ಸೈನಿಕರ ದಿನಾಚರಣೆಗೆ ಸೈನಿಕನಿಂದಲೇ ಸೈನಿಕನ ಪೋಸ್ಟರ್ ಬಿಡುಗಡೆ
ಸೈನಿಕರ ದಿನಾಚರಣೆಯ ಈ ದಿನ 'ವಿರಾಟ ಪರ್ವ' ಕನ್ನಡ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಸೈನಿಕನ ಪೋಸ್ಟರ್ ಅನ್ನು ಮೈಸೂರಿನ ವೀರಯೋಧ ಹೇಮಚಂದ್ ಬಿಡುಗಡೆ ಮಾಡಿದ್ದಾರೆ.
ಭಗತ್ ವೀರ್ ಸಿಂಗ್ ಪಾತ್ರದಲ್ಲಿ ಯಶ್ ಶೆಟ್ಟಿ ನಟಿಸಿದ್ದಾರೆ. ತಮ್ಮ ಪಾತ್ರಗಳ ಮೂಲಕ ದಿನೇ ದಿನೇ ಸ್ಯಾಂಡಲ್ ವುಡ್ ನಲ್ಲಿ ಬೆಳೆಯುತ್ತಿರುವ ಯಶ್ ಶೆಟ್ಟಿ 'ವಿರಾಟ ಪರ್ವ'ದಲ್ಲಿ ಎರಡು ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮೂರು ಜನ ಸಹಾಯಕ ನಿರ್ದೇಶಕರ ಕಥೆ ಸಿನಿಮಾದಲ್ಲಿ ಇದೆ. ಮೇಜರ್ ಹಾಗೂ ಸಹ ನಿರ್ದೇಶಕ ಪಾತ್ರವನ್ನು ಯಶ್ ನಿರ್ವಹಿಸಿದ್ದಾರೆ. ಯಶ್ ಇಲ್ಲಿ ರಾಮ್ ಗೋಪಾಲ್ ವರ್ಮ ಅಭಿಮಾನಿಯಾಗಿದ್ದಾರೆ. ಅರು ಗೌಡ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ.

'ಮುದ್ದು ಮನಸೇ' ಖ್ಯಾತಿಯ ಅನಂತ್ ಶೈನ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸುನೀಲ್ ರಾಜ್ ನಿರ್ಮಾಣ ಮಾಡಿದ್ದಾರೆ. ಮೈಸೂರಿನಲ್ಲಿ ಸಿನಿಮಾದ ಬಹುಪಾಲು ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿದಿದ್ದು, ಫೆಬ್ರವರಿಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಈ ಸಿನಿಮಾದೊಂದಿಗೆ 'ಧರಣಿ ಮಂಡಲ ಮಧ್ಯದೊಳಗೆ' 'ಕಾಲಾಂತಕ', 'ಸಲಗ', 'ಕೃಷ್ಣ ಟಾಕೀಸ್', 'ಏಕ್ ಲವ್ ಯಾ' ಸಿನಿಮಾಗಳಲ್ಲಿ ಯಶ್ ನಟಿಸುತ್ತಿದ್ದಾರೆ.


Click it and Unblock the Notifications











