»   » ಮಲ್ಲು ಚಿತ್ರದಲ್ಲಿ ಮೈ ಚಳಿ ಬಿಟ್ಟ ಬೆಂಗಳೂರು ಬೆಡಗಿ

ಮಲ್ಲು ಚಿತ್ರದಲ್ಲಿ ಮೈ ಚಳಿ ಬಿಟ್ಟ ಬೆಂಗಳೂರು ಬೆಡಗಿ

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರಿನ ಬೆಡಗಿ ವಿನುತಾ ಲಾಲ್ ಮಲೆಯಾಳಂ ಚಿತ್ರದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅದರಲ್ಲೂ 80ರ ದಶಕದಲ್ಲಿ ಭಾರಿ ಸಂಚಲನ ಮೂಡಿಸಿದ ಚಿತ್ರದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪರಾಂಕಿಮಾಲಾ ಎಂಬ ಹೆಸರಿನ ಈ ಚಿತ್ರದಲ್ಲಿ ಸಕತ್ ಹಾಟ್ ಸೀನ್ ಗಳಿದೆ.

  ಆದರೆ, ಬೆಂಗಳೂರು ಮೂಲದ ಮಾಡೆಲ್ ಕಮ್ ನಟಿ ವಿನುತಾ ನಾನು ರೆಡಿ ಎಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ನನಗೆ ರವಿಕೆ ಲಂಗ ತೊಟ್ಟು ಬೆಡ್ ರೂಮ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಮುಜುಗರ ಕಂಡು ಬಂದಿಲ್ಲ. ಚಿತ್ರದ ಕಥೆಯೇ ಹಾಗಿದೆ. ಕಥೆಗೆ ತಕ್ಕಂತೆ ನನ್ನ ಪಾತ್ರ ಬೆಳವಣಿಗೆ ಇದೆ. ನಾಯಕಿ ಪ್ರಧಾನ ಪಾತ್ರವಾದ್ದರಿಂದ ನನಗೆ ಈ ಚಿತ್ರ ಇಷ್ಟವಾಗಿದೆ ಎಂದು ವಿನುತಾ ಹೇಳಿದ್ದಾರೆ.

  ಆದರೆ, ಮೂಲ ಚಿತ್ರದ ಕಥೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕುಟುಂಬಸ್ಥರು ಕುಳಿತು ನೋಡಬಲ್ಲ ಚಿತ್ರ ಮಾಡಲು ನಿರ್ದೇಶಕ ಸೇನನ್ ಪಲ್ಲಚ್ಚೆರಿ ಶ್ರಮಪಟ್ಟಿದ್ದಾರೆ. ಹಳೆ ಚಿತ್ರವನ್ನು ಭರತನ್ ನಿರ್ದೇಶಿಸಿದ್ದರು. ನೆಡುಮುಡಿ ವೇಣು ಹಾಗೂ ನಟಿ ಸೂರ್ಯ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಈಗ ಸೂರ್ಯ ಪಾತ್ರವನ್ನು ವಿನುತಾ ಮಾಡುತ್ತಿದ್ದಾರೆ.

  ವಿನುತಾ ಲಾಲ್ ಚಿತ್ರೀಕರಣದಲ್ಲಿ ಪಾಲ್ಗೊಂಡ ಮೇಲೆ ತಮ್ಮ ಫೇಸ್ ಬುಕ್ ಪುಟದಲ್ಲಿ ಒಂದೆರಡು ಸ್ಟಿಲ್ಸ್ ಹಾಕಿದ್ದು ಬಿಟ್ಟರೆ ಚಿತ್ರದಲ್ಲಿನ ಹಾಟ್ ದೃಶ್ಯಗಳ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. 1981ರಲ್ಲಿ ತೆರೆ ಕಂಡ ಚಿತ್ರದ ಕೆಲವು ದೃಶ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.. 'ಡಿಂಪಲ್' ವಿನುತಾ ಇನ್ನಷ್ಟು ಚಿತ್ರಗಳಿಗೆ ಕಾಯುತ್ತಿರಿ...

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಸಹ ನಟರೊದಿಗೆ ನಾಯಕಿ ವಿನುತಾ ಲಾಲ್

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಚಿತ್ರೀಕರಣ ನಂತರ ಕಾರಿನಲ್ಲಿ ಕೂತು ಫೋಟೋ ತೆಗೆಸಿಕೊಂಡ ವಿನುತಾ

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಚಿತ್ರೀಕರಣದ ನಂತರ ಚಿತ್ರತಂಡದೊಂಡಿಗೆ ವಿನುತಾ ಲಾಲ್

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  1981ರಲ್ಲಿ ತೆರೆ ಕಂಡ ಪರಾಂಕಿಮಾಲಾ ಚಿತ್ರ ಕಾಕ್ಕನಾದನ್ ಎಂಬ ಕಾದಂಬರಿಯನ್ನು ಆಧರಿಸಿತ್ತು. ಭರತನ್ ಅವರ ನಿರೂಪಣೆ ನಿರ್ದೇಶನಕ್ಕೆ ಭಾರಿ ಮನ್ನಣೆ ಸಿಕ್ಕಿತ್ತು. ದಕ್ಷಿಣ ಭಾರತದ ವಿಮರ್ಶಕರೆಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಚಿತ್ರದ ಪ್ರಧಾನ ಪಾತವಾದ ಥಾಂಕ ಹಲವು ಭಾವನೆಗಳನ್ನು ಹೊತ್ತಿರುವ ಸಾಫ್ಟ್ ಕ್ಯಾರೆಕ್ಟರ್. ಮೂಲ ಚಿತ್ರದಲ್ಲಿ ಗ್ಲಾಮರ್, ಸೆಕ್ಸಿ ಪಾತ್ರವನ್ನು ಈ ಚಿತ್ರದಲ್ಲಿ ಬದಲಾಯಿಸಿರುವ ಸೂಚನೆ ಸಿಕ್ಕಿದೆ. ಆದರೆ, ಥಾಂಕ ಪಾತ್ರದ ಬೆಳವಣಿಗೆ ಹಾಗೆ ಇರುತ್ತದೆಯಂತೆ

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಹಳೆ ಚಿತ್ರದಲ್ಲಿ ಸಪೂರ ಸುಂದರಿ ಸೂರ್ಯ ಅವರು ಭರತನ್ ಅವರ ಚಿತ್ರ ಗೆಲ್ಲಿಸಿಕೊಟ್ಟಿದ್ದರು. ಈಗ ವಿನುತ ಮುಂದೆ ಈ ಸವಾಲಿನ ಪಾತ್ರ ಇದೆ

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಹೊಸ ಚಿತ್ರದಲ್ಲಿ ನಿರ್ದೇಶಕ ಹಾಗೂ ನಾಯಕಿ ಇಬ್ಬರೂ ಹೊಸಬರಾದ್ದರಿಂದ ಮೂಲ ಚಿತ್ರದ ಆಶಯಕ್ಕೆ ಧಕ್ಕೆ ಬರದಂತೆ ಜಾಗರೂಕತೆಯಿಂದ ಚಿತ್ರವನ್ನು ಬೆಳೆಸಿಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಳೆ ಚಿತ್ರದಲ್ಲಿ ಬೆನ್ನಿ ಅವರು ಥಾಂಕಾ ಲವರ್ ಪಾತ್ರದಲ್ಲಿ ನಟಿಸಿದ್ದರು.

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಕಲಾಭವನ್ ಮಣಿ, ಜಗದೀಶ್, ಇಂದ್ರನ್ ಸೇರಿದಂತೆ ಸೀನಿಯರ್ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿದಂತೆ ವಿನುತಾ ಥ್ರಿಲ್ ಆಗಿದ್ದಾರೆ.

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ವಿಜಿನ್ ಹಾಗೂ ಥಾಮಸ್ ಕೊಕ್ಕಟ್ ಅವರ ನಿರ್ಮಾಣದ ಈ ಚಿತ್ರಕ್ಕೆ ಅಫ್ಸಲ್ ಸಂಗೀತವಿದೆ

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಥಾಟ್ಟೆಕಾಡ್ ಪ್ರದೇಶದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಲಾಗಿದೆ. ಶೇ 50 ರಷ್ಟು ಚಿತ್ರೀಕರಣ ಮುಗಿಸಿರುವ ಮಾಹಿತಿ ಸಿಕ್ಕಿದೆ. ಜೂನ್ ವೇಳೆಗೆ ಶೂಟಿಂಗ್ ಮುಗಿಯಲಿದೆ.

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  ಜುಲೈ ತಿಂಗಳಲ್ಲಿ ಅಥವಾ ಆಗಸ್ಟ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  1981ರಲ್ಲಿ ತೆರೆ ಕಂಡ ಮೂಲ ಚಿತ್ರದ ಸ್ಟಿಲ್

  ಡಿಂಪಲ್ ವಿನುತಾ ಮಲ್ಲು ಲ್ಯಾಂಡ್ ಗೆ ಎಂಟ್ರಿ

  1981ರಲ್ಲಿ ತೆರೆ ಕಂಡ ಮೂಲ ಚಿತ್ರದ ಸ್ಟಿಲ್

  English summary
  Bangalore lass Vinutha Lal, who is debuting in Malayalam films, is playing the female lead in this remake, which is produced under the same title. This Bangalore model-turned-actress, who has already started shooting for the film, says that she does not have qualms in doing intimate and steamy scenes for this version.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more