ಅಮರಾವತಿ ಪೊಲೀಸ್ ಸ್ಟೇಷನ್ ಟೀಸರ್ ಬಿಡುಗಡೆ ಮಾಡಿದ ವಿನೋದ್ ರಾಜ್...!
ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳುತ್ತಾನೇ ಇರುತ್ತಾರೆ. ಆದರೂ ಸಿನಿಮಾ ಮೇಲೀನ ವ್ಯಾಮೋಹ ಅನೇಕರಿಗೆ ಕಡಿಮೆಯಾಗಲ್ಲ. ಇದಕ್ಕೆ ಮತ್ತೊಂದು ಉದಾಹರಣೆ "ಅಮರಾವತಿ ಪೊಲೀಸ್ ಸ್ಟೇಷನ್".
ಹೌದು, "ಅಮರಾವತಿ ಪೊಲೀಸ್ ಸ್ಟೇಷನ್"... 2022ರಲ್ಲಿ ಮುಹೂರ್ತ ಭಾಗ್ಯ ಕಂಡಿದ್ದ ಸಿನಿಮಾ. ಆ ಕಾಲದಲ್ಲಿ ಈ ಚಿತ್ರದ ನಾಯಕನ ಪಾತ್ರಕ್ಕೆ ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್ ಬಣ್ಣ ಹಚ್ಚಿದ್ದರು. ಮಗನ ಸಿನಿಮಾಕ್ಕೆ ಹಾರೈಸಲು ನಟ ಜಗ್ಗೇಶ್ ಅವರು ಆಗಮಿಸಿದ್ದರು. ಆರಂಭದ ದೃಶ್ಯಕ್ಕೆ ನಟ ಜಗ್ಗೇಶ್ ಅವರು ಕ್ಲ್ಯಾಪ್ ಮಾಡಿ, ಚಿತ್ರರಂಗಕ್ಕೆ ಶುಭ ಕೋರಿದ್ದರು.

ನಿರ್ದೇಶಕ ಪುನೀತ್ ಅವರು ಕಳೆದ 3 ವರ್ಷಗಳಿಂದ ಈ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ. ಒಂದು ಇಂಟರೆಸ್ಟಿಂಗ್ ವಿಷಯವನ್ನು ಇಟ್ಟುಕೊಂಡು ಅವರು ಈ ಚಿತ್ರವನ್ನು ಮಾಡುತ್ತಿದ್ದಾರೆ. ಈಗ ಟೆಸ್ಟ್ ಮ್ಯಾಚ್ ಥರ ಸಿನಿಮಾ ಮಾಡಿದರೆ ಯಾರೂ ನೋಡುವುದಿಲ್ಲ. ಕಥೆ ಕೇಳಿದ ಕೂಡಲೇ ಸಿನಿಮಾವನ್ನು ಮಾಡವಂತೆ ಇರಬೇಕು. ಈ ಸಿನಿಮಾದ ಕಥೆ ಆ ರೀತಿ ಇದೆ ಎಂದು ಖುದ್ದು ಗುರುರಾಜ್ ಜಗ್ಗೇಶ್ ಹೇಳಿದ್ದರು. ಚಿತ್ರತಂಡವನ್ನು ಬಾಯ್ತುಂಬ ಹೊಗಳಿದ್ದರು.
ಆದರೆ, ಆ ನಂತರ ಏನಾಯ್ತೋ.. ಗುರುರಾಜ್ ಜಗ್ಗೇಶ್ ಜಾಗಕ್ಕೆ ಧರ್ಮ ಕೀರ್ತಿರಾಜ್ ಬಂದರು. ಹಾಗಂಥ ಗುರುರಾಜ್ ಜಗ್ಗೇಶ್ ಚಿತ್ರದಲ್ಲಿ ಇಲ್ಲ ಎಂದಲ್ಲ. ಯಾಕೆಂದರೆ ಆರಂಭದಲ್ಲಿ ಗುರುರಾಜ್ ಜಗ್ಗೇಶ್ ಈ ಚಿತ್ರದ ನಾಯಕನಾಗಿದ್ದರು. ಈಗ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

ಉಳಿದಂತೆ ವೇದ್ವಿಕ ನಾಯಕಿ ಪಾತ್ರ ಮಾಡಿದ್ದಾರೆ. ಹಿರಿಯನಟಿ ಭವ್ಯ, ಧರ್ಮ, ಸಾಧುಕೋಕಿಲ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಉಳಿದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ರೋಣದ ಬಕ್ಕೇಶ್ ಅವರ ಸಂಗೀತ, ವಿ.ರಮೇಶ್ ಬಾಬು ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ, ವೆಂಕಿ ಯುವಿಡಿ ಅವರ ಸಂಕಲನ, ಆರ್ಯ ಶಿವು ಕರಗುಂದ ಅವರ ಸಂಭಾಷಣೆ ಈ ಚಿತ್ರಕ್ಕಿದೆ.
ಈಗಿನ ಕಾಲದಲ್ಲಿ ಏನೇನು ನಡೆಯುತ್ತಿದೆಯೋ ಅದನ್ನೇ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇನೆ. ಮೈಸೂರು, ಬೆಂಗಳೂರು, ಮೈಸೂರು, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಪ್ಲ್ಯಾನ್ ಇದೆ..' ಎಂದು ನಿರ್ದೇಶಕ ಪುನೀತ್ 2022 ರಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. 'ನಾವು ರೈತರು, ಇದೆಲ್ಲ ನಮಗೆ ಬೇಡಪ್ಪ..' ಅಂದೆ. ಈ ಸಿನಿಮಾದ ಕಥೆಯಲ್ಲಿ ರೈತರು, ರಾಜಕೀಯದವರು, ಪೋಲೀಸರ ಬಗ್ಗೆಯೂ ವಿಷಯ ಇದೆ. ಆನಂತರ ಈ ಸಿನಿಮಾದ ಕಥೆ ಕೇಳಿದ ಮೇಲೆ, ಇದನ್ನು ನಿರ್ಮಾಣ ಮಾಡಬೇಕು ಎನಿಸಿತು. ಜನರಿಗೆ ಒಂದು ನೀತಿಪಾಠ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇವೆ..' ಎಂದು ನಿರ್ಮಾಪಕರು ಆ ಕಾಲದಲ್ಲಿ ಹೇಳಿದ್ದರು. ಇದೆಲ್ಲದರ ಹೊರತಾಗಿ ಹಿರಿಯ ನಟಿ ಸುಧಾರಾಣಿ, ತಾರಾ, ನೀನಾಸಂ ಅಶ್ವತ್ಥ್, ಸಾಧು ಕೋಕಿಲ ಮುಂತಾದವರು ಈ ಚಿತ್ರದಲ್ಲಿದ್ದಾರೆ ಅನ್ನುವುದು ಸದ್ಯದ ನ್ಯೂಸು. ಹೀಗೆ ಕಾಲ ಕಾಲಕ್ಕೆ ಸದ್ದು ಮಾಡುತ್ತಾ ಬಂದ ಈ ಚಿತ್ರ ಎಲ್ಲವೂ ಅಂದುಕೊಂಡತೆ ಆದರೆ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.


Click it and Unblock the Notifications











