ಚಿತ್ರ ನಿರ್ಮಾಪಕರಾದ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್
ಡಾ ವಿಷ್ಣುವರ್ಧನ್ ಅವರ ಹೆಸರಲ್ಲಿ ರಾಷ್ಟ್ರೀಯ ಉತ್ಸವ ನಡೆಸಿ ದಾಖಲೆ ನಿರ್ಮಿಸಿರುವ ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಈಗ ಚಲನಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ.
ಸಿನಿಮಾ ನಿರ್ಮಾಪಕರಾಗಬೇಕು ಎಂದು ಬಹಳ ವರ್ಷಗಳಿಂದ ಕನಸು ಕಂಡಿದ್ದ ಶ್ರೀನಿವಾಸ್ ಅಂತಿಮವಾಗಿ ತಮ್ಮ ಆಸೆ ಈಡೇಸಿಕೊಳ್ಳುತ್ತಿದ್ದಾರೆ. ಹೌದು, ಸದ್ಯದಲ್ಲೇ ಸ್ಯಾಂಡಲ್ ವುಡ್ ನಲ್ಲೊಂದು ಸಿನಿಮಾ ನಿರ್ಮಿಸಲಿದ್ದಾರೆ ವಿಷ್ಣು ಅಭಿಮಾನಿ.
ಶ್ರೀನಿವಾಸ್ ನಿರ್ಮಿಸಲಿರುವ ಚಿತ್ರಕ್ಕೆ ಯಾರು ನಾಯಕನಟನಾಗಬಹುದು ಎಂಬುದರ ಬಗ್ಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಸ್ಟಾರ್ ನಟರೊಬ್ಬರ ಜೊತೆ ಸಿನಿಮಾ ಮಾಡುವುದು ಖಚಿತ.

ಸುದೀಪ್ ಅವರ ಜೊತೆ ಹೆಚ್ಚು ಆತ್ಮೀಯ ಒಡನಾಟ ಹೊಂದಿರುವ ಶ್ರೀನಿವಾಸ್ ಅವರನ್ನ ನಾಯಕನನ್ನಾಗಿಸಲು ಮುಂದಾಗಿದ್ದಾರೆ ಎಂಬ ಕುತೂಹಲ ಇದೆ. ಸುದೀಪ್ ಅವರ ಶ್ರೀನಿವಾಸ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನುವುದು ನಿಜ. ಆದರೆ, ಅವರೇ ನಟಿಸುಬಹುದು ಎಂಬುದನ್ನ ಈಗಲೇ ಹೇಳಲು ಸಾಧ್ಯವಿಲ್ಲ.
ಸದ್ಯ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಕೆಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು, ಅದರ ತಯಾರಿಯಲ್ಲಿದ್ದಾರೆ. ಬಳಿಕ ಡಿಸೆಂಬರ್ ಸಮಯಕ್ಕೆ ಸಿನಿಮಾ ಕೆಲಸಕ್ಕೆ ಚಾಲನೆ ನೀಡಲು ಚಿಂತಿಸಿದ್ದಾರೆ.


Click it and Unblock the Notifications











