ದರ್ಶನ್ D-25 ಬೆಳ್ಳಿ ಪರ್ವದ ಲಿಸ್ಟ್‌ನಲ್ಲಿ ವಿನೋದ್ ರಾಜ್ ಬದಲು ವಿನೋದ್ ರಾಜ್‌ಕುಮಾರ್ ಅಂತ ಪ್ರಕಟ; ಪೋಸ್ಟರ್ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾದ ಸೂಪರ್ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಸಿನಿಮಾದ ಸಕ್ಸಸ್ ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಅಭಿನಯ ಮೆಚ್ಚಿಕೊಂಡಿರುವ ಅಭಿಮಾನಿಗಳು ಈ ಸಿನಿಮಾ ನೋಡಿ ಹೊಗಳಿಕೊಂಡಾಡುತ್ತಿದ್ದಾರೆ. ದರ್ಶನ್ ಕೂಡ ಹೋದ ಕಾರ್ಯಕ್ರಮಗಳಲ್ಲೆಲ್ಲಾ ರೈತರ ಕಾಳಜಿ ಬಗ್ಗೆನೇ ಮಾತಾಡುತ್ತಿದ್ದಾರೆ.
ರೈತರಿಂದ ಹಿಡಿದು ದರ್ಶನ್ ಅಭಿಮಾನಿಗಳೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದು ಸನ್ಮಾನ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಡಿ ಬಾಸ್ ಫ್ಯಾನ್ಸ್‌ಗೆ ಎರಡೆರಡು ಸಂಭ್ರಮ ಒಟ್ಟೊಟ್ಟಿಗೆ ಬಂದಿದೆ. ಒಂದ್ಕಡೆ ಇದೇ ಫೆಬ್ರವರಿ 16ಕ್ಕೆ ದರ್ಶನ್ ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗಿವೆ. ಹೀಗಾಗಿ ಶ್ರೀರಂಗಪಟ್ಟಣ್ಣದಲ್ಲಿ ಮತ್ತೊಂದು ಸಂಭ್ರಮ ನಡೆಯಲಿದೆ.

ಈಗಾಗಲೇ ಕನ್ನಡ ಚಿತ್ರರಂಗದ ತಾರೆಯರು ದರ್ಶನ್ 25 ವರ್ಷದ ಜರ್ನಿಯನ್ನು ಸೆಲೆಬ್ರೆಟ್ ಮಾಡುವುದಕ್ಕೆ ಆಗಮಿಸುತ್ತಿರುವುದಾಗಿ ವಿಡಿಯೋಗಳ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾಗೇ ಅಭಿಮಾನಿಗಳು ಡಿ 25 ಬೆಳ್ಳಿ ವರ್ಷಕ್ಕೆ ಬರುವ ತಾರೆಯರ ಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಹೆಸರು ವಿನೋದ್ ರಾಜ್ ಅವರದ್ದು ಇದೆ. ಆದರೆ, ಈ ಹೆಸರಲ್ಲಿ ಇನ್ನೊಂದು ಹೆಸರು ಸೇರಿಕೊಂಡಿದ್ದು, ಚರ್ಚೆಯಾಗುತ್ತಿದೆ.
ಡಿ 25 ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಪಟ್ಟಿಯನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಅದರಲ್ಲಿ ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ಧನ್ವೀರ್, ಚಿಕ್ಕಣ್ಣ, ಝೈದ್ ಖಾನ್, ಯಶಸ್ ಸೂರ್ಯ, ಶಿವರಾಜ್ ಕೆ ಆರ್ ಪೇಟೆ, ಸೂರಜ್ ಹಾಗೂ ವಿನೋದ್ ರಾಜ್ ಫೋಟೊಗಳನ್ನು ಹಾಕಿ ಶ್ರೀರಂಗಪಟ್ಟಕ್ಕೆ ಆಗಮಿಸುತ್ತಾರೆಂದು ಹೇಳಲಾಗಿದೆ.

ಆದರೆ, ನೆಟ್ಟಿಗರು ಈ ಪೋಸ್ಟರ್‌ನಲ್ಲೊಂದು ಅಂಶಗಳನ್ನು ಗಮನಿಸಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅದೇನಂದ್ರೆ, ಅತಿಥಿಗಳ ಪಟ್ಟಿಯಲ್ಲಿ ಮೊದಲ ಹೆಸರೇ ವಿನೋದ್ ರಾಜ್ ಅವರದ್ದು ಇದೆ. ಆದರೆ, ಇಲ್ಲಿ ವಿನೋದ್ ರಾಜ್ ಬದಲು ವಿನೋದ್ ರಾಜ್‌ಕುಮಾರ್ ಅಂತ ಪ್ರಕಟಿಸಲಾಗಿದೆ. ಈ ಬಗ್ಗೆ ನೆಟ್ಟಿಗರು ಜೋರಾಗಿಯೇ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಅಂದ್ಹಾಗೆ, ದರ್ಶನ್ 25 ವರ್ಷಗಳ ಸಿನಿ ಜರ್ನಿ ಸಮಾರಂಭಕ್ಕೆ ನೀಡಿರುವ ಅಧಿಕೃತ ಆಹ್ವಾನ ಪತ್ರಿಕೆಯೇ? ಅಥವಾ ಇದು ಅಭಿಮಾನಿಗಳೇ ಮಾಡಿದ ಆಹ್ವಾನ ಪತ್ರಿಕೆಯೋ ಅನ್ನೋ ಇನ್ನು ಸ್ಪಷ್ಟವಾಗಿಲ್ಲ. ಆದರೆ, ಟ್ವಿಟರ್(ಎಕ್ಸ್) ಹಾಗೂ ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ಇಂತಹದ್ದೊಂದು ಪೋಸ್ಟ್ ಅಂತೂ ಜೋರಾಗಿಯೇ ಹರಿದಾಡುತ್ತಿದೆ. ಈ ಬಗ್ಗೆ ಚರ್ಚೆ ಕೂಡ ಆಗುತ್ತಿದೆ.
ಏನೇ ಇದ್ರೂ, ದರ್ಶನ್ 47ನೇ ಹುಟ್ಟುಹಬ್ಬದ ಆಚರಿಸಿಕೊಂಡ ಒಂದು ದಿನದ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಸ್ಯಾಂಡಲ್‌ವುಡ್‌ನ ಗಣ್ಯರು ಈ ಕಾರ್ಯಕ್ರಮದಲ್ಲಿ ಆಗಮಿಸಲಿದ್ದಾರೆ. ಹಾಗೇ ವಿ.ಹರಿಕೃಷ್ಣ ಸಂಗೀತ ರಸಸಂಜೆ ಕಾರ್ಯಕ್ರಮ ಕೂಡ ಇರುತ್ತೆ. ಈಗಾಗಲೇ ಚಿಕ್ಕಣ್ಣ, ಸತೀಶ್ ನೀನಾಸಂ ಹಾಗೂ ಶಿವರಾಜ್ ಕೆ ಆರ್ ಪೇಟೆ ಕಾರ್ಯಕ್ರಮಕ್ಕೆ ಬರುವುದಾಗಿ ಕನ್ಫರ್ಮ್ ಮಾಡಿದ್ದಾರೆ.


Click it and Unblock the Notifications











