»   » ಅಲ್ಲಂ ಯಾರೋ ಗೊತ್ತಿಲ್ಲ , ಚುನಾವಣೆ ನನಗಲ್ಲ - ವಿಷ್ಣು

ಅಲ್ಲಂ ಯಾರೋ ಗೊತ್ತಿಲ್ಲ , ಚುನಾವಣೆ ನನಗಲ್ಲ - ವಿಷ್ಣು

Posted By: Staff
Subscribe to Filmibeat Kannada

ಬೆಂಗಳೂರು: ಅಲ್ಲಂ ವೀರಭದ್ರಪ್ಪ ಯಾರೂಂತಲೇ ನನಗೆ ಗೊತ್ತಿಲ್ಲ . ಇನ್ನು ಕನಕಪುರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ . ತಮಾಷೆಗೆ ಒಂದು ಮಿತಿ ಬೇಡ್ವಾ?

ಕನಕಪುರದಿಂದ ವಿಷ್ಣುವರ್ಧನ್‌ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ವದಂತಿಗಳಿಗೆ ವಿಷ್ಣುವರ್ಧನ್‌ ಪ್ರತಿಕ್ರಿಯೆಯಿದು. ಅವರು ಮಡಿಕೇರಿಯಲ್ಲಿ ಪರ್ವ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ತಮ್ಮ ಚುನಾವಣಾ ಸ್ಪರ್ಧೆ ಕುರಿತು ಎದ್ದಿದ್ದ ವದಂತಿಗಳಿಂದ ಅವರಿಗೆ ಕಿರಿಕಿರಿ ಆದಂತಿತ್ತು .

ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎನ್ನುವ ಸುದ್ದಿ ಕೇಳುತ್ತಿರುವುದು ಇದೇ ಮೊದಲು. ಕನಕಪುರ ಎಲ್ಲಿದೆ ಎನ್ನುವುದೇ ನನಗೆ ಗೊತ್ತಿಲ್ಲ . ಅಂಬರೀಷ್‌ ನನ್ನ ಸ್ನೇಹಿತ. ಆದರೆ, ಇಷ್ಟವಿಲ್ಲದ ವಿಷಯಗಳಲ್ಲಿ ಆತ ನನ್ನನ್ನು ಒತ್ತಾಯಿಸುವುದಿಲ್ಲ . ಜನಸೇವೆ ಮಾಡಲು ರಾಜಕಾರಣಿಯೇ ಆಗಬೇಕಿಲ್ಲ . ನಾನು ನನ್ನದೇ ರೀತಿಯಲ್ಲಿ ಜನಸೇವೆ ಮಾಡುತ್ತೇನೆ ಎಂದರು ವಿಷ್ಣು .

ಕೊನೆಯದಾಗಿ ವಿಷ್ಣು ಹೇಳಿದ್ದು - ನಾನೀಗ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಪುರುಸೊತ್ತಿಲ್ಲ . ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ.(ಇನ್ಫೋ ವಾರ್ತೆ)

English summary
Kanakapura Bi-elections : Will Vishnuvardhan compete with Devegowda ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada