Don't Miss!
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಾ. ವಿಷ್ಣುವರ್ಧನ್ 13ನೇ ವರ್ಷದ ಪುಣ್ಯಸ್ಮರಣೆ: ಸಾಹಸ ಸಿಂಹನನ್ನು ಸ್ಮರಿಸುತ್ತಿರುವ ಅಭಿಮಾನಿಗಳು
ಸಾಹಸಸಿಂಹ ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಅಗಲಿ 13 ವರ್ಷ ಕಳೆದಿದೆ. ದೈಹಿಕವಾಗಿ ದಾದಾ ನಮ್ಮೊಂದಿಗೆ ಇಲ್ಲದೇ ಇದ್ದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಅಲಂಕರಿಸಿದ್ದಾರೆ. ವಿಷ್ಣು ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ಗಣ್ಯರು ಸ್ಮರಿಸುತ್ತಿದ್ದಾರೆ.
51 ವರ್ಷದ ಹಿಂದೆ 'ವಂಶವೃಕ್ಷ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮರುವರ್ಷ ತೆರೆಗೆ ಬಂದಿದ್ದ 'ನಾಗರಹಾವು' ಚಿತ್ರದ ರಾಮಾಚಾರಿ ಆಗಿ ದಾದಾ ಸ್ಟಾರ್ ಪಟ್ಟಕ್ಕೇರಿಬಿಟ್ಟರು. ಅಲ್ಲಿಂದ ಮುಂದೆ 200 ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿ ವಿಷ್ಣುವರ್ಧನ್ ಅಭಿಮಾನಿಗಳ ಮನಗೆದ್ದಿದ್ದರು. 'ಬೂತಯ್ಯನ ಮಗ ಅಯ್ಯು', 'ಬಂಧನ', 'ಮುತ್ತಿನ ಹಾರ', 'ಸಾಹಸಸಿಂಹ', 'ಯಜಮಾನ', 'ಆಪ್ತಮಿತ್ರ', 'ಆಪ್ತರಕ್ಷಕ' ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ದಾದಾ ನಟಿಸಿದ್ದಾರೆ. ಪುಣ್ಯಸ್ಮರಣೆಯ ಹಿನ್ನಲೆಯಲ್ಲಿ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ರಾಜ್ಯಾದ್ಯಂತ ಅಭಿಮಾನಿಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದಾರೆ.
ವಿಷ್ಣುವರ್ಧನ್
ಸ್ಮಾರಕ
ಡಿಸೆಂಬರ್
17ಕ್ಕೆ
ಲೋಕಾರ್ಪಣೆ:
ವಿಶೇಷತೆ
ಏನು
ಗೊತ್ತೆ?
ವಿಷ್ಣು ನಮ್ಮನ್ನಗಲಿ ದಶಕ ಕಳೆದರೂ ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನ ಸಿಗಲೇ ಇಲ್ಲ ಎನ್ನುವುದು ಅಭಿಮಾನಿಗಳ ಆರೋಪ ಆಗಿತ್ತು. ಕೊನೆಗೂ ಮೈಸೂರಿನಲ್ಲಿ ವಿಷ್ಣುವರ್ಧನ್ ಭವ್ಯ ಸ್ಮಾರಕ ನಿರ್ಮಾಣವಾಗಿದ್ದು, ಲೋಕಾಪರ್ಣೆಗೆ ವೇದಿಕೆ ಸಿದ್ಧವಾಗಿದೆ.

ದಾದಾನ ನೆನೆದ ಗಣ್ಯರು, ಅಭಿಮಾನಿಗಳು
ಕರುನಾಡಿನ ಮನೆಮನಗಳಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕಲೆ ಸದಾ ಜೀವಂತವಾಗಿರುತ್ತದೆ. ಕನ್ನಡನಾಡಿನ ಮೇಲಿನ ದಾದಾ ಪ್ರೀತಿ, ಕನ್ನಡ ಭಾಷಾಭಿಮಾನ ಹಾಗೂ ಅಭಿಮಾನಿಗಳಿಗೆ ಅವರು ನೀಡುತ್ತಿದ್ದ ಗೌರವ ಎಲ್ಲರಿಗೂ ಪ್ರೇರಣೆ. ಡಾ. ವಿಷ್ಣುವರ್ಧನ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಗಣ್ಯರು, ಅಭಿಮಾನಿಗಳು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ನೆನೆಯುತ್ತಿದ್ದಾರೆ, ನಮನ ಸಲ್ಲಿಸುತ್ತಿದ್ದಾರೆ. 'ಮತ್ತೆ ಹುಟ್ಟಿ ಬನ್ನಿ ದಾದಾ' ಎನ್ನುತ್ತಿದ್ದಾರೆ.

ಅಭಿಮಾನಿಗಳ ಪಾದಯಾತ್ರೆ
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿ ಬಳಿ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೈಸೂರಿನಿಂದ ಡಾ. ವಿಷ್ಣುಸೇನಾ ಸಮಿತಿಯ 50ಕ್ಕೂ ಹೆಚ್ಚು ಅಭಿಮಾನಿಗಳು ಪಾದಯಾತ್ರೆ ಮೂಲಕ ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. 10.30ರ ಸುಮಾರಿಗೆ ಸಮಾಧಿಗೆ ಪೂಜೆ ನಡೆಯಲಿದೆ. ಡಾ. ಶರಣು ಹುಲ್ಲೂರು ಬರೆದಿರುವ ಮೇರುನಟ ಕೃತಿ ಕೂಡ ಬಿಡುಗಡೆಯಾಗಲಿದೆ. ಇನ್ನು ಸಮಾಧಿಯ ಆವರಣದಲ್ಲಿ ರಕ್ತದಾನ, ಅನ್ನದಾನ ಆಯೋಜಿಸಲಾಗಿದೆ.

ಸ್ಮಾರಕ ಲೋಕಾರ್ಪಣೆಗೆ ವೇದಿಕೆ ಸಿದ್ಧ
ಮೈಸೂರಿನ ಹೊರ ವಲಯದ ಹೆಚ್. ಡಿ ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ಸ್ಮಾರಕ ಸ್ಥಳದಲ್ಲೇ ಪುಣೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ ಹೊಸ ಶಾಖೆ ಆರಂಭವಾಗಲಿದೆ. ದಾದಾ ಸಿನಿ ಪಯಣ ಪರಿಚಯಿಸುವ ಆಡಿಯೋ ಹಾಗೂ ವಿಡಿಯೋ ಗ್ಯಾಲರಿ ಸ್ಮಾರಕದಲ್ಲಿ ಇರಲಿದೆ. ಆಡಿಟೋರಿಯಂ, ಕ್ಯಾಂಟೀನ್ ಕೂಡ ಇರಲಿದೆ. 11 ಕೋಟಿ ವೆಚ್ಚದಲ್ಲಿ ಈ ಭವ್ಯ ಸ್ಮಾರಕ ತಲೆ ಎತ್ತಿದೆ. ಶೀಘ್ರದಲ್ಲೇ ಸರ್ಕಾರ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ.

ಕುಟುಂಬ ಸದಸ್ಯರ ಪೂಜೆ
ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿಗೆ ಪೂಜೆ ಸಲ್ಲಿಸಿದರೆ ಕುಟುಂಬ ಸದಸ್ಯರು ಮೈಸೂರಿನಲ್ಲಿ ಸ್ಮಾಕರದ ಬಳಿ ಪೂಜೆ ಸಲ್ಲಿಸಲಿದ್ದಾರೆ. ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿ, ಅಳಿಯ ಅನಿರುದ್ಧ್ ಮೈಸೂರಿಗೆ ಹೊರಟಿದ್ದು, ಸ್ಮಾರಕದ ಬಳಿ ದಾದಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದಾಗಿ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕುಟುಂಬ ಸದಸ್ಯರು ಅಲ್ಲಿನ ಅಭಿಮಾನಿಗಳ ಜೊತೆ ಅಲ್ಲೇ ಪೂಜೆ ಸಲ್ಲಿಸುತ್ತಾ ಬರ್ತಿದ್ದಾರೆ.