಲಿಗೆ ಪೆಟ್ಟಾದರು ವರ್ಕೌಟ್ ಮಾಡುವ ಸಾಹಸ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಚಿತ್ರ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಮರಿ ಟೈಗರ್ 8 ಪ್ಯಾಕ್ ನಲ್ಲಿ ಮಿಂಚಿದ್ದರು. ಸದ್ಯ 'ವರದ' ಚಿತ್ರದಲ್ಲಿ ಬ್ಯುಸಿ ಇರುವ ವಿನೋದ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.

More from Filmibeat

English summary
Kannada actor Vinod Prabhakar workout in gym with injured leg. Vinod Prabhakar injured in 'Varada' movie shooting spot at Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X