ಅಂತೂ ಇಂತೂ ... ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ಬರೆದ ಪತ್ರದಲ್ಲಿ ಏನಿದೆ..?
ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಗೊತ್ತಲ್ಲವಾ..? ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಒಂದ್ಕಾಲದಲ್ಲಿ ನೆರಳಿನಂತೆ ಹಿಂಬಾಲಿಸುತ್ತಿದ್ದ ವ್ಯಕ್ತಿ. ದರ್ಶನ್ ಡೇಟ್ಸ್ ಗಳಿಂದ ಹಿಡಿದು, ತೂಗುದೀಪ ಡಿಸ್ಟ್ರಿಬ್ಯೂಷನ್ ನ ಕೆಲಸವನ್ನೆಲ್ಲ ನೋಡಿಕೊಳ್ಳುತ್ತಿದ್ದ ಮಲ್ಲಿ, ದರ್ಶನ್‌ಗಷ್ಟೇ ಅಲ್ಲದೇ ದರ್ಶನ್ ಹೆಸರಿನಲ್ಲಿ ಅರ್ಜುನ್ ಸರ್ಜಾ ಸೇರಿ ಅನೇಕರಿಗೆ ಉಂಡೆನಾಮ ತೀಡಿ ಹತ್ ಹತ್ರ ಏಳು ವರ್ಷಗಳಾಗಿವೆ.
ಇಂಥ ಮಲ್ಲಿಯ ಹೆಸರು ಕಾಣೆಯಾದವರ ಬಗ್ಗೆ ಪ್ರಕಟಣೆ ಎಂಬ ಕಾಲಂನಲ್ಲಿ ಪ್ರಕಟವಾಗಿ ಅನೇಕ ವರ್ಷ ಆಗಿದೆ. ಆದರೆ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ. ಈ ಏಳು ವರ್ಷದಲ್ಲಿ ಮಲ್ಲಿಕಾರ್ಜುನ ಎಲ್ಲಿ ಹೋದ ..? ಏನಾದ.. ? ಅನ್ನುವುದು ಯಾರೆಂದರೆ ಯಾರಿಗೂ ಗೊತ್ತಾಗಲೇ ಇಲ್ಲ.

ಇನ್ನೂ ದರ್ಶನ್ ಮೇಲಿರುವ ಆರೋಪ ನಿಮಗೆ ಗೊತ್ತು. ದರ್ಶನ್ ಕುರಿತು ಹತ್ತಾರು ಮಾತು ಕೇಳಿ ಬರುತ್ತಿವೆ. ಯಾವುದಕ್ಕೂ ಹೇಸಲ್ಲ ಅನ್ನುವುದೇ ಅನೇಕರ ಅಭಿಪ್ರಾಯ. ಇನ್ನೂ ದರ್ಶನ್ ನಡಾವಳಿಯನ್ನ ತೀರಾ ಇತ್ತೀಚೆಗೆ ನೋಡಿದ ಅನೇಕರು ಮಲ್ಲಿಕಾರ್ಜುನ್ ಬಗ್ಗೆ ಚಿಂತೆಯನ್ನ ಮಾಡುತ್ತಿದ್ದಾರೆ. ರೇಣುಕಾಸ್ವಾಮಿಯಂತೆ ದರ್ಶನ್ ಎಲ್ಲಿ ಮಲ್ಲಿಯನ್ನೂ ಕೊಂದು ಹಾಕಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಸಂದರ್ಭ ಸನ್ನಿವೇಶ ಹೀಗಿರುವಾಗ ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ಆ ಕಾಲದಲ್ಲಿ ಅಂದರೆ ಕಾಣೆಯಾದ ಕೆಲವು ದಿನಗಳ ನಂತರ ಬರೆದಿದ್ದ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ
ಪತ್ರದಲ್ಲಿ ಏನಿದೆ..?
ಪ್ರೀತಿಯ ತೇಜಸ್ವಿನಿಗೆ , ಮೊದಲನೆಯದಾಗಿ ದಯವಿಟ್ಟು ನನ್ನನ್ನು ಕ್ಷಮಿಸು. ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ ಬಂದು ಸಾಲ ತೀರಿಸಿ ನನಗಂಟಿರೋ ಕಳಂಕನಾ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯೆತ್ತಿ ಎಲ್ಲರ ಮುಂದೆ ಜೀವನ ನಡೆಸುಬೇಕೆಂದುಕೊಂಡಿದ್ದೇನೆ. ಅಲ್ಲಿಯವರೆಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಈ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ . ದಯವಿಟ್ಟು ನನ್ನನ್ನು ಕ್ಷಮಿಸಿ. ಇಂತಿ ನಿಮ್ಮ ಪ್ರೀತಿಯ ಮಲ್ಲಿಕಾರ್ಜುನ

ಸದ್ಯಕ್ಕೆ ಮಲ್ಲಿಕಾರ್ಜುನ್ ಬರೆದಿದ್ದಾನೆ ಎನ್ನಲಾದ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ಪತ್ರ ವೈರಲ್ ಆದ ಬೆನ್ನಲ್ಲಿಯೇ ಅಷ್ಟಕ್ಕೂ ಮಲ್ಲಿ ಏನಾದ..? ಎಲ್ಲಿ ಹೋದ ಅನ್ನುವ ಪ್ರಶ್ನೆ ಕೂಡ ಮತ್ತೊಮ್ಮೆ ಅನೇಕರಿಗೆ ಈಗ ಕಾಡುತ್ತಿದೆ.
2010ರಲ್ಲಿಯೇ ಮೊದಲ ಸಲ ಟೋಪಿ ಹಾಕಿದ್ದ ಮಲ್ಲಿ..!
ಮಲ್ಲಿ ಬೆಸಿಕಲಿ ಉತ್ತರ ಕರ್ನಾಟಕ ಸೀಮೆಯ ಗದಗ ಜಿಲ್ಲೆಯವನು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೊದಲ ಸಲ ಚಿತ್ರದ ಆರಂಭದಲ್ಲಿ ಸಹ ನಿರ್ಮಾಪಕನಾಗಿದ್ದ ಈತ. ಆದರೆ ಸಿನಿಮಾ ಆರಂಭವಾದ ನಂತರ ಎಲ್ಲದರಲ್ಲಿಯೂ ಕಡ್ಡಿ ಅಲ್ಲಾಡಸಿಲು ಶುರುಮಾಡಿದ್ದ. ಚಿತ್ರದ ಪ್ರಮುಖ ನಿರ್ಮಾಪಕ ಯೋಗೇಶ್ ನಾರಾಯಣ್ ಅವ್ರನ್ನೇ ಓವರ್ ಟೇಕ್ ಮಾಡಲು ಮುಂದಾಗಿದ್ದ. ಎಷ್ಟರ ಮಟ್ಟಿಗೆ ಅಂದರೆ ಎಲ್ಲೆಲ್ಲಿಂದಲೋ ದುಡ್ಡು ತಗೆದುಕೊಂಡು ಬಂದು ಕಷ್ಟಪಟ್ಟು ಆ ಕಾಲದಲ್ಲಿ ಅತ್ಯಂತ ಪ್ರೀತಿಯಿಂದ ಚಿತ್ರ ನಿರ್ಮಾಣ ಮಾಡುತ್ತಿದ್ದ ಯೋಗೇಶ್ ನಾರಾಯಣ್ ಮಲ್ಲಿಯ ಉಪಟಳಕ್ಕೆ ಬೇಸತ್ತು ಹೋಗಿದ್ದರು. ಕೊನೆಗೆ ನೋವನ್ನ ತಡೆಯಲಾಗದೇ ಪತ್ರಿಕಾಗೋಷ್ಠಿಯನ್ನೂ ನಡೆಸಿ ಮಲ್ಲಿ ವಿರುದ್ಧ ಕೆಂಡ ಕಾರಿದ್ದರು. ಆದರೆ ದುರ್ದೈವ ಯೋಗೇಶ್ ನಾರಾಯಣ್ ಬೆಂಬಲಕ್ಕೆ ಅವತ್ತು ನಿಲ್ಲಬೇಕಿದ್ದ ಯಶ್, ಮಲ್ಲಿಕಾರ್ಜುನ ಎಂಬ 420 ಪರ ವಕಾಲತ್ತನ್ನ ವಹಿಸಿಕೊಂಡಿದ್ದರು. ಯೋಗೇಶ್ ನಾರಾಯಣ್ ಅವರನ್ನ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದ್ದರು. ಮಲ್ಲಿಕಾರ್ಜುನ್ ನ ನಂಬಿ ಹಣ ಕಳೆದುಕೊಂಡ ಸಂತ್ರಸ್ಥರಲ್ಲಿ ಒಬ್ಬರಾಗಿರುವ ಯೋಗೇಶ್ ನಾರಾಯಣ್ ಅವರಿಗೆ ಇವತ್ತು ಕೂಡ ಒಂದೂವರೆ ಕೋಟಿ ಹಣ ವಾಪಸ್ಸು ಬರಬೇಕು.

ಇಂಥ ಮಲ್ಲಿಕಾರ್ಜುನ ದರ್ಶನ್ ಹಾಗೂ ಅವರ ಸುತ್ತಮುತ್ತ ಇದ್ದ ವ್ಯಕ್ತಿಗಳಿಗೆ ಪಂಗನಾಮ ಹಾಕುವ ಮೊದಲು ಪಕ್ಕಾ ಪ್ಲಾನು ಮಾಡಿಕೊಂಡು, ಬೆಂಗಳೂರಿನಲ್ಲಿದ್ದ ಮನೆಯನ್ನು ಖಾಲಿ ಮಾಡಿ ಹೆಂಡತಿ ಮಕ್ಕಳನ್ನೆಲ್ಲಾ ತನ್ನ ಹುಟ್ಟೂರಿಗೆ ಬಿಟ್ಟು ಬಂದಿದ್ದ. ಒಮ್ಮೆಲೇ ಗಾಯಬ್ ಆಗಿದ್ದ.
ಕೆನಡಾದಲ್ಲಿ ಇದ್ದಾನಾ ಮಲ್ಲಿ..?
ಏಕಾಏಕಿ ಯಾವ ಸೂಚನೆಯನ್ನೂ ನೀಡದೆ ಊರುಬಿಟ್ಟು ಎಸ್ಕೇಪ್ ಆದ ಮಲ್ಲಿ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರವನ್ನ ಹುಡುಕುವ ಪ್ರಯತ್ನ ಹಿಂದೆ ಅನೇಕ ಬಾರಿಯಾಗಿದೆ. ಆದರೆ ಯಾರ ಬಳಿಯೂ ನಿಖರವಾದ ಉತ್ತರ ಇಲ್ಲ. ಆದರೆ ಈ ಹಿಂದೆ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮಲ್ಲಿ ಆ ದೇಶದಲ್ಲಿ ಇದ್ದಾನಾ ಅನ್ನುವ ಅನುಮಾನ ಮೂಡಿತ್ತು. ಅದರ ಪ್ರಕಾರ ಹೇಳೋದಾದರೆ ಮಲ್ಲಿ ಈಗ ಕೆನಡಾದಲ್ಲಿ ಸೆಟಲ್ ಆಗಿ ಅಲ್ಲೊಂದು ಫ್ಲಾಟು ಖರೀದಿಸಿ ಕೂಲಾಗಿ ಜೀವನ ನಡೆಸುತ್ತಿದ್ದಾನಂತೆ. ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಆಧಾರ ಸಮೇತ ಸಿಕ್ಕ ನಂತರವಷ್ಟೇ ಪಕ್ಕಾ ಆಗಲಿದೆಯಾದರೂ ವರ್ಷಾನುವರ್ಷಗಳಿಂದ ಗಾಂಧಿನಗರವನ್ನ ಅತೀ ಹತ್ತಿರದಿಂದ ಕಂಡವರಲ್ಲಿ ಇಂಥಹದ್ದೊಂದು ಗುಮಾನಿ ಇದ್ದೇ ಇದೆ. ಇಷ್ಟಕ್ಕೂ ಮಲ್ಲಿ ಯಾಮಾರಿಸಿ ತೆಗೆದುಕೊಂಡು ಹೋದ ಹಣವನ್ನು ಏನು ಮಾಡಿದ್ದಾನೆ? ನಂಬಿದವರನ್ನು ವಂಚಿಸುವ ದರ್ದಾದರೂ ಈತನಿಗೇನಿತ್ತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಮಲ್ಲಿಕಾರ್ಜುನ ಪ್ರತ್ಯಕ್ಷವಾದಾಗಲೇ ಗೊತ್ತಾಗಲಿದೆ. ಬದುಕಿದ್ದಾನಾ..? ಗೊತ್ತಿಲ್ಲ..


Click it and Unblock the Notifications











