ಟ್ವಿಟ್ಟರ್ ನಲ್ಲಿ 'ಉಪ್ಪಿ-ದಾದಾ' ದರ್ಬಾರ್
Recommended Video

ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳು ಪ್ರತಿ ಕ್ಷಣನೂ ಕುತೂಹಲ ಮೂಡಿಸುತ್ತಿದೆ. ಸರ್ಕಾರ ಉರುಳುತ್ತಾ ಅಥವಾ ಉಳಿಯುತ್ತಾ ಎಂಬ ಚರ್ಚೆ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆಯೂ ಸುದ್ದಿಯಾಗಿದೆ. ಇದರ ನಡುವೆ ಟ್ವಿಟ್ಟರ್ ನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಹೆಸರು ಟ್ರೆಂಡಿಂಗ್ ನಲ್ಲಿದೆ.
ಹ್ಯಾಪಿಬರ್ತಡೇ ವಿಷ್ಣುದಾದಾ (HappyBirthdayVishnuDada), ವಿಷ್ಣುವರ್ಧನ್ (vishnuvardhan) ಹಾಗೂ ಹ್ಯಾಪಿಬರ್ತಡೇ ಉಪೇಂದ್ರ (happybirthdayupendra) ಎಂಬ ಹ್ಯಾಷ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
ಯಾಕಂದ್ರೆ, ಇಂದು (ಸೆಪ್ಟೆಂಬರ್ 18) ವಿಷ್ಣುವರ್ಧನ್ ಮತ್ತು ಉಪೇಂದ್ರ ಅವರ ಹುಟ್ಟುಹಬ್ಬ. ಹೀಗಾಗಿ, ಈ ಇಬ್ಬರ ದಿಗ್ಗಜರ ಅಭಿಮಾನಿಗಳು ನೆಚ್ಚಿನ ನಟರ ಜನಮದಿನವನ್ನ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ ವಿಶೇಷ ಪೂಜೆಯ ಜೊತೆಗೆ ಡಾ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಕೂಡ ನಡೆಯುತ್ತಿದೆ. ಜೊತೆಗೆ ವಿಷ್ಣು ಸ್ಮಾರಕ ವಿಳಂಬವಾಗುತ್ತಿರುವುದರ ಬಗ್ಗೆ ಅಭಿಮಾನಿಗಳು ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ಗಮನ ಸೆಳೆಯುತ್ತಿದೆ.
ಮತ್ತೊಂದೆಡೆ ಕತ್ರಿಗುಪ್ಪೆಯ ಉಪ್ಪಿ ನಿವಾಸದ ಬಳಿ ಅಭಿಮಾನಿಗಳು ಉಪೇಂದ್ರ ಅವರ ಬರ್ತಡೇ ಆಚರಿಸುತ್ತಿದ್ದಾರೆ. ಜೊತೆಗೆ ಉಪೇಂದ್ರ ಅವರ ರಾಜಕೀಯ ಪಕ್ಷ 'ಉತ್ತಮ ಪ್ರಜಾ ಪಾರ್ಟಿ' (UPP) ಇಂದು ಲೋಕಾರ್ಪಣೆಗೊಂಡಿದೆ.


Click it and Unblock the Notifications











