ಮೇಘನಾ ರಾಜ್ ಗೆ ವಿಶೇಷ ಉಡುಗೊರೆ ನೀಡಿದ ಡಾ ವಿಷ್ಣು ಮಗಳು
Recommended Video

ಡಾ ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಅವರ ಅಭಿಮಾನಿಗಳಲ್ಲಿ ಸದಾ ಉಳಿದುಕೊಂಡಿದ್ದಾರೆ. ವಿಷ್ಣು ಅವರು ಬಳಸುತ್ತಿದ್ದ ಅಪರೂಪದ ವಸ್ತುಗಳು ಅವರ ಮನೆಯವರಿಗೆ ಬಿಟ್ಟರೇ ಸಾಮಾನ್ಯವಾಗಿ ಬೇರೆ ಯಾರಿಗೂ ಸಿಗುವುದಿಲ್ಲ.
ಒಂದು ವೇಳೆ ಅಂತಹ ವಸ್ತುಗಳು ಸಿಕ್ಕರೇ ಅವರ ಅಭಿಮಾನಿಗಳಿಗೆ ಅದಕ್ಕಿಂತ ಮತ್ತೊಂದು ಗಿಫ್ಟ್ ಮತ್ತೊಂದಿಲ್ಲ ಎನ್ನಬಹುದು. ಇದೀಗ, ಇಂತಹದ್ದೇ ಖುಷಿಗೆ ಭಾಗಿಯಾಗಿದ್ದಾರೆ ನಟಿ ಮೇಘನಾರಾಜ್.
ಹೌದು, ಡಾ ವಿಷ್ಣುವರ್ಧನ್ ಅವರು ಬಳಸುತ್ತಿದ್ದ ವಾಚ್ ನ್ನ ನಟಿ ಮೇಘನಾ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ವಿಷ್ಣು ದಾದಾ ಅವರ ಮಗಳು ಕೀರ್ತಿ ಅವರಿಂದ ಈ ಗಿಫ್ಟ್ ಪಡೆದುಕೊಂಡಿದ್ದು, ಮೇಘನಾ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಈ ಸಂತಸವನ್ನ ನಟಿ ಮೇಘನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ''ನಾನೀಗ ಜಗತ್ತಿನಲ್ಲೇ ಎತ್ತರಕ್ಕೆ ಇದ್ದೀನಿ ಎಂಬ ಭಾಸವಾಗುತ್ತಿದೆ. ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಅವರಿಂದ ನನಗೆ ವಿಷ್ಣುದಾದಾ ಬಳಸುತ್ತಿದ್ದ ವಾಚ್ ಉಡುಗೊರೆಯಾಗಿ ಸಿಕ್ಕಿದೆ. ಈ ಮಾಸ್ಟರ್ ಪೀಸ್ ಗೆ ಒಡತಿಯಾಗಿರುವುದಕ್ಕೆ ನನಗೆ ಬಹಳ ಹೆಮ್ಮೆಯಾಗುತ್ತಿದೆ'' ಎಂದು ನಟಿ ಮೇಘನಾ ರಾಜ್ ಬರೆದುಕೊಂಡಿದ್ದಾರೆ.
ಅಂದ್ಹಾಗೆ, ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಮೇಘನಾ ರಾಜ್ ಕುಟುಂಬ ಬಹಳ ಹತ್ತಿರ. ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಮತ್ತು ವಿಷ್ಣುವರ್ಧನ್ ಅವರು ಆತ್ಮೀಯ ಸ್ನೇಹಿತರು. ಮತ್ತು ಚಿತ್ರರಂಗದಲ್ಲಿ ಒಟ್ಟಾಗಿ ಬೆಳೆದವರು. ಹೀಗಾಗಿ, ಇವರಿಬ್ಬರ ಮಧ್ಯೆ ಒಂದೊಳ್ಳೆ ಬಾಂಧವ್ಯ ಇತ್ತು.

ಹೀಗಾಗಿ, ಚಿಕ್ಕವಯಸ್ಸಿನಲ್ಲಿ ಮೇಘನಾ ರಾಜ್ ವಿಷ್ಣುವರ್ಧನ್ ಅವರ ಜೊತೆ ಸಮಯ ಕಳೆದಿದ್ದಾರೆ. ಅವರನ್ನ ಭೇಟಿ ಮಾಡಿದ್ದಾರೆ. ಅವರೊಂದಿಗೆ ಮಾತನಾಡಿದ್ದಾರೆ. ಹೀಗಾಗಿ, ವಿಷ್ಣುವರ್ಧನ್ ಅವರಂದ್ರೆ ಮೇಘನಾಗೂ ತುಂಬಾ ಅಭಿಮಾನ ಮತ್ತು ಇಷ್ಟ.
ಇನ್ನುಳಿದಂತೆ ಮೇಘನಾ ರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಸಿನಿಮಾ ಇದೇ ತಿಂಗಳಲ್ಲಿ ಬಡುಗೆಡೆಯಾಗುತ್ತಿದೆ.


Click it and Unblock the Notifications











