ಕ್ಷಮಿಸಿ ಅಪ್ಪ ; ಮನೆಯಿಂದ ಓಡಿ ಹೋಗಿ ಮದುವೆ ಆಗಿದ್ದೇಕೆ ? ಕಾರಣ ಹೇಳಿದ ಸರಿಗಮಪ ಸಿಂಗರ್ ಪೃಥ್ವಿ ಭಟ್..!
ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ.ಇನ್ನು ಕೆಲವರ ಮನೆಯಲ್ಲಿ ಹೆತ್ತವರ ವಿರೋಧದಿಂದ ಮನೆಯಿಂದ ಓಡಿ ಹೋಗಿ ಮದುವೆಯಾಗ್ಲೇ ಬೇಕಾದ ಅನಿವಾರ್ಯತೆ ಎದುರಾಗುತ್ತೆ.
ಸದ್ಯ ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ವಿಚಾರದಲ್ಲಿ ಕೂಡ ಇದೇ ಆಗಿದ್ದು ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ತಮ್ಮ ಮನದ ನೋವು ಹೊರ ಹಾಕಿದ್ದಾರೆ. ತಮ್ಮ ಮಗಳನ್ನು ವಶೀಕರಣ ಮಾಡಿಕೊಂಡು ಮದುವೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸರಿಗಮಪದ ಜ್ಯೂರಿಯಾದ ನರಹರಿ ದೀಕ್ಷಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹವ್ಯಕ ಗ್ರೂಪ್‌ನಲ್ಲಿ ಆಡಿಯೋ ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಈ ಆಡಿಯೋ ವೈರಲ್ ಕೂಡ ಆಗಿದೆ. ಇದರ ಬೆನ್ನಲ್ಲೇ ಈಗ ಪೃಥ್ವಿ ಭಟ್ ಅವರದ್ದು ಎನ್ನಲಾದ ಆಡಿಯೋ ಕೂಡ ಹರಿದಾಡುತ್ತಿದೆ. ವೈರಲ್ ಆಗುತ್ತಿದೆ. ಹೌದು, ತಮ್ಮ ಮದುವೆಯ ಕುರಿತು ತಮ್ಮ ತಂದೆ ಮಾತನಾಡಿದ ಮಾತುಗಳಿಗೆ ಪೃಥ್ವಿ ಭಟ್ ಪ್ರತಿಕ್ರಿಯೆಯನ್ನು ನೀಡಿದ್ಧಾರೆ. ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದೇಕೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪೃಥ್ವಿ ಭಟ್ ಅಪ್ಪ ಕಳೆದ ಎರಡು ದಿನಗಳಿಂದ ಬೇರೆ ಬೇರೆ ಗ್ರೂಪ್‌ನಲ್ಲಿ ನನ್ನ ಮದುವೆಯ ಕುರಿತು ಆಡಿಯೋ ಕಳುಹಿಸುತ್ತಿದ್ದೀರಾ, ಈ ವಿಷಯದಲ್ಲಿ ನರಹರಿ ದೀಕ್ಷಿತ್ ಅವರದ್ದು ಯಾವ ತಪ್ಪು ಇಲ್ಲ ಎಂದು ಹೇಳಿದ್ದಾರೆ. ಮಾರ್ಚ್ 7ರಂದು ಈ ವಿಚಾರ ಮನೆಯಲ್ಲಿ ಪ್ರಸ್ತಾಪ ಆದಾಗ ನನಗೆ ಅಭಿ ಇಷ್ಟ ಎಂದೇ ನಾನು ನಿಮಗೆ ಹೇಳಿದ್ದೇ ಎಂದು ಹೇಳಿದ್ದಾರೆ.
ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು ಎಂದಿರುವ ಪೃಥ್ವಿ ಭಟ್ ಆ ನಂತರ ನೀವು ನನಗೆ ತುಂಬಾ ಕಡಿವಾಣ ಹಾಕಲು ಶುರು ಮಾಡಿದ್ರಿ, ಶೋ ಎಲ್ಲ ಹೋಗೋದು ಬೇಡ ಎಂದು ಹೇಳಿದಿರೀ ಆಗ ನನಗೆ ಭಯ ಆಗಲು ಶುರುವಾಯ್ತು ಎಂದು ಹೇಳಿದ್ದಾರೆ. ಹೀಗಾಗಿಯೇ ಮನೆಯಿಂದ ನಾನು ಆಚೆ ಬಂದೆ ಎಂದು ಪೃಥ್ವಿ ಭಟ್ ಹೇಳಿದ್ದಾರೆ.
ಮುಂದುವರೆದು ನಾನು ಮನೆಯಿಂದ ಹೊರ ಬಂದಿದ್ದು ಹೆದರಿಕೆಯಿಂದ ಮಾತ್ರ ಎಂದಿರುವ ಪೃಥ್ವಿ ಭಟ್ ಮದುವೆ ವಿಚಾರ ನರಹರಿ ದೀಕ್ಷಿತ್ ಸರ್‌ಗೆ ಗೊತ್ತೇ ಇರಲಿಲ್ಲ ಎಂದು ಹೇಳಿದ್ಧಾರೆ. ನಾನೇ ಅವರಿಗೆ ಫೋನ್ ಮಾಡಿ ಆ ನಂತರ ವಿಚಾರ ತಿಳಿಸಿದೆ ಆ ನಂತರ ಅವರು ನಮ್ಮನ್ನು ಭೇಟಿ ಮಾಡಿ ಆಶೀರ್ವಾದ ಮಾಡಿದರು ಎಂದಿರುವ ಪೃಥ್ವಿ ಭಟ್ ನನ್ನ ಮದುವೆಗೂ ನರಹರಿ ದೀಕ್ಷಿತ್ ಅವರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ, ಕ್ಷಮಿಸಿ ಅಪ್ಪ ಎಂದು ಕೂಡ ಪೃಥ್ವಿ ಭಟ್ ಹೇಳಿದ್ದಾರೆ.
ಸದ್ಯ ಪೃಥ್ವಿ ಭಟ್ ಅವರದ್ದು ಎನ್ನಲಾದ ಈ ಆಡಿಯೋ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಚರ್ಚೆಗೆ ಗ್ರಾಸವಾಗಿದೆ. ಇನ್ನುಳಿದಂತೆ ಮಾರ್ಚ್ 27ರಂದು ಜೀ ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಜೊತೆ ಪೃಥ್ವಿ ಭಟ್ ಮದುವೆಯಾಗಿದ್ದಾರೆ. ಮುಂದೆ ತಮ್ಮ ಮಗಳನ್ನು ಶಿವಪ್ರಸಾದ್ ಕ್ಷಮಿಸುತ್ತಾರಾ ? ಈ ವಿವಾದ ಎಲ್ಲಿ ತಲುಪುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











