For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್‌ಗೆ ಮುತ್ತಿಟ್ಟ ವೈರಲ್ ಹುಡುಗ ನವಾಜ್!

  |

  ವಿಭಿನ್ನ ಸ್ಟೈಲ್‌ನಲ್ಲಿ ಮಾಧ್ಯಮಗಳ ಕ್ಯಾಮರಾ ಮುಂದೆ ಸಿನಿಮಾ ರಿವ್ಯೂ ಮಾಡುವ ಹುಡುಗ ನವಾಜ್. ಪ್ರಾಸವಾಗಿ ರೊಚ್ಚಿಗೆದ್ದು ಮಾತನಾಡುವ ಈ ಹುಡುಗ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್. ಇತ್ತೀಚೆಗೆ ನಟ ದರ್ಶ್‌ನ ಭೇಟಿ ಮಾಡಿರುವ ನವಾಜ್ ಕೈ ಕುಲುಕಿ ಮುತ್ತಿಟ್ಟಿದ್ದಾನೆ. ಆ ವೀಡಿಯೋ ಈಗ ವೈರಲ್ ಆಗಿದೆ.

  'ಅಭಿಮಾನ' ಹಾಗೂ 'ಡಿಯರ್ ಡ್ಯಾಡಿ' ಸಿನಿಮಾಗಳ ಪೋಸ್ಟರ್‌ ಲಾಂಚ್‌ಗಾಗಿ ಅಭಿಮಾನಿಗಳು ದರ್ಶನ್ ನಿವಾಸದ ಬಳಿ ಹೋಗಿದ್ದರು. ವೈರಲ್ ಹುಡುಗ ನವಾಜ್ ಕೂಡ ಆ ತಂಡದಲ್ಲಿದ್ದ. ನಟ ದರ್ಶನ್ ಬೆಳಗ್ಗೆ ಮನೆಯಿಂದ ಹೊರಬಂದು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ನವಾಜ್ ಚಾಲೆಂಜಿಂಗ್ ಸ್ಟಾರ್ ಕೈ ಕುಲುಕಿ ಕೈಗೆ ಮುತ್ತು ಕೊಟ್ಟಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ಹರಿದಾಡ್ತಿದೆ. ದರ್ಶನ್ ಬ್ಯುಸಿ ಇದ್ದ ಕಾರಣ ಎರಡು ಸಿನಿಮಾಗಳ ಪೋಸ್ಟರ್ ರಿಲೀಸ್ ಮಾಡಿ ಹೊರಟಿದ್ದಾರೆ.

  ನಟ ದರ್ಶನ್‌ಗೆ ಅವಮಾನ: ಕೊನೆಗೂ ಕ್ಷಮೆ ಕೇಳಿದ ಮೈಸೂರಿನ ಯುವಕನಟ ದರ್ಶನ್‌ಗೆ ಅವಮಾನ: ಕೊನೆಗೂ ಕ್ಷಮೆ ಕೇಳಿದ ಮೈಸೂರಿನ ಯುವಕ

  ನವಾಜ್ ಕಿರುಚುತ್ತಾ ಅರಚುತ್ತಾ ರಿವ್ಯೂ ಮಾಡೋದು ಈಗ ಎಲ್ಲರ ಗಮನ ಸೆಳೆಯುತ್ತಿದೆ. 'ಬಡವ ರಾಸ್ಕಲ್' ಹಾಗೂ 'ಲವ್ ಮಾಕ್ಟೇಲ್'-2 ಚಿತ್ರಗಳಿಗೆ ಈತ ರಿವ್ಯೂ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಿನಿಂದ ಈತನಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಸ್ವತಃ ಡಾಲಿ ಧನಂಜಯ್, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿ ಫೋನ್ ಮಾಡಿ ಈತನ ರಿವ್ಯೂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಸದ್ಯ ಬಿಕಾಂ ಓದುತ್ತಿರುವ ನವಾಜ್ ಫಸ್ಟ್ ಡೇ ಫಸ್ಟ್‌ ಶೋ ಕನ್ನಡ ಸಿನಿಮಾ ನೋಡಲು ಥಿಯೇಟರ್ ಮುಂದೆ ಹಾಜರಾಗುತ್ತಾನೆ.

   2 ಚಿತ್ರಗಳಲ್ಲಿ ವೈರಲ್ ಹುಡುಗ ನಟನೆ

  2 ಚಿತ್ರಗಳಲ್ಲಿ ವೈರಲ್ ಹುಡುಗ ನಟನೆ

  ವೈರಲ್ ಹುಡುಗ ನವಾಜ್ 'ಅಭಿಮಾನ' ಹಾಗೂ 'ಡಿಯರ್ ಡ್ಯಾಡಿ' ಅನ್ನುವ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾನಂತೆ. ಅರ್ಜುನ್ 'ಅಭಿಮಾನ' ಸಿನಿಮಾ ನಿರ್ದೇಶನ ಮಾಡಿದ್ರೆ, ವಿಜಯ್ ಅಂಡ್ ಟೀಂ 'ಡಿಯರ್ ಡ್ಯಾಡಿ' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಸಿನಿಮಾಗಳ ರಿವ್ಯೂ ಮಾಡ್ಕೊಂಡಿದ್ದ ನಾನು 2 ಸಿನಿಮಾಗಳಲ್ಲಿ ನಟಿಸ್ತಿರೋದು ಖುಷಿಯಾಗ್ತಿದೆ ಎಂದು ನವಾಜ್ ಹೇಳಿಕೊಂಡಿದ್ದಾನೆ.

  ಜುಲೈ ತಿಂಗಳಲ್ಲಿ ಅತೀ ಜನಪ್ರಿಯತೆ ಗಳಿಸಿದ ಕನ್ನಡದ ನಟ ಯಾರು? ಟಾಪ್ 5 ನಟರು ಯಾರು?ಜುಲೈ ತಿಂಗಳಲ್ಲಿ ಅತೀ ಜನಪ್ರಿಯತೆ ಗಳಿಸಿದ ಕನ್ನಡದ ನಟ ಯಾರು? ಟಾಪ್ 5 ನಟರು ಯಾರು?

   ದರ್ಶನ್‌ಗೆ ಮುತ್ತಿಟ್ಟ ತುಟಿ ಮುಟ್ಟುವುದಕ್ಕೆ ಬಿಡಲ್ಲ

  ದರ್ಶನ್‌ಗೆ ಮುತ್ತಿಟ್ಟ ತುಟಿ ಮುಟ್ಟುವುದಕ್ಕೆ ಬಿಡಲ್ಲ

  ಚಾಲೆಂಜಿಂಗ್ ಸ್ಟಾರ್ ದರ್ಶನ್‌ನ ಭೇಟಿಯಾದ ಖುಷಿಯನ್ನು ಹಂಚಿಕೊಂಡಿರುವ ನವಾಜ್, ದರ್ಶನ್ ಸರ್ ತುಂಬಾ ಸ್ವೀಟ್. ಅವರಿಗೆ ತುಂಬಾ ಕೋಪ ಅನ್ನುವುದೆಲ್ಲ ಸುಳ್ಳು ಎಂದಿದ್ದಾನೆ. ಡಿಬಾಸ್‌ಗೆ ಮುತ್ತು ಕೊಟ್ಟ ನನ್ನ ತುಟಿಯನ್ನು ಯಾರು ಮುಟ್ಟಬಾರದು. ಯಾರು ಮುಟ್ಟುವುದಕ್ಕೆ ಬಿಡಲ್ಲ ಎಂದಿದ್ದಾನೆ.

   ಭಟ್ಟರಿಗೆ ಅಭಿಮಾನಿಯ ಸಿಹಿ ಮುತ್ತು

  ಭಟ್ಟರಿಗೆ ಅಭಿಮಾನಿಯ ಸಿಹಿ ಮುತ್ತು

  ಇತ್ತೀಚೆಗೆ 'ಗಾಳಿಪಟ'-2 ರಿಲೀಸ್ ವೇಳೆ ಅಭಿಮಾನಿಯೊಬ್ಬ ನಿರ್ದೇಶಕ ಯೋಗರಾಜ್ ಭಟ್ಟರಿಗೆ ಮುತ್ತಿಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಕುಡಿದು ತೂರಾಡುತ್ತಿದ್ದ ಅಭಿಮಾನಿ ಹಣೆಗೆ ಮೊದಲು ಯೋಗರಾಜ್ ಭಟ್ ಮುತ್ತಿಟ್ರೆ, ನಂತರ ಆತ ಕೂಡ ಭಟ್ಟರನ್ನು ಅಪ್ಪಿ ಮುದ್ದಾಡಿದ್ದ. 'ಗಾಳಿಪಟ'-2 ಸಕ್ಸಸ್ ಮೀಟ್‌ ಮೀಟ್‌ನಲ್ಲಿ ಮುತ್ತಿಟ್ಟ ಪುಣ್ಯಾತ್ಮನಿಗೆ ಭಟ್ರು ಧನ್ಯವಾದ ತಿಳಿಸಿದ್ದರು.

   ರಾಜ್ಯಾದ್ಯಂತ ದರ್ಶನ್ ಅಭಿಮಾನಿಗಳ 'ಕ್ರಾಂತಿ'

  ರಾಜ್ಯಾದ್ಯಂತ ದರ್ಶನ್ ಅಭಿಮಾನಿಗಳ 'ಕ್ರಾಂತಿ'

  'ಕ್ರಾಂತಿ' ಸಿನಿಮಾ ಬಗ್ಗೆ ಅಭಿಮಾನಿಗಳು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. 'ಕ್ರಾಂತಿ' ಪೋಸ್ಟರ್ ಇರುವ ಟೀ-ಶರ್ಟ್ ತೊಟ್ಟು ಅಭಿಮಾನಿಗಳು ನಟ ದರ್ಶನ್‌ನ ಭೇಟಿ ಮಾಡಿದ್ದರು. ರಾಜ್ಯದ ಮೂಲೆ ಮೂಲೆಯಲ್ಲಿ 'ಕ್ರಾಂತಿ' ಸಿನಿಮಾ ಪೋಸ್ಟರ್‌ಗಳು ರಾರಾಜಿಸುವಂತೆ ಮಾಡಿದ್ದಾರೆ. ನಟ ದರ್ಶನ್ ಕೂಡ ಅಭಿಮಾನಿಗಳು ಈ ರೀತಿ ಸಿನಿಮಾ ಪ್ರಚಾರ ಮಾಡುವುದರ ಬಗ್ಗೆ ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಬೆಲೆಕಟ್ಟುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ರಾಜ್ಯೋತ್ಸವ ಸಂಭ್ರಮದಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರಲಿದೆ. ತರುಣ್ ಸುಧೀರ್ ನಿರ್ದೇಶನದ 'D56' ಚಿತ್ರಕ್ಕೆ ದರ್ಶನ್ ಸಿದ್ಧತೆ ನಡೆಸ್ತಿದ್ದಾರೆ.

  Recommended Video

  ಕನ್ನಡದ ಸಿನಿಮಾ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ರಂಗಾಯಣ ರಘು ಏನ್ ಅಂದ್ರು ? | Rangayana Raghu *Press Meet
  English summary
  Viral Guy Nawaz Kisses To Challenging Star Darshan Hand Video Viral. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X