ದರ್ಶನ್ ಬೆಂಬಿಡದ ಪವಿತ್ರಾ ಗೌಡ, ಡಿ-ಬಾಸ್ ಸಫಾರಿ ಮಾಡಿದ ಮಾಜಿ ನಟಿ ; ವಿಡಿಯೋ ವೈರಲ್..!
'ಅಗಮ್ಯ' ಎಂಬ ಪರಮತೋಪು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಉದಯಿಸಿದವರು ಪವಿತ್ರಾ ಗೌಡ. ಆ ನಂತರ ಎಸ್.ನಾರಾಯಣ್ ನಿರ್ದೇಶನದ ಛತ್ರಿಗಳು ಸಾರ್ ಛತ್ರಿಗಳು ಚಿತ್ರದಲ್ಲಿ ಮೂವರು ನಾಯಕಿಯರಲ್ಲಿ ಒಬ್ಬರಾಗಿದ್ದ ಪವಿತ್ರಾ ಗೌಡ, ಸಾ.ರಾ.ಗೋವಿಂದು ಅವರ ಮಗ ಅನೂಪ್ ಅಭಿನಯಿಸಿದ್ದ ಸಾಗುವ ದಾರಿಯಲ್ಲಿ ಎಂಬ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದರು. ಇನ್ನೂ ಪವಿತ್ರಾ ಗೌಡ ಈಗ ಕೇವಲ ಪುರಾತನ ನಾಯಕಿ..
ಮಾತ್ರ ಅಲ್ಲ ದರ್ಶನ್ ಸಾಂಗತ್ಯ ಬೆಳೆಸಿಕೊಂಡ ನಂತರ ಉದ್ಯಮಿಯಾಗಿ ಕೂಡ ಹೊರ ಹೊಮ್ಮಿದ್ದಾರೆ. ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಾಗಿದ್ದಾರೆ. ಆ ನಂತರ ತಮಗೆ ನೆರವಾದ ದರ್ಶನ್ ಅವರನ್ನು ಕರೆದುಕೊಂಡು ಪರಪ್ಪನ ಅಗ್ರಹಾರಕ್ಕೂ ಹೋಗಿ ಬಂದಿದ್ದಾರೆ. ಒಂದರ್ಥದಲ್ಲಿ ದರ್ಶನ್ ಪಾಲಿಗೆ ಮಗ್ಗಲ ಮುಳ್ಳು ಆದವರು ಪವಿತ್ರಾ ಗೌಡ.

ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿದ ಕುಖ್ಯಾತಿ ಹೊಂದಿರುವ ಪವಿತ್ರಾ ಗೌಡ, ಸದ್ಯ.. ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜೈಲಿಂದ ಹೊರ ಇದ್ದಾರೆ. ಜಾಮೀನು ಪಡೆದು ನಿರಾಳರಾಗಿದ್ದಾರೆ.
ಈ ಪ್ರಕರಣದ ಅಂತ್ಯ ಅದ್ಯಾವ ಕಾಲಕ್ಕೆ ಆಗುತ್ತೆ ಎನ್ನುವುದು ಗೊತ್ತಿಲ್ಲವಾದರೂ ದರ್ಶನ್ ದರ್ಶನ ಪಡೆಯದ ಪವಿತ್ರಾ ಗೌಡ ಸದ್ಯ ವಿಚಲಿತರಾಗಿದ್ದಾರೆ ಎನ್ನುವ ಸುದ್ದಿ ಇದೆ. ದರ್ಶನ್ ಫೋನ್ ನಂಬರ್ ಪಡೆಯಲು ನ್ಯಾಯಾಲಯದ ಆವರಣದಲ್ಲಿಯೇ ಪವಿತ್ರಾ ಹರಸಾಹಸ ಮಾಡಿದ್ದರು ಎನ್ನುವ ಸುದ್ದಿ ಕೂಡ ಕೆಲ ದಿನಗಳ ಹಿಂದೆ ಹಲವು ಮಾಧ್ಯಮಗಳಲ್ಲಿ ಪ್ರಸಾರ ಕೂಡ ಆಗಿದೆ.
ಇನ್ನು, ಮತ್ತೊಂದು ಕಡೆ ದರ್ಶನ್ ಅವರ ಮೇಲೆ ವಿಜಯಲಕ್ಷ್ಮಿ ಹದ್ದಿನ ಕಣ್ಣಿಟ್ಟಿದ್ದಾರೆ ಎಂಬ ಮಾತು ಕೂಡ ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ದರ್ಶನ್ ಜೈಲಿಂದ ಹೊರ ಬಂದ ನಂತರ ತಾವಾಯ್ತು, ತಮ್ಮ ಮನೆಯಾಯ್ತು, ತಮ್ಮ ಚಿತ್ರದ ಚಿತ್ರೀಕರಣವಾಯ್ತು ಎಂದು ಓಡಾಡಿಕೊಂಡು ಇದ್ದಾರೆ. ಪತ್ನಿಯ ಜೊತೆ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಆದರೆ ಇದೇ ಸಮಯದಲ್ಲಿ ಮತ್ತೊಂದು ಬದಿಯಲ್ಲಿ ಪವಿತ್ರಾ ಗೌಡ ತಮ್ಮ ನಲ್ಮೆಯ ಸ್ನೇಹಿತ-ಪ್ರಿಯಕರ ದರ್ಶನ್ ಅವರ ನೆನಪಿನಲ್ಲಿ ಕಾಲ ದೂಡುತ್ತಿದ್ದಾರೆ. ಅನುದಿನ ದರ್ಶನ್ ಅವರನ್ನು ನೆನೆಯುತ್ತಿದ್ದಾರೆ.

ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಪವಿತ್ರಾ ಗೌಡ ಸದ್ಯ ಇಡೀ ರೇಣುಕಾಸ್ವಾಮಿ ಪ್ರಕರಣಕ್ಕೆ ಮುನ್ನುಡಿ ಬರೆದ, ರೇಣುಕಾಸ್ವಾಮಿ ಪ್ರಕರಣದಿಂದ ಭಾರೀ ಸುದ್ದಿಯಾದ ಸ್ಟೋನಿ ಬ್ರೂಕ್ ಗೆ ಭೇಟಿ ನೀಡಿದ್ದಾರೆ. ದರ್ಶನ್ ತಮ್ಮ ಅಮೃತ ಹಸ್ತದಿಂದ ತೆಗೆದ ಫೋಟೊಗಳನ್ನು ಕಣ್ತುಂಬಿಕೊಂಡಿದ್ದಾರೆ.
ಹೌದು, ರೇಣುಕಾಸ್ವಾಮಿ ಕೊಲೆಗೂ ಮುನ್ನ ದರ್ಶನ್ ಭೇಟಿ ನೀಡಿದ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿ ಪವಿತ್ರಾ ಗೌಡ ಸದ್ಯ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮತ್ತೊಬ್ಬ ವ್ಯಕ್ತಿ ವಿನಯ್ ಒಡೆತನದ ಈ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ದರ್ಶನ್‌ಗಾಗಿಯೇ ವಿಶೇಷ ಸ್ಥಳದ ವ್ಯವಸ್ಥೆ ಇದೆ. ದರ್ಶನ್‌ಗಾಗಿಯೇ ಮೀಸಲಿರುವ ಈ ಸ್ಥಳಕ್ಕೆ ಡಿ-ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ. ಇಲ್ಲಿ ದರ್ಶನ್ ಕ್ಯಾಮರಾದಲ್ಲಿ ಸೆರೆಯಾದ ಆನೆ, ಚಿರತೆ, ಹಲವಾರು ಪಕ್ಷಿಗಳ ವನ್ಯಜೀವಿಗಳ ಚಿತ್ರಗಳ ಸಂಗ್ರಹಾಲಯ ಇದೆ.
ಈ ವಿಶೇಷವಾದ ಸಂಗ್ರಹಾಲಯಕ್ಕೆ ಪವಿತ್ರಾ ಗೌಡ ಭೇಟಿ ಕೊಟ್ಟಿದ್ದು,ಪ್ರದೀಪ್ ಎಂಬ ವ್ಯಕ್ತಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪವಿತ್ರಾ ಗೌಡ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ''ಅಕ್ಕಾ ನೀನು ಯಾವಾಗಲೂ ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ'' ಎಂದು ಕೂಡ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಕೆಲ ಗಂಟೆಗಳ ಹಿಂದೆ ಪವಿತ್ರಾ ಗೌಡ ಕೂಡ ರಿಪ್ಲೈ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನ ಸೆಳೆಯುತ್ತಿದೆ. ವೈರಲ್ ಆಗುತ್ತಿದೆ. ದರ್ಶನ್ ಅವರ ಅಪ್ಪಟ ಅಭಿಮಾನಿಗಳ ಆಕ್ರೋಶಕ್ಕೂ ಕೂಡ ಈ ವಿಡಿಯೋ ಗುರಿಯಾಗುತ್ತಿದೆ. ದರ್ಶನ್ ಅವರನ್ನು ನೆಮ್ಮದಿಯಾಗಿ ಇರೋಕೆ ಬಿಡದೆ.. ಜೀವನ್ ಪೂರ್ತಿ ಅವರ ಜೀವ ಹಿಂಡಬೇಕು ಎಂದು ನೀವು ಡಿಸೈಡ್ ಮಾಡಿದಂತೆ ಇದೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











