ಸರಿಗಮಪ ಗಾಯಕಿ ಪೃಥ್ವಿ ಭಟ್ ಬದುಕಿನಲ್ಲಿ ಅಲ್ಲೋಲ,ಕಲ್ಲೋಲ ; ವಶೀಕರಣ ಮಾಡಿ ಮದುವೆ ಮಾಡಿದ್ದಾರೆ ಎಂದ ತಂದೆ..!

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು.

ಇಂತಹ ಕಾಲಘಟ್ಟದಲ್ಲಿ ನನ್ನ ಮಗಳನ್ನು ವಶೀಕರಣ ಮಾಡಿ ಮದುವೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವನ್ನು ಗಾಯಕಿ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಮಾಡಿದ್ಧಾರೆ. ಇದಕ್ಕೆ ಸಂಬಂಧಿಸಿದಂತೆ ಶಿವ ಪ್ರಸಾದ್ ಅವರು ಮಾತನಾಡಿದ್ಧಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ.

Viral Audio Sa Re Ga Ma Pa Singer Prithwi Bhat s Marriage Controversy Father Accuses of Hypnosis

ವೈರಲ್ ಆದ ಈ ಆಡಿಯೋದಲ್ಲಿ ಶಿವ ಪ್ರಸಾದ್, ಸಂಗೀತ ತರಗತಿಗಳನ್ನು ನಡೆಸಿಕೊಡುವ ನರಹರಿ ದೀಕ್ಷಿತ್ ವಿರುದ್ಧ ಕೆಂಡ ಕಾರಿದ್ದಾರೆ. ನನ್ನ ಮಗಳನ್ನು ವಶೀಕರಣ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಶಿವಪ್ರಸಾದ್ ನಾನು ಗಾಯಕಿ ಪೃಥ್ವಿ ಭಟ್ ಅವರ ಅಪ್ಪ. ನನ್ನ ಮಗಳು ಕಳೆದ ತಿಂಗಳು ಇಪ್ಪತ್ತೇಳನೇ ತಾರೀಖಿನಂದು ದೇವಸ್ಥಾನದಲ್ಲಿ ಯಾರನ್ನೋ ಮದುವೆಯಾಗಿ ನಮ್ಮನ್ನು ಬಿಟ್ಟು ಹೋಗಿದ್ದಾಳೆ ಎಂದು ಹೇಳಿದ್ದಾರೆ.

ನಮ್ಮ ಸಂಪರ್ಕದಲ್ಲಿ ಇಲ್ಲ ಅವಳು ಈಗ. ಅವನು ಹವ್ಯಕ ಅಲ್ಲ, ಬ್ರಾಹ್ಮಣನೂ ಅಲ್ಲ. ಜಾತಿ ಯಾವುದಾದರೇನೂ ಅವಳು ನಮ್ಮನ್ನು ಬಿಟ್ಟು ಹೋಗಿ ಆಗಿದೆ. ಇನ್ನು ಜಾತಿ ಕಟ್ಟಿಕೊಂಡು ಏನು ಮಾಡಲು ಆಗುವುದಿಲ್ಲ ಎಂದಿರುವ ಶಿವ ಪ್ರಸಾದ್ ನಮ್ಮನ್ನು ಬಿಟ್ಟು ಹೋಗಿ ಇಪ್ಪತ್ತು ದಿವಸ ಆಗಿ ಹೋಯ್ತು, ಅವಳಿಗೆ ಇಷ್ಟು ತನಕ ನಮ್ಮ ನೆನಪು ಕೂಡ ಬಂದಿಲ್ಲ. ಆ ರೀತಿ ಇದ್ದಾಳೆ'. 'ಇದನ್ನು ನೀವ್ಯಾರೂ ನಿರೀಕ್ಷೆ ಮಾಡುವಂತಹ ವಿಷಯವೇ ಅಲ್ಲ. ಅವಳು ಯಾವ ರೀತಿ ಇದ್ದಳು. ಅವಳನ್ನು ನಾವು ಯಾವ ರೀತಿ ಬೆಳೆಸಿದ್ದೇವೆ ಎನ್ನುವುದು ನೋಡಿದವರಿಗೆ ಗೊತ್ತಿರುವ ವಿಚಾರ ಎಂದು ಹೇಳಿದ್ದಾರೆ.

ಯಾಕೆ ಹೀಗೆ ಆಯ್ತು ಎನ್ನುವುದು ಯಾರಿಗೂ ಅರ್ಥವಾಗುವುದಿಲ್ಲ. ಇದರಲ್ಲಿ ಮುಖ್ಯವಾದ ವಿಷಯ ಅಂದರೆ ಅವಳನ್ನು ಧಾರೆ ಎರೆದು ಮದುವೆ ಮಾಡಿಕೊಟ್ಟಿರುವುದು, ನಮ್ಮ ಗಿರಿ ನಗರದ ವಲಯದ ನಿವಾಸಿ ಭಯಂಕರ ಸಂಗೀತ ಶಿಕ್ಷಕ. ಮಹಾ ದುಷ್ಟ. ನರಹರಿ ದೀಕ್ಷಿತ್‌ ಎನ್ನುವವರು ಎಂದು ಕಿಡಿ ಕಾರಿದ್ದಾರೆ.

ಮುಂದುವರೆದು ನರಹರಿ ದೀಕ್ಷಿತ್‌ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು, ಹಲವು ಕಡೆ ಸಂಗೀತ ತರಗತಿಗಳನ್ನು ಮಾಡುತ್ತಾನೆ. ಜೀ ಕನ್ನಡದ ಸರಿಗಮಪದ ಜ್ಯೂರಿಯಾಗಿ ಭಾಗವಹಿಸುತ್ತಾರೆ. ಈಗ ಅವನು ನಾನು ಮೊದಲೇ ಶಿವಣ್ಣಗೆ ಎಲ್ಲಾ ಹೇಳಿದ್ದೆ, ಪರಿಸ್ಥಿತಿ ಕೈ ಮೀರಿದೆ ಅಂತಾ ಹೇಳಿದ್ದೆ, ನಾವೇ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಅಂತಾ ಹೇಳುತ್ತಾನೆ ಎಂದಿರುವ ಶಿವಪ್ರಸಾದ್, ಈ ಹಿಂದೆ ನಮ್ಮ ಮನೆಗೆ ಬಂದಿದ್ದ ಬರಲು ನಾನೇ ಹೇಳಿದ್ದು, ನಿಮ್ಮ ಶಿಷ್ಯರಲ್ಲಿ ಯಾರಾದರೂ ಹವ್ಯಕ ಗಾಯಕ ಇದ್ದರೆ ಹೇಳಿ ಮಗಳಿಗೆ ಹುಡುಗ ನೋಡುತ್ತಿದ್ದೇನೆ ಅಂತಾ ಫೋನ್‌ ಮಾಡಿ ಹೇಳಿದ್ದೆ ಎಂದು ಹೇಳಿದ್ದಾರೆ.

ಆ ನಂತರ ಮಾರ್ಚ್ ಏಳನೇ ತಾರೀಕು ನಮ್ಮ ಮನೆಗೆ ಬಂದವ ಜೀ ಕನ್ನಡದಲ್ಲಿ ಅಭಿಷೇಕ್‌ ಎನ್ನುವ ಹುಡುಗ ನಮ್ಮ ಪೃಥ್ವಿ ಹಿಂದೆ ಬಿದ್ದಿದ್ದಾನೆ. ಪೃಥ್ವಿಯನ್ನು ಇಷ್ಟಪಡುತ್ತಿದ್ದಾನೆ, ಪೃಥ್ವಿಗೂ ಮನಸ್ಸು ಇರುವ ಹಾಗಿದೆ ಹೀಗಾಗಿ ಮೊದಲು ಅದನ್ನು ಬಗೆಹರಿಸಿಕೊಳ್ಳಿ ಆಮೇಲೆ ಹುಡುಗ ಹುಡುಕಲು ಜಾತಕ ಕೊಡಿ ಅಂತಾ ಹೇಳಿದ್ದ ಎಂದಿರುವ ಶಿವಪ್ರಸಾದ್ ಅವತ್ತು ಪರಿಸ್ಥಿತಿ ಕೈ ಮೀರಿದೆ. ಅವರು ಮದುವೆ ಹಂತಕ್ಕೆ ಬಂದಿದ್ದಾರೆ ಅದನ್ನು ಯಾವುದನ್ನು ಹೇಳಿರಲಿಲ್ಲ ಅವರು ಎಂದು ಹೇಳಿದ್ದಾರೆ.

ಆ ನಂತರ ಅವರು ಹೋದ ಮೇಲೆ ಪೃಥ್ವಿಯನ್ನು ನಾನು ವಿಚಾರಿಸಿದೆ, ಆಗ ಅಭಿಷೇಕ್‌ ತುಂಬಾ ಸಮಯದಿಂದ ನನ್ನನ್ನು ಇಷ್ಟಪಡುತ್ತಿದ್ದಾರೆ. ನಿಮಗೆ ಇಷ್ಟವಾದರೆ ನನಗೂ ಇಷ್ಟ. ಇಲ್ಲವಾದರೆ ನನಗೂ ಬೇಡ. ನಿಮಗೆ ಇಷ್ಟ ಇದ್ದರೆ ನಾನು ಮದುವೆಯಾಗುತ್ತೇನೆ ಅಂತಾ ಹೇಳಿದ್ದಳು ಎಂದಿರುವ ಶಿವಪ್ರಸಾದ್ ನನಗೆ ಧೈರ್ಯ ಬರಲಿಲ್ಲ. ಅವಳಿಗೆ ದೇವರ ಮೇಲೆ ನಂಬಿಕೆ ಇದೆ. ಹೀಗಾಗಿ ದೇವರ ಕೋಣೆಯಲ್ಲಿ ದೇವರ ಮೇಲೆ ಆಣೆ ಮಾಡು ಅಂದಾಗ, ಪ್ರಮಾಣ ಮಾಡಿ ನೀವು ಹೇಳಿದ ಹುಡುಗನನ್ನೇ ಮದುವೆಯಾಗುವುದು ಎಂದು ಹೇಳಿದಳು ಎಂದಿದ್ದಾರೆ. ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿದಳು. ಇಷ್ಟೆಲ್ಲಾ ಆದ ಮೇಲೆ ನಮ್ಮ ಮಗಳನ್ನು ನಾವು ನಂಬದೇ ಇರಲು ಸಾಧ್ಯವೇ?' ಎಂದಿದ್ದಾರೆ.

ಇನ್ನು ಈ ನರಹರಿ ದೀಕ್ಷಿತ್‌ ಬಂದು ಹೋದ ಮೇಲೆ ಅವಳ ನಡವಳಿಕೆಯಲ್ಲಿ ಬದಲಾವಣೆ ಆಗಿತ್ತು. ಒಂದು ರೀತಿ ವಶೀಕರಣ ಆದವರ ರೀತಿ ಇದ್ದಳು. ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು ಎಂದಿರುವ ಶಿವಪ್ರಸಾದ್ ಅವಳ ವರ್ತನೆ ಬದಲಾದಾಗ ಸ್ವಲ್ಪ ಯೋಚನೆ ಮಾಡಬೇಕಿತ್ತು ನಾನು. ಇಪ್ಪತ್ತೇಳನೇ ತಾರೀಖು ರೆಕಾರ್ಡಿಂಗ್ ಇದೆ ಅಂತಾ ಹೇಳಿದ್ದಳು. ನಾನೇ ಸ್ಟುಡಿಯೋಗೆ ಬಿಟ್ಟು ಬಂದೆ. ಮಧ್ಯಾಹ್ನ ನಮಗೆ ಪೊಲೀಸ್‌ ಠಾಣೆಯಿಂದ ಕರೆ ಬಂತು ಪೃಥ್ವಿ ನಿಮ್ಮ ಮಗಳಾ? ಅವರು ಅಭಿಷೇಕ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ಈಗ ನಿಮ್ಮ ಮನೆಗೆ ಬರುತ್ತಾರೆ ಅಂತಾ ಹೇಳಿದರು. ಆಗ ನಾನು ನಮ್ಮ ಮನೆಗೆ ಬರುವುದು ಬೇಡ ಅಂತಾ ಹೇಳಿದೆ ಎಂದು ಹೇಳಿದ್ದಾರೆ.

ಇಷ್ಟೆಲ್ಲ ಆದ ನಂತರ ಒಂದೆರಡು ಸಾರಿ ತಪ್ಪಾಯ್ತು ಅಪ್ಪ-ಅಮ್ಮ ಅಂತಾ ಫೋನ್‌ ಮಾಡಿದ್ದಳು. ಅದಾದ ಮೇಲೆ ಗೊತ್ತಾಯ್ತು. ನರಹರಿ ದೀಕ್ಷಿತ್‌ ಧಾರೆ ಎರೆದಿದ್ದಾರೆ ಅಂತಾ ಇದರಿಂದ ನನಗೆ ಆಘಾತವಾಯ್ತು ಎಂದಿರುವ ಪೃಥ್ವಿ ಭಟ್ ಅವರ ತಂದೆ ನಮ್ಮ ಜೊತೆಯಲ್ಲೇ ಇದ್ದುಕೊಂಡು ಹೀಗೆ ಮಾಡಿದರು, ಅವರು ಜೀ ಕನ್ನಡದಲ್ಲಿ ಏನೋ ಲಾಭ ಕಂಡಿದ್ದಾರೆ. ಹೀಗಾಗಿ ಈ ಮದುವೆ ಮಾಡಿದ್ದಾರೆ. ಅವಳು ಮದುವೆಯಾಗುವ ದಿನ ಬೆಳಗ್ಗೆ ವಿಷಯ ಗೊತ್ತಾದಾಗ ನನಗೆ ಹೇಳಬಹುದಿತ್ತು. ನಮ್ಮ ಜೀವನದಲ್ಲಿ ಧಾರೆ ಎರೆಯುವ ಒಂದೇ ಒಂದು ಅವಕಾಶವನ್ನು ಕೂಡ ಕಿತ್ತುಕೊಂಡರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ .

ಜೀ ಕನ್ನಡದವರು ಹೇಳಿದ್ದಾರೆ ಅಂತಾ ಧಾರೆ ಎರೆದಿದ್ದಾರಂತೆ. ಇದಕ್ಕೆ ಅರ್ಥ ಇದೆಯಾ. ಇವನಿಗೆ ಕ್ಷಮೆ ಇದೆಯಾ? ಇವನ ಬಗ್ಗೆ ಜನರಿಗೆ ತಿಳಿಸಿ. ಇವನನ್ನು ನಂಬಿಕೊಂಡು ಹೆಣ್ಣು ಮಕ್ಕಳನ್ನು ಇವನ ಕ್ಲಾಸ್‌ಗೆ ಕಳುಹಿಸುವುದು ಹೇಗೆ' ಎಂದು ಗಾಯಕಿ ಪೃಥ್ವಿ ಭಟ್ ತಂದೆ ತಮ್ಮ ಮನದ ನೋವು ಹೊರ ಹಾಕಿದ್ದಾರೆ.ಹವ್ಯಕ ಗ್ರೂಪ್‌ನಲ್ಲಿ ಆಡಿಯೋ ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ್ದಾರೆ, ಇದೇ ಆಡಿಯೋ ಈಗ ವೈರಲ್ ಆಗಿದೆ ಎಂದು ಹೇಳಲಾಗುತ್ತಿದೆ.

ಅಂದ್ಹಾಗೇ ಮಾರ್ಚ್ 27ರಂದು ಜೀ ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಜೊತೆ ಪೃಥ್ವಿ ಭಟ್ ಮದುವೆಯಾಗಿದ್ದಾರೆ. ಸದ್ಯ ಪೃಥ್ವಿ ಭಟ್ ಅವರ ತಂದೆಯವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು ಪೃಥ್ವಿ ಭಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

More from Filmibeat

English summary
A viral audio featuring Zee Kannada Sa Re Ga Ma Pa contestant Prithwi Bhat's father claims that Narahari Dixit used hypnosis in connection with allegations concerning his daughter's marriage.
Read more about: singer marriage filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X