ಹಣೆಬರಹಕ್ಕೆ ಹೊಣೆ ಯಾರು ? ಟೋಕನ್‌ಗಾಗಿ ಸರತಿ ಸಾಲು, ಪತಿಯ ಭೇಟಿಗೆ 2.5 ಗಂಟೆ ಕಾದ ವಿಜಯಲಕ್ಷ್ಮಿ-ಗ್ಯಾಲರಿಯಲ್ಲಿ ದರ್ಶನ

By ಫಿಲ್ಮಿಬೀಟ್ ಡೆಸ್ಕ್

ಈ ವರ್ಷದ ಆರಂಭದಲ್ಲಿ ಥಾಯ್ಲೆಂಡ್ - ರಾಜಸ್ತಾನ ಎಂದು ಒಂದು ಆರು ತಿಂಗಳು ನೆಮ್ಮದಿಯಿಂದ ಓಡಾಡಿಕೊಂಡಿದ್ದವರು ದರ್ಶನ್. ಆದರೆ.. ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಆದರೆ ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್‌ಗೆ ದುರಾದೃಷ್ಟ ಮತ್ತೆ ಬೆನ್ನತ್ತಿದೆ. ಕಂಬಿ ಹಿಂದೆ ಮತ್ತೊಮ್ಮೆ ಬದುಕು ಸಾಗುತ್ತಿದೆ.

ಈಗಾಗಲೇ ದರ್ಶನ್‌ಗೆ ನರಕ ದರ್ಶನ ಕೂಡ ಆಗಿದೆ. ಹೆಚ್ಚುವರಿ ಹಾಸಿಗೆ ಮತ್ತು ದಿಂಬಿಗೆ ಅಂಗಲಾಚಿ ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾವ ಸವಲತ್ತು ಇಲ್ಲ. ದರ್ಶನ್ ಮೇಲೆ ಅಲ್ಲಿನ ಸಿಬ್ಬಂದಿಗಳು ಕನಿಕರ ಕೂಡ ತೋರುವಂತೆ ಇಲ್ಲ. ತೋರಿಸಿದರೆ ಆಪತ್ತು ಕಟ್ಟಿಟ್ಟ ಬುತ್ತಿ.

VIP to Visitor Darshan s Wife Waits Hours Meets Him at Parappana Agrahara Under Strict Jail Protocol

ಇನ್ನು.. ದರ್ಶನ್ ಅವರ ಹಣೆಬರಹ ಎಷ್ಟು ಖರಾಬಾಗಿದೆ ಅಂದರೆ ಮೊದಲ ಬಾರಿ ಬಂಧನಕ್ಕೊಳಗಾಗಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾಗ ವಿಜಯಲಕ್ಷ್ಮಿ ಆಗಲಿ ದಿನಕರ್ ಆಗಲಿ ಅವರನ್ನು ಸುಲಭವಾಗಿ ಭೇಟಿಯಾಗಬಹುದಿತ್ತು. ಪತಿಯ ದರ್ಶನ ಪಡೆಯುವುದು ಆಗ ವಿಜಯಲಕ್ಷ್ಮಿ ಅವರಿಗೆ ತುಂಬಾನೇ ಸುಲಭವಾಗಿತ್ತು.

ಮೊದಲು ವಿಜಯಲಕ್ಷ್ಮಿ ಜೈಲಿಗೆ ಬಂದರೆ ಜೈಲಾಧಿಕಾರಿ ಚೇಂಬರ್‌ಗೆ ಇವರನ್ನು ಕರೆದೊಯ್ಯಲಾಗುತ್ತಿತ್ತು. ಅಲ್ಲಿ ವಿಜಯಲಕ್ಷ್ಮಿ ತಮ್ಮ ಪತಿಯ ಜೊತೆ ಮಾತನಾಡುತ್ತಿದ್ದರು. ಕಷ್ಟ ಸುಖ ಹಂಚಿಕೊಂಡು ದರ್ಶನ್‌ಗೆ ಧೈರ್ಯ ತುಂಬಿ ಬರುತ್ತಿದ್ದರು.

ಆದರೆ ಈಗ ಮೊದಲಿನ ವಾತಾವರಣ ಇಲ್ಲ. ಸುಪ್ರೀಂ ಕೋರ್ಟ್‌ನ ಖಂಡ ತುಂಡ ಆದೇಶ ವಿಜಯಲಕ್ಷ್ಮಿ ಅವರನ್ನು ಕೂಡ ಹೈರಾಣಾಗಿಸಿದೆ. ಜೈಲು ಹಕ್ಕಿಗಳನ್ನು ಅವರ ಮನೆಯವರು ಹೇಗೆ ನೋಡಲು ಬರುತ್ತಾರೆ ಅದೇ ರೀತಿ ವಿಜಯಲಕ್ಷ್ಮಿ ಕೂಡ ಜೈಲಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ಖೈದಿಗಳ ಸಂಬಂಧಿಕರು ಭೇಟಿಯಾಗಲು ಕಾಯುವಂತೆ ವಿಜಯಲಕ್ಷ್ಮಿ ಕೂಡ ಟೋಕನ್ ಪಡೆದುಕೊಂಡು ಕಾಯುವಂತಹ ದಿನಗಳು ಬಂದಿವೆ.

ಇದಕ್ಕೆ ಪುರಾವೆ ಎನ್ನುವಂತೆ ನಿನ್ನೆ (ಅಕ್ಟೋಬರ್ 11 ) ವಿಜಯಲಕ್ಷ್ಮಿ ತಮ್ಮ ಪತಿಯ ದರ್ಶನಕ್ಕೆ ಎರಡರಿಂದ ಎರಡೂವರೆ ಗಂಟೆ ಕಾದಿದ್ದಾರೆ. ಎಲ್ಲರಂತೆ ಟೋಕನ್ ತೆಗೆದುಕೊಂಡು ಕ್ಯೂ ನಲ್ಲಿ ನಿಂತು ಆ ನಂತರ ಗ್ಯಾಲರಿಯಲ್ಲಿ ದರ್ಶನ್ ಅವರನ್ನು ನಟಿ ಮಾಡಿದ್ದಾರೆ. ಎಂದು ''TV 9 ಕನ್ನಡ''.. ''ಪಬ್ಲಿಕ್ ಟಿವಿ'' ಸೇರಿ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಒಬ್ಬ ಸೂಪರ್ ಸ್ಟಾರ್‌ಗೆ ಮತ್ತು ಕುಟುಂಬಕ್ಕೆ ಇದಕ್ಕಿಂತ ದೌರ್ಭಾಗ್ಯ ಮತ್ತೊಂದಿಲ್ಲ.

VIP to Visitor Darshan s Wife Waits Hours Meets Him at Parappana Agrahara Under Strict Jail Protocol

ಅಂದ್ಹಾಗೇ ದಸರಾ ಮುಗಿದ ಬೆನ್ನಲ್ಲಿಯೇ ಕಳೆದ ವಾರ ( ಅಕ್ಟೋಬರ್ 3 ) ಕೂಡ ವಿಜಯಲಕ್ಷ್ಮಿ ತಮ್ಮ ಪತಿಯನ್ನು ನೋಡಲು ಹೋಗಿದ್ದರು. ಆಗಲೂ ಕೂಡ ಸರತಿ ಸಾಲಿನಲ್ಲಿಯೇ ನಿಂತುಕೊಂಡಿದ್ದರು. ಈಗಲೂ ಕೂಡ ಕಾದು ಕಾದು ಸುಸ್ತಾಗಿ ತಮ್ಮ ಪತಿಯನ್ನು ಭೇಟಿ ಮಾಡಿ ಬಂದಿದ್ದಾರೆ.

ಇನ್ನುಳಿದಂತೆ ಹಾಸಿಗೆ ದಿಂಬಿಗಾಗಿ ಪರದಾಡುತ್ತಿರುವ ದರ್ಶನ್ ಮತ್ತೊಮ್ಮೆ ಹಾಸಿಗೆ ಮತ್ತು ದಿಂಬಿಗೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರೇ ಒಮ್ಮೆ ಪರಿಶೀಲಿಸುವಂತೆ ಕೋರಿಕೊಂಡಿದ್ದರು. ದರ್ಶನ್ ಸಲ್ಲಿಸಿದ್ದ ಅರ್ಜಿ ಸ್ವೀಕಾರವಾಗಿದ್ದು, ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಜಡ್ಜ್‌ ಸೂಚಿಸಿದ್ದಾರೆ. ಜೈಲಿನಲ್ಲಿ ನಿಯಮ ಪಾಲನೆ ಆಗಿದೆಯೋ, ಇಲ್ಲವೋ ಎನ್ನುವುದನ್ನು ಪರಿಶೀಲಿಸಿ ಅ. 18ರ ಒಳಗೆ ವರದಿ ನೀಡುವಂತೆ ಹೇಳಿದ್ದಾರೆ. ಇನ್ನಾದರೂ ದರ್ಶ್‌ನ್‌ಗೆ ಹಾಸಿಗೆ ದಿಂಬು ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The two-and-a-half-hour wait. Vijayalakshmi meets her husband, Actor Darshan, in jail, strictly following all official protocol, underscoring the legal equality for all inmates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X