'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!

ತಮಿಳು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗುವ ವೇಳೆ ಒಂದಲ್ಲ ಒಂದು ಕಾರಣಕ್ಕಾಗಿ ವಿರೋಧ ವ್ಯಕ್ತವಾಗುತ್ತೆ. ರಜನಿಕಾಂತ್, ಕಮಲ್ ಹಾಸನ್, ವಿಜಯ್ ಚಿತ್ರಗಳಿಗೆ ಕರ್ನಾಟಕದಲ್ಲಿ ಸಂಕಷ್ಟ ಉಂಟಾಗಿದ್ದ ಉದಾಹರಣೆಗಳಿವೆ.

ಕನ್ನಡಿಗರಿಗೆ ಅವಮಾನಿಸಿದ್ದಕ್ಕೋ ಅಥವಾ ಕಾವೇರಿ ವಿವಾದ ಕುರಿತು ಕರ್ನಾಟಕದ ವಿರುದ್ಧ ಮಾತನಾಡಿದ್ದಕ್ಕೋ ಅವರ ಚಿತ್ರಗಳಿಗೆ ತಡೆಯೊಡ್ಡಲಾಗಿತ್ತು. ಅದೇ ರೀತಿ, ಕನ್ನಡ ಸಿನಿಮಾಗಳಿಗೆ ತಮಿಳುನಾಡಿನಲ್ಲಿಯೂ ವಿರೋಧವಾಗಿರುವ ಘಟನೆಗಳಿವೆ.

ಸಿನಿಮಾ ವಿಚಾರದಲ್ಲಿ ಎರಡು ರಾಜ್ಯಗಳ ಮಧ್ಯೆ ಆಗಾಗ ಇಂತಹ ಬೆಳವಣಿಗೆಯಾಗುವ ಸಂದರ್ಭದಲ್ಲಿ, ಕೆಜಿಎಫ್ ಎಂಬ ಕನ್ನಡ ಸಿನಿಮಾವನ್ನ ತಮಿಳು ನಟ ವಿಶಾಲ್ ಅಲ್ಲಿ ವಿತರಣೆ ಮಾಡಲು ಮುಂದಾದರು. ತಮಿಳು ಕಲಾವಿದರ ಸಂಘದ ಅಧ್ಯಕ್ಷರಾಗಿರುವ ವಿಶಾಲ್, ಕನ್ನಡ ಚಿತ್ರವನ್ನೇಕೆ ತಮಿಳುನಾಡಿನಲ್ಲಿ ವಿತರಣೆ ಮಾಡ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಅದಕ್ಕೆ ಕಾರಣ, ಅಂದು ಯಶ್ ಮಾಡಿದ್ದ ಆ ಒಂದು ಸಹಾಯ. ಏನದು.? ಮುಂದೆ ಓದಿ....

ಚೆನ್ನೈ ಪ್ರವಾಹದ ವೇಳೆ ಯಶ್ ಮಾಡಿದ ಸಹಾಯ

ಚೆನ್ನೈ ಪ್ರವಾಹದ ವೇಳೆ ಯಶ್ ಮಾಡಿದ ಸಹಾಯ

ವಿಶಾಲ್ ಮತ್ತು ಕನ್ನಡ ನಟ ಯಶ್ ತುಂಬಾ ಕಾಲದ ಸ್ನೇಹಿತರು. ಸಿನಿಮಾ ಕಾರ್ಯಕ್ರಮಗಳನ್ನ ಬಿಟ್ಟು ಅದಕ್ಕಿಂತ ಹೊರಗಡೆಯೂ ಒಳ್ಳೆಯ ಬಾಂಧವ್ಯ ಹೊಂದಿರುವ ನಟರು. 2015ರಲ್ಲಿ ಚೆನ್ನೈನಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಮಹಾನಗರಿ ಚೆನ್ನೈ ಅಕ್ಷರಃ ನೀರಿನಲ್ಲಿ ಮುಳುಗಿಹೋಗಿತ್ತು. ಜನರ ಜೀವನ ಸಂಪೂರ್ಣವಾಗಿ ಬೀದಿಗೆ ಬಂದಿತ್ತು. ತಿನ್ನಲು ಅನ್ನವಿಲ್ಲದೇ, ತೊಡಲು ಬಟ್ಟೆಯಿಲ್ಲದೇ ಕಣ್ಣೀರಿಡುವ ಪರಿಸ್ಥಿತಿ ಬಂದಿತ್ತು. ಅಂತಹ ಸಮಯದಲ್ಲಿ ಯಶ್ ಚೆನ್ನೈ ಸಹಾಯಕ್ಕೆ ನಿಂತಿದ್ದರು ಎಂಬ ವಿಷ್ಯವನ್ನ ವಿಶಾಲ್ ಹೇಳಿದ್ದಾರೆ.

ಕರೆ ಮಾಡಿದ 12 ಗಂಟೆಗಳಲ್ಲಿ ಟ್ರಕ್ ಬಂತು

ಕರೆ ಮಾಡಿದ 12 ಗಂಟೆಗಳಲ್ಲಿ ಟ್ರಕ್ ಬಂತು

''ಚೆನ್ನೈನಲ್ಲಿ ಪ್ರಳಯವಾದಾಗ, ಇಲ್ಲಿನ ಜನತೆಗೆ ಸಹಾಯ ಬೇಕು ಎಂದು ಕೇಳಿದಾಗ ಕರ್ನಾಟಕದಿಂದ ಮೊದಲು ಬಂದ ಟ್ರಕ್ ನಟ ಯಶ್ ಅವರು ಕಳುಹಿಸಿದ್ದು. ಫೋನ್ ಮಾಡಿದ 12 ಗಂಟೆಗಳಲ್ಲಿ ಅಲ್ಲಿಂದ ಟ್ರಕ್ ಬಂತು. ಅದನ್ನ ನಾವು ಚೆನ್ನೈ ಹಲವು ಭಾಗಗಳಲ್ಲಿ ಹಂಚಿದೆವು'' ಎಂದು ನಟ ವಿಶಾಲ್ ಹೇಳಿದ್ರು.

ಯಶ್ ಋಣವನ್ನ ತೀರಿಸಬೇಕಿತ್ತು

ಯಶ್ ಋಣವನ್ನ ತೀರಿಸಬೇಕಿತ್ತು

'ಅಂದು ಯಶ್ ಅವರು ಮಾಡಿದ ಆ ಸಹಾಯವನ್ನ ನಾನು ಯಾವತ್ತಾದರೂ ತೀರಿಸಬೇಕು ಎಂದು ಅಂದುಕೊಂಡಿದ್ದೇ. ಅದಕ್ಕೆ ಈಗ ಅವಕಾಶ ಬಂದಿದೆ. ಅವರ ಕೆಜಿಎಫ್ ಚಿತ್ರವನ್ನ ನಾವು ಬಿಡುಗಡೆ ಮಾಡಿ, ಯಶಸ್ಸು ನೀಡಬೇಕು ಎಂದು ತೀರ್ಮಾನಿಸಿದೆ'' ಎಂದು ವಿಶಾಲ್ ಹೇಳಿಕೊಂಡರು.

ಯಶ್ ಕೆಲಸವನ್ನ ಮೆಚ್ಚಿದ ವಿಶಾಲ್

ಯಶ್ ಕೆಲಸವನ್ನ ಮೆಚ್ಚಿದ ವಿಶಾಲ್

ಯಶೋಮಾರ್ಗ ಫೌಂಡೇಶನ್ ಮೂಲಕ ಕರ್ನಾಟಕದ ಹಲವು ಊರುಗಳಿಗೆ ನೀರು ನೀಡಿರುವ ಬಗ್ಗೆ, ಕೆರೆಯಲ್ಲಿ ನೀರು ಸಂಗ್ರಹಿಸಲು ಸಹಾಯ ನೀಡಿದ ಬಗ್ಗೆ ವಿಶಾಲ್, ತಮಿಳು ಮಾಧ್ಯಮಗಳ ಮುಂದೆ ವಿವರಿಸಿದರು. ಇದಕ್ಕೆ ಅಲ್ಲಿ ನೆರದಿದ್ದ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.

ದುಡ್ಡಿಗಾಗಿ ವಿತರಣೆ ಮಾಡುತ್ತಿಲ್ಲ

ದುಡ್ಡಿಗಾಗಿ ವಿತರಣೆ ಮಾಡುತ್ತಿಲ್ಲ

''ಕೆಜಿಎಫ್ ಚಿತ್ರವನ್ನ ತಮಿಳಿನಲ್ಲಿ ದುಡ್ಡಿಗಾಗಿ ವಿತರಣೆ ಮಾಡುತ್ತಿಲ್ಲ. ನಾನು ಮಾಡುತ್ತಿರುವುದು, ನನ್ನ ಸ್ನೇಹಿತ ಮತ್ತು ಆತ ನಮಗಾಗಿ ಮಾಡಿರುವ ಸಹಾಯಕ್ಕಾಗಿ, ಅದನ್ನ ತೀರಿಸುವ ಉದ್ದೇಶದಿಂದ'' ಎಂದು ತಮಿಳು ನಟ ಹಾಗೂ ವಿತರಕ ವಿಶಾಲ್ ಬಹಿರಂಗಪಡಿಸಿದ್ದಾರೆ.

More from Filmibeat

English summary
Tamil actor Vishal has revealed the real reason behind why he is taken kgf tamil distribution rights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X