twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಭೀತಿ: ಹಳ್ಳಿ ಜನರ ನೆರವಿಗೆ ಧಾವಿಸಿದ ವಿನೋದ್ ರಾಜ್‌

    |

    ಕೊರೊನಾ ಭೀತಿ ಎಲ್ಲೆಡೆ ಆವರಿಸಿದೆ. ಅದರಲ್ಲಿಯೂ ನಗರಗಳನ್ನು ನಡುಗಿಸಿಬಿಟ್ಟಿದೆ ಈ ಕೊರೊನಾ ಮಹಮಾರಿ.

    ನಗರದಿಂದ ತಪ್ಪಿಸಿಕೊಂಡು ಹಳ್ಳಿಗೆ ಹೋದವರು, ಹಳ್ಳಿಗಳಲ್ಲೂ ಇದನ್ನು ಹಬ್ಬಿಸುವ ಭೀತಿ ಆರಂಭವಾಗಿದೆ. ಹಾಗಾಗಿ ಹಳ್ಳಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.

    ನಟ ವಿನೋದ್ ರಾಜ್‌ ಅವರು ಸಿನಿಮಾದಿಂದ ದೂರವಾಗಿ ತಾಯಿ ಲೀಲಾವತ ಅವರ ಜೊತೆ ಹಳ್ಳಿಯಲ್ಲಿ ಬದುಕುತ್ತಿರುವುದು ಹಲವರಿಗೆ ಗೊತ್ತಿರುವುದೇ, ಕೊರೊನಾ ಸಮಯದಲ್ಲಿ ತಮ್ಮ ಹಳ್ಳಿಯ ಸುರಕ್ಷತೆಗೆ ಅವರು ನೆರವಾಗಿದ್ದಾರೆ.

    ಸ್ವಚ್ಛತೆ, ನೈರ್ಮಲ್ಯ ಕೊರೊನಾ ತಡೆಯಬಲ್ಲದು

    ಸ್ವಚ್ಛತೆ, ನೈರ್ಮಲ್ಯ ಕೊರೊನಾ ತಡೆಯಬಲ್ಲದು

    ಕೊರೊನಾ ವೈರಸ್ ಬರದಂತೆ ತಡೆಯುವ ಏಕೈಕ ಉಪಾಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದು ಮತ್ತು ಸ್ವತಃ ನಾವು ಸ್ವಚ್ಛವಾಗಿರುವುದು, ಇದೇ ಸೂತ್ರವನ್ನು ವಿನೋದ್ ರಾಜ್‌ ತಮ್ಮ ಹಳ್ಳಿಯಲ್ಲಿ ಬಳಸಿದ್ದಾರೆ.

    ಗ್ರಾಮ ನೈರ್ಮಲ್ಯಕ್ಕಾಗಿ ಕ್ರಿಮಿ ನಾಶಕ ಸಿಂಪಡಿಸಿದ ವಿನೋದ್ ರಾಜ್‌

    ಗ್ರಾಮ ನೈರ್ಮಲ್ಯಕ್ಕಾಗಿ ಕ್ರಿಮಿ ನಾಶಕ ಸಿಂಪಡಿಸಿದ ವಿನೋದ್ ರಾಜ್‌

    ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ನೆಲೆ ನಿಂತಿರುವ ವಿನೋದ್ ರಾಜ್‌ ಅವರು, ತಮ್ಮ ತೋಟಕ್ಕೆ ಬಳಸುವ ಕ್ರಿಮಿ ನಾಶಕವನ್ನೇ ಊರಿನಲ್ಲಿ ಸಿಂಪಡಿಸಿದ್ದಾರೆ. ತಮ್ಮದೇ ಟ್ರಾಕ್ಟರ್, ಸ್ಪ್ರೇಯರ್‌ಗಳನ್ನು ಬಳಸಿ ಅವರು ಈ ಕಾರ್ಯ ಮಾಡಿದ್ದಾರೆ.

    ಕೃಷಿಯಲ್ಲಿ ತೊಡಗಿಕೊಂಡಿರುವ ವಿನೋದ್ ರಾಜ್‌

    ಕೃಷಿಯಲ್ಲಿ ತೊಡಗಿಕೊಂಡಿರುವ ವಿನೋದ್ ರಾಜ್‌

    ವಿನೋದ್ ರಾಜ್‌ ಮತ್ತು ತಾಯಿ ಲೀಲಾವತಿ ಅವರು ಸಿನಿಮಾ ರಂಗದಿಂದ ದೂರಾಗಿ ಹಳ್ಳಿಯಲ್ಲಿ ನಿರ್ಮಲ ಬದುಕು ಬದುಕುತ್ತಿದ್ದಾರೆ. ವಿನೋದ್ ರಾಜ್‌ ಅವರು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಮತ್ತೆ ಬಣ್ಣ ಹಚ್ಚಲಿದ್ದಾರೆ ವಿನೋದ್ ರಾಜ್‌

    ಮತ್ತೆ ಬಣ್ಣ ಹಚ್ಚಲಿದ್ದಾರೆ ವಿನೋದ್ ರಾಜ್‌

    ಬಹು ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿರುವ ವಿನೋದ್ ರಾಜ್‌ ಅವರು ಮತ್ತೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ''ಮುಖವಾಡ'' ಎಂಬ ಸಿನಿಮಾ ದಲ್ಲಿ ಸಣ್ಣ ಪಾತ್ರಕ್ಕಾಗಿ ಚಿತ್ರತಂಡವು ವಿನೋದ್ ರಾಜ್ ಅವರನ್ನು ಒಪ್ಪಿಸಿದೆ.

    English summary
    Senior Actor Vinod Raj Kumar spray insect destroyer in his village near Nelamangala. He is doing farming from many years.
    Monday, March 30, 2020, 20:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X