ಹಿರೋಯಿನ್ ಆದ್ರು 'ಬಿಸಿ ರಾಗಿ ಹಿಟ್ಟು, ಡೋಲೊ 650' ಡೈಲಾಗ್‌ನ ವೈರಲ್ ಗರ್ಲ್ ಶಶಿರೇಖಾ!
ಮೂರು ವರ್ಷಗಳ ಕಾಲ ಕೊರೊನಾ ಮಹಾಮಾರಿ ಜನರ ನಿದ್ದೆಗೆಡಿಸಿತ್ತು. ಈ ವೇಳೆ ಜನ ಸಾವು ನೋವುಗಳ ಜೊತೆಗೆ ಜೀವನ ಮಾಡಲು ಕಷ್ಟಪಟ್ಟಿದ್ದಾರೆ. ತಮ್ಮ ಕಷ್ಟಗಳನ್ನು ಮಾಧ್ಯಮಗಳ ಮೂಲಕ ತೆರೆದಿಟ್ಟಿದ್ದಾರೆ. ಇದೇ ವೇಳೆ ಕೊರೊನಾ ಬಂದು ಆಸ್ಪತ್ರೆ ಸೇರಿದವರ ಸಂಕಷ್ಟವನ್ನು ವಿಭಿನ್ನವಾಗಿ ಹೇಳಿ ರಾತ್ರೋರಾತ್ರಿ ಫೇಮಸ್ ಆಗಿದ್ದು ಶಶಿರೇಖಾ ಎಂಬ ಹೆಣ್ಣುಮಗಳು.
ಹೌದು, "ಎಂತದ್ದು ಇಲ್ಲಾ ಸರ್ ಬಿಸಿ ರಾಗಿ ಹಿಟ್ಟು.. ಡೋಲೋ 650 ಮಾತ್ರೆ " ಎನ್ನುವ ಡೈಲಾಗ್ ಏಕ್‌ದಮ್ ಫೇಮಸ್ ಆಗಿತ್ತು. ಆಗ ಈ ಡೋಲೋ 650 ಮಾತ್ರೆಗೆ ಶಶಿರೇಖಾ ಅಂಬಾಸಿಡರ್ ಎನ್ನುವಂತೆ ಆಗಿತ್ತು. ಮೈಸೂರುಮೂಲದ ಶಶಿರೇಖಾ ತಮ್ಮ ಡೈಲಾಗ್‌ಗಳಿಂದ ಫೇಮಸ್ ಆದ ಬೆನ್ನಲ್ಲೇ ಸೋಶಿಯಲ್ ಮಿಡಿಯಾಕ್ಕೂ ಕಾಲಿಟ್ಟಿದ್ದರು. ಬಳಿಕ ಅವರ ಫ್ಯಾನ್ ಫಾಲೋವಿಂಗ್ ಕೂಡ ಸಕತ್ ಆಗಿಯೇ ಹೆಚ್ಚಾಗಿತ್ತು. ಸುಮಾರು ಎರಡು ಲಕ್ಷದ ಹತ್ತಿರಕ್ಕೆ ಇವರ ಫಾಲೋವರ್ಸ್ ಇದ್ದಾರೆ. ಈಗ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿರುವ ಡೋಲೋ 650 ಶಶಿರೇಖಾ
ಮೈಸೂರಿನ ಡೋಲೋ 650 ಶಶಿರೇಖಾ ಇದೀಗಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದು, ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಸಿನಿಮಾ ಘೋಷಣೆಯಾಗಿದ್ದು, ತಮ್ಮ ಚಿತ್ರಕ್ಕೆ ಅವರೇ ನಾಯಕಿ ಎಂದು ನಿರ್ದೇಶಕ ಮತ್ತು ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸೌಜನ್ಯ' ಎಂಬ ಶೀರ್ಷಿಕೆ ಇಡಲಾಗಿರುವ ಚಿತ್ರಕ್ಕೆ ಶಶಿರೇಖಾ ನಾಯಕಿ. ಕಳೆದ ಏಳು ವರ್ಷಗಳಿಂದ ಸಿನಿಮಾ ರಂಗದಲ್ಲಿರುವ ಎಚ್‌ಡಿ ಕೋಟೆಯ ಬೆಟ್ದ ಬೀಡು ಗ್ರಾಮದ ಚೇತನ್ ದೇವರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸೌಜನ್ಯ ಕಥೆ ಹೇಳಲಿದ್ದಾರೆ ಶಶಿರೇಖಾ
ಚೇತನ್ ದೇವರಾಜ್ ನಿರ್ದೇಶನ ಮಾಡಲಿರುವ ಸಿನಿಮಾವನ್ನು ದೋಸ್ತಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಸೌಜನ್ಯ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡದ ನಿರ್ದೇಶಕರು, ಇದೊಂದು ಮಹಿಳಾ ದೌರ್ಜನ್ಯದ ಕುರಿತಾಗಿ ತಯಾರಿಸುವಂತಹ ಚಿತ್ರ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ ಎಂದು ಹಿಂಟ್ ನೀಡಿದ್ದಾರೆ.

ಸಿನಿಮಾ ಬಗ್ಗೆ ಸ್ಥಳೀಯ ಸುದ್ದಿ ವಾಹಿನಿ ಸುದ್ದಿನಾಡು ಜೊತೆ ಮಾತನಾಡಿರುವ ಡೋಲೋ 650 ಶಶಿರೇಖಾ, "ನಮ್ಮ ಸಿನಿಮಾ ಹೆಸರು ಸೌಜನ್ಯ. ಈ ಸಿನಿಮಾದಲ್ಲಿ ನಾವು ಸಾಮಾಜಿಕ ಸಂದೇಶ ನೀಡುತ್ತಿದ್ದೇವೆ. ಅತ್ಯಾಚಕ್ಕೆ ಒಳಗಾದ ಹೆಣ್ಣು ಮಗು... ಆಕೆಯ ಅಂತರಾಳವನ್ನು ಅತ್ಯಾಚಾರ ಮಾಡಲು ಬಂದ ವ್ಯಕ್ತಿ ಎದುರು ಹೇಳಿದಾಗ ಆತ ಹೇಗಿ ಬದಲಾಗಿ, ಅವನ ಆ ಕೆಟ್ಟ ನಿರ್ಧಾರ ಬದಲಿಸುತ್ತಾನೆ ಎಂಬುದನ್ನು ನಮ್ಮ ಸಿನಿಮಾ ಹೇಳುತ್ತದೆ" ಎಂದು ಶಶಿರೇಖಾ ಚಿತ್ರದ ಕೆಲ ಅಂಶಗಳನ್ನು ಬಿಟ್ಟುಕೊಟ್ಟಿದ್ದಾರೆ.
ಇನ್ನು, ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಡೋಲೋ 650 ಶ ಶಶಿರೇಖಾ ಸಾಕಷ್ಟು ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಹಲವು ಲಿಪ್ ಸಿಂಕ್ ವಿಡಿಯೋಗಳು, ಪ್ರಮೋಷನಲ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 1 ಲಕ್ಷದ 76ಸಾವಿರ (176K) ಫಾಲೋವರ್ಸ್‌ಳನ್ನು ಹೊಂದಿದ್ದಾರೆ.


Click it and Unblock the Notifications











