ರೀಲ್ಸ್ ರೇಷ್ಮಾ ಆಂಟಿಯ ಮೇಲೆ ಪತಿಯಿಂದ ಹಲ್ಲೆ ? ತಂದೆಗೆ ಚೂರಿಯಿಂದ ಇರಿತ
ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮವಾದ ಕಂಟೆಂಟ್ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸುತ್ತಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ಹಲವಾರು ಸೋಶಿಯಲ್ ಮೀಡಿಯಾ ಇನ್ ಫ್ಯುಯೆನ್ಸರ್‌ಗಳು ಸಾಬೀತು ಮಾಡಿದ್ದಾರೆ. ಆದರೆ, ಇನ್ನು ಕೆಲವರು ಸಬ್ ಸ್ಕ್ರೈಬರ್ಸ್ ಗಳ ಸಂಖ್ಯೆ ಹೆಚ್ಚಿಸಲು ನಾನಾ ಕಸರತ್ತು ಮಾಡುತ್ತಾರೆ. ಲೈಕ್ಸ್, ವ್ಯೂವ್ಸ್ ಗಳನ್ನು ಹೆಚ್ಚೆಚ್ಚು ಪಡೆಯಲು.
ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಕೂಡ ಪ್ರಾಮಾಣಿಕವಾಗಿ ಮಾಡುತ್ತಾರೆ. ಇನ್ನೂ ಕೆಲವೊಮ್ಮೆ ಅಸಭ್ಯ- ಅಶ್ಲೀಲವಾದ ಕಂಟೆಂಟ್ ಗಳನ್ನು ಹಾಕುತ್ತಾರೆ. ಈ ಸಾಲಿಗೆ ಈಗ ರೀಲ್ಸ್ ರೇಷ್ಮಾ ಅವರು ಕೂಡ ಸೇರಿಕೊಂಡಿದ್ದಾರೆ ಎನ್ನುವುದು ಸದ್ಯಕ್ಕೆ ಹಲವರಲ್ಲಿರುವ ಗುಮಾನಿ.

ಹೌದು, ಹಾಯ್ ಫ್ರೆಂಡ್ಸ್ ಎಂದು ಹೇಳುತ್ತಲೇ ಅನೇಕರ ಗಮನ ಸೆಳೆದವರು ರೇಶ್ಮಾ. ಆ ನಂತರ ರೀಲ್ಸ್ ರೇಶ್ಮಾ ಎಂದೇ ಖ್ಯಾತಿಯನ್ನು ಪಡೆದ ಇವರು ಗಿಚ್ಚ ಗಿಲಿಗಿಲಿ ಕಾರ್ಯಕ್ರಮಕ್ಕೆ ಕೂಡ ಹೋಗಿ ಬಂದರು. ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಕಡಿಮೆ 1.87 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ರೇಶ್ಮಾ ತೀರಾ ಇತ್ತೀಚೆಗೆ ನವೀನ್ ಕುಮಾರ್ ಎಂಬ ವ್ಯಕ್ತಿಯ ಜೊತೆ ರೀಲ್ಸ್ ಮಾಡಿದ್ದರು. ಯಮ್ಮೋ ಯಮ್ಮೋ ಎಂದು ಕುಣಿದು ನೋಡುಗರ ಹುಬ್ಬೇರಿಸಿದ್ದರು.
ಇಂಥಾ ರೇಶ್ಮಾ ಸದ್ಯ ತಮ್ಮ ಮತ್ತು ಮಗನ ಮೇಲೆ ಆರೋಪ ಮಾಡಿದ್ದಾರೆ. ನನ್ನ ಮೇಲೆ ಮತ್ತು ನನ್ನ ಅಪ್ಪನ ಮೇಲೆ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋದಲ್ಲಿ ತಮ್ಮ ಪತಿಯತ್ತ ಬೆರಳು ತೋರಿಸುವ ರೀಲ್ಸ್ ರೇಶ್ಮಾ ನೀವೆಲ್ಲ ನನ್ನ ಗಂಡ ಒಳ್ಳೆಯವನು ಒಳ್ಳೆಯವನು ಅಂತ ಹೇಳ್ತೀರಲ್ಲ ಇಲ್ನೋಡಿ ನನ್ನ ಕಣ್ಣುಗಳಿಗೆ ಗಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ಅಪ್ಪಂಗೂ ಚಾಕು ಚುಚ್ಚಿದಾರೆ ಅವರಿಗೆ ರಕ್ತ ಸುರಿಯುತ್ತಿದೆ ಎಂದು ಹೇಳಿರುವ ರೀಲ್ಸ್ ರೇಶ್ಮಾ ನನ್ನ ಗಂಡ ಮತ್ತು ನನ್ನ ಮಗ ಇಬ್ಬರು ಸೇರಿಕೊಂಡು ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಇವರ ತಂದೆ ಇಲ್ಲ ಇಲ್ಲ ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ರೀಲ್ಸ್ ರೇಶ್ಮಾ ಅವರು ಸುಮ್ಮನೆ ತಮಾಷೆಗೆ ಮಾಡಿದ್ದಾರಾ ಅಥವಾ ನಿಜಕ್ಕೂ ಅವರ ಮೇಲೆ ಹಲ್ಲೆ ನಡೆದಿದೆಯಾ ಎನ್ನುವುದು ಖುದ್ದು ಅವರೇ ಹೇಳಬೇಕಾದರೂ ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸುನಾಮಿ 2780 ಎಂಬ ಖಾತೆಯಿಂದ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.


Click it and Unblock the Notifications











