For Quick Alerts
  ALLOW NOTIFICATIONS  
  For Daily Alerts

  ಬರೋಬ್ಬರಿ 20 ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ರು ವಿಷ್ಣುವರ್ಧನ್; ಇಲ್ಲಿದೆ ಆ ಎಲ್ಲಾ ಚಿತ್ರಗಳ ಪಟ್ಟಿ

  |

  1972ರಲ್ಲಿ ತೆರೆಕಂಡ ವಂಶವೃಕ್ಷ ಎಂಬ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟ ವಿಷ್ಣುವರ್ಧನ್ ಈ ಚಿತ್ರದಲ್ಲಿ ಸಹ ನಟನಾಗಿ ನಟಿಸಿದ್ದರು. ಅದೇ ವರ್ಷ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾದ ವಿಷ್ಣುವರ್ಧನ್ ಮೊದಲ ಚಿತ್ರದಲ್ಲಿಯೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿರು.

  ಮೊದಲ ಚಿತ್ರವೇ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ ನಂತರ ನಟ ವಿಷ್ಣುವರ್ಧನ್ ಅವರಿಗೆ ಸಾಲು ಸಾಲು ಆಫರ್‌ಗಳು ಹುಡುಕಿಕೊಂಡು ಬಂದವು. ಸಿಕ್ಕ ಅವಕಾಶಗಳನ್ನು ಬಿಡದ ವಿಷ್ಣುವರ್ಧನ್ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸಿನಿ ರಸಿಕರ ಮನಸ್ಸನ್ನು ಗೆದ್ದು ಚಂದನವನದ ಸಾರ್ವಕಾಲಿಕ ದಿಗ್ಗಜ ನಟರಲ್ಲಿ ಓರ್ವರಾದರು.

  ಇನ್ನು ತೊಂಬತ್ತರ ದಶಕದಲ್ಲಿ ದ್ವಿಪಾತ್ರವಿರುವ ಚಿತ್ರಗಳ ಹಾವಳಿ ಜೋರಾಗಿಯೇ ಇತ್ತು. ಹೀಗಾಗಿ ಹೆಚ್ಚೆಚ್ಚು ದ್ವಿಪಾತ್ರವಿರುವ ಚಿತ್ರಗಳಲ್ಲಿ ಸ್ಟಾರ್ ನಟರು ಅಭಿನಯಿಸುತ್ತಿದ್ದರು. ತನ್ನ ಸಿನಿ ವೃತ್ತಿ ಜೀವನದಲ್ಲಿ ಬರೋಬ್ಬರಿ 200 ಚಿತ್ರಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್ ಸಹ ಹಲವಾರು ಚಿತ್ರಗಳಲ್ಲಿ ದ್ವಿಪಾತ್ರ ಮಾಡಿದ್ದಾರೆ ಹಾಗೂ ಕೆಲ ಚಿತ್ರಗಳಲ್ಲಿ ತ್ರಿಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿರುವ ಆ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

  ಒಂದೇ ರೂಪ ಎರಡು ಗುಣ ಮೊದಲ ಚಿತ್ರ

  ಒಂದೇ ರೂಪ ಎರಡು ಗುಣ ಮೊದಲ ಚಿತ್ರ

  1975ರಲ್ಲಿ ತೆರೆಕಂಡ 'ಒಂದೇ ರೂಪ ಎರಡು ಗುಣ' ಎಂಬ ಚಿತ್ರದಲ್ಲಿ ಅಶೋಕ್ ಹಾಗೂ ವಿಕ್ರಮ್ ಎಂಬ ಪಾತ್ರಗಳನ್ನು ನಿರ್ವಹಿಸಿದ್ದ ವಿಷ್ಣುವರ್ಧನ್ ಅದೇ ಮೊದಲ ಬಾರಿಗೆ ದ್ವಿಪಾತ್ರವನ್ನು ನಿರ್ವಹಿಸಿದ್ದರು. ಭವಾನಿ ಹಾಗೂ ಚಂದ್ರಕಲಾ ನಾಯಕಿಯಾಗಿ ನಟಿಸಿದ್ದ ಈ ಚಿತ್ರದಲ್ಲಿ ವಿಷ್ಣವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

  ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದ ಎಲ್ಲಾ ಚಿತ್ರಗಳ ಪಟ್ಟಿ

  ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದ ಎಲ್ಲಾ ಚಿತ್ರಗಳ ಪಟ್ಟಿ

  1. ಒಂದೇ ರೂಪ ಎರಡು ಗುಣ

  2. ವಿಜಯ್ ವಿಕ್ರಮ್

  3. ಕಾಳಿಂಗ

  4. ನಾಗ ಕಾಲಭೈರವ

  5. ಊರಿಗೆ ಉಪಕಾರಿ

  6. ಕಲ್ಲು ವೀಣೆ ನುಡಿಯಿತು

  7. ಸಿಡಿದೆದ್ದ ಸಹೋದರ

  8. ಸೌಭಾಗ್ಯ ಲಕ್ಷ್ಮಿ

  9. ದಾದಾ

  10. ಶಿವಶಂಕರ್

  11. ಲಯನ್ ಜಗಪತಿ ರಾವ್

  12. ಪೊಲೀಸ್ ಮತ್ತು ದಾದಾ

  13. ಕಿಲಾಡಿಗಳು

  14. ಮೋಜುಗಾರ ಸೊಗಸುಗಾರ

  15. ಅಪ್ಪಾಜಿ

  16. ಸೂರ್ಯವಂಶ

  17. ಯಜಮಾನ

  18. ದಿಗ್ಗಜರು

  19. ಜಮೀನ್ದಾರು

  20. ಆಪ್ತರಕ್ಷಕ

  ತ್ರಿಪಾತ್ರದಲ್ಲಿ ನಟಿಸಿದ ಚಿತ್ರಗಳು

  ತ್ರಿಪಾತ್ರದಲ್ಲಿ ನಟಿಸಿದ ಚಿತ್ರಗಳು

  ವಿಷ್ಣುವರ್ಧನ್ ಸತ್ಯಂ ಶಿವಂ ಸುಂದರಂ ಹಾಗೂ ಸಿಂಹಾದ್ರಿಯ ಸಿಂಹ ಈ ಎರಡು ಚಿತ್ರಗಳಲ್ಲಿ ತ್ರಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

  English summary
  Vishnuvardhan did 20 dual role movies in his career: Here is the complete list. Take a look
  Friday, December 30, 2022, 13:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X