ಅಪ್ಪು ಪತ್ನಿ ಅಶ್ವಿನಿ ನಿರ್ಮಾಣದ ಮುಂದಿನ ಸಿನಿಮಾ ಯಾವುದು ; ನಾಯಕನಾಗ್ತಾರಾ ಯುವ ರಾಜ್ ಕುಮಾರ್ ?

ಪುನೀತ್ ರಾಜ್ ಕುಮಾರ್ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಕಟ್ಟಿದ್ದ ಸಂಸ್ಥೆ ಪಿ.ಆರ್.ಕೆ. ಪ್ರಯತ್ನ ಹಾಗೂ ಪ್ರಯೋಗಕ್ಕೆ ವೇದಿಕೆಯಾಗಬೇಕೆಂಬ ನಿಟ್ಟಿನಲ್ಲಿ ಅಪ್ಪು ಆರಂಭ ಮಾಡಿದ್ದ ಪಿ.ಆರ್.ಕೆ ಸಂಸ್ಥೆಯನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಆಚಾರ್ & ಕೋ

ಆಚಾರ್ & ಕೋ ಮೂಲಕ ಅನೇಕ ಮಹಿಳಾ ಮಣಿಗಳನ್ನ ಕನ್ನಡ ಚಿತ್ರರಂಗಕ್ಕೆ ಕರೆತಂದ ಅಶ್ವಿನಿ ಪುನೀತ್ ರಾಜ್ ಕುಮಾರ್, ಸದ್ಯಕ್ಕೆ ಇನ್ನೊಂದು ಚಿತ್ರವನ್ನ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವಿಶೇಷ ಅಂದರೆ ಈ ಚಿತ್ರವನ್ನ ತತ್ಸಮ ತದ್ಭವ ಚಿತ್ರವನ್ನ ನಿರ್ದೇಶಿಸಿದ್ದ ವಿಶಾಲ್ ಆತ್ರೇಯ ನಿರ್ದೇಶಿಸಲಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಗಾಂಧಿನಗರದಲ್ಲಿ ಗುಲ್ಲಾಗಿದೆ. ಇದಕ್ಕೆ ಪೂರಕವಾಗಿ ವಿಶಾಲ್ ಆತ್ರೇಯ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನ ಭೇಟಿಯಾಗಿದ್ದಾರೆ.

Vishal Atreya to collaborate with PRK Films for a project

ತತ್ಸಮ ತದ್ಭವ ಮೆಚ್ಚಿದ್ದ ಅಪ್ಪು

ಹಾಗೇ ನೋಡಿದರೆ ವಿಶಾಲ್ ಆತ್ರೇಯ ನಿರ್ದೇಶನದ ತತ್ಸಮ ತದ್ಭವ ಚಿತ್ರದ ಕಥೆಯನ್ನ, ಪುನೀತ್ ರಾಜ್ ಕುಮಾರ್ ಮನಸಾರೆ ಮೆಚ್ಚಿದ್ದರು. ಆ ಚಿತ್ರಕ್ಕೆ ಬಂಡವಾಳ ಹೂಡುವ ಮನಸನ್ನೂ ಮಾಡಿದ್ದರು. ಆದರೆ ಆ ನಂತರ ನಿರ್ಮಾಪಕರ ಸ್ಥಾನಕ್ಕೆ ಪನ್ನಗ ಭರಣ ಬಂದರು. ಈಗ ಇನ್ನೊಮ್ಮೆ ಮತ್ತೊಂದು ಕಥೆಯ ಜೊತೆ ವಿಶಾಲ್ ಆತ್ರೇಯ ಪಿ.ಆರ್.ಕೆ ಸಂಸ್ಥೆಯ ಆಸು-ಪಾಸು ಕಾಣಿಸಿಕೊಂಡಿದ್ದಾರೆ. ಯಾರಿಗೆ ಗೊತ್ತು ಈ ಬಾರಿ ಈ ಬಾರಿ ವಿಶಾಲ್ ಆತ್ರೇಯ ಸಿನಿಮಾವನ್ನ ಪಿ.ಆರ್.ಕೆ ಸಂಸ್ಥೆಯೇ ನಿರ್ಮಾಣ ಮಾಡಿದರು ಮಾಡಬಹುದು. ಈ ಕುರಿತು ಅಧಿಕೃತ ಘೋಷಣೆ ಸದ್ಯದಲ್ಲಿಯೇ ಆಗುವ ನಿರೀಕ್ಷೆ ಇದೆ.

Vishal Atreya to collaborate with PRK Films for a project

ವಿಶಾಲ್ ಆತ್ರೇಯ-ಪಿ.ಆರ್.ಕೆ ಸಿನಿಮಾದಲ್ಲಿ ಯುವರಾಜ್ ಕುಮಾರ್..?

ಅಪ್ಪು ಉತ್ತರಾಧಿಕಾರಿ ಯುವ ರಾಜ್ ಕುಮಾರ್ ಅವರ ಚಿತ್ರವನ್ನ ಪಿ.ಆರ್.ಕೆ ಸಂಸ್ಥೆ ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಹಿಂದಿನಿಂದಲೂ ಕೇಳಿ ಬರ್ತಾನೆ ಇದೆ. ಇನ್ನೂ ಸದ್ಯಕ್ಕೆ ಯುವ ತಮ್ಮ ಚೊಚ್ಚಲ ಚಿತ್ರ ಯುವ ಬಿಡುಗಡೆಯನ್ನ ಎದುರು ನೋಡ್ತಿದ್ದಾರೆ. ಈ ಕಾರಣಕ್ಕೆ ವಿಶಾಲ್ ಆತ್ರೇಯ ನಿರ್ದೇಶನದ , ಅಶ್ವಿನಿ ಪುನೀತ್ ನಿರ್ಮಾಣದ ಈ ಚಿತ್ರದಲ್ಲಿ ಯುವರಾಜ್ ಕುಮಾರ್ ಕಾಣಿಸಿಕೊಳ್ಳಬಹುದು ಎಂಬ ಮಾತು ಕೂಡ ಕೇಳಿ ಬರ್ತಿದೆ. ಇನ್ನೂ ವಿಶಾಲ್ ಆತ್ರೇಯ ಮತ್ತೊಮ್ಮೆ ಮೇಘನಾ ರಾಜ್ ಹಾಗೂ ಪ್ರಜ್ವಲ್ ದೇವರಾಜ್ ಜೊತೆ ಕೆಲಸ ಮಾಡುವ ಉಮೇದಿಯಲ್ಲಿಯೂ ಇದ್ದಾರೆ. ಈ ನಿಟ್ಟಿನಲ್ಲಿಯೂ ಯೋಜನೆ ಜಾರಿಯಲ್ಲಿದೆ. ಈ ಕಾರಣಕ್ಕೆ ಈ ಚಿತ್ರದ ನಾಯಕ ಯಾರಾಗಲಿದ್ದಾರೆ ಎಂಬ ಭವಿಷ್ಯವಾಣಿ ಈಗ್ಲೇ ನುಡಿಯುವುದು ಸದ್ಯಕ್ಕೆ ಕಷ್ಟ.

More from Filmibeat

English summary
Vishal Atreya, known for Meghana Raj Starrer Tatsama Tadbhava is likely to collaborate with PRK Films for a project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X