twitter
    For Quick Alerts
    ALLOW NOTIFICATIONS  
    For Daily Alerts

    ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?

    |

    ಅಂಬರೀಶ್ ನಿಧನದಿಂದ ನಂತರ ದಿವಂಗತ ನಟ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರ ಮತ್ತೆ ಜೀವ ಪಡೆದುಕೊಂಡಿದೆ. ರಾಜ್ ಸ್ಮಾರಕ ಇರುವ ಕಂಠೀರವ ಸ್ಟುಡಿಯೋದಲ್ಲೇ ಅಂಬರೀಶ್ ಅಂತ್ಯಕ್ರಿಯೆ ಆಗಿದ್ದು, ಸ್ಮಾರಕ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲೂ ತಯಾರಿ ಮಾಡಲಾಗುತ್ತಿದೆ.

    ಈ ಮಧ್ಯೆ ಇಬ್ಬರು ದಿಗ್ಗಜರ ಜೊತೆ ಡಾ ವಿಷ್ಣುವರ್ಧನ್ ಅವರ ಸ್ಮಾರಕವೂ ಇರಲಿ ಎಂಬ ಬಯಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ವತಃ ಸಿಎಂ ಕುಮಾರಸ್ವಾಮಿಯೇ ಮಾತನಾಡಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

    ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

    ಇನ್ನು ಕೆಲವು ಅಭಿಮಾನಿಗಳು ಮೂವರ ಸ್ಮಾರಕವೂ ಒಂದೇ ಕಡೆ ಇರಲಿ ಎಂದು ಆಸೆಯೂ ಹೊಂದಿದ್ದಾರೆ. ಆದ್ರೆ, ಸರ್ಕಾರದ ಆಸೆ ಹಾಗೂ ಅಭಿಮಾನಿಗಳ ಆಸೆ ಸದ್ಯಕ್ಕೆ ಈಡೇರುವ ಒಂದೇ ಒಂದು ಲಕ್ಷಣವೂ ಕಾಣುತ್ತಿಲ್ಲ. ಸದ್ಯದ ಬೆಳವಣಿಗೆಗಳು ನೋಡಿದ್ರೆ, ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ. ಯಾಕೆ ಎಂಬುದು ಮುಂದೆ ಓದಿ.....

    ಕುಟುಂಬದವರು ಒಪ್ಪುತ್ತಿಲ್ಲ

    ಕುಟುಂಬದವರು ಒಪ್ಪುತ್ತಿಲ್ಲ

    ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕವನ್ನ ಸ್ಥಳಾಂತರ ಮಾಡಬೇಕು ಎಂಬ ಸುದ್ದಿ ಬಹಿರಂಗವಾಗುತ್ತಿದ್ದಂತೆ, ವಿಷ್ಣು ಕುಟುಂಬ ವಿರೋಧಿಸಿದೆ. ನಮಗೆ ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಬೇಡ ಎಂದು ಭಾರತಿ ವಿಷ್ಣುವರ್ಧನ್ ಮತ್ತು ವಿಷ್ಣು ಅಳಿಯ ಅನಿರುದ್ಧ ಸ್ಪಷ್ಟಪಡಿಸಿದ್ದಾರೆ.

    ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?

    ಮೈಸೂರಿನಲ್ಲಿ ಕೆಲಸ ಆರಂಭವಾಗಿದೆ

    ಮೈಸೂರಿನಲ್ಲಿ ಕೆಲಸ ಆರಂಭವಾಗಿದೆ

    ''ಈಗಾಗಲೇ ಮೈಸೂರಿನಲ್ಲಿ ಸ್ಮಾರಕಕ್ಕೆ ಸಂಬಂಧಪಟ್ಟಂತೆ ಕೆಲಸಗಳು ಚಾಲನೆ ಕೊಟ್ಟಿದ್ರು. ಆದ್ರೆ, ಮಧ್ಯದಲ್ಲಿ ಕೆಲಸ ನಿಂತು ಹೋಯಿತು. ಆ ಕೆಲಸ ಮತ್ತೆ ಮುಂದುವರಿಸಲಿ ಸಾಕು. ಮತ್ತೆ ಇನ್ನೊಂದು ಜಾಗ ನಮಗೆ ಬೇಡ. ನಮಗೆ ಮೈಸೂರಿನಲ್ಲಿ ಇರಲಿ, ವಿಷ್ಣುಗೆ ಮೈಸೂರು ಇಷ್ಟವಾಗಿದ್ದ ಸ್ಥಳ. ಸೋ ಇಲ್ಲೆ ಇರಲಿ'' ಎಂದು ಭಾರತಿ ಹೇಳಿದ್ದಾರೆ.

    ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಿಲ್ಲ ಯಾಕೆ? ಪ್ರಮುಖ ಕಾರಣ ಇದಾಗಿರಬಹುದಾ.!ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಿಲ್ಲ ಯಾಕೆ? ಪ್ರಮುಖ ಕಾರಣ ಇದಾಗಿರಬಹುದಾ.!

    ಬೇಡ ಎಂಬ ಅಧಿಕಾರ ನನಗೆ ಇರಲಿ

    ಬೇಡ ಎಂಬ ಅಧಿಕಾರ ನನಗೆ ಇರಲಿ

    ''ಕಂಠೀರವ ಸ್ಟುಡಿಯೋದಲ್ಲಿ ಮೂರು ಜನರ ಸ್ಮಾರಕ ಬೇಡ ಎನ್ನುವುದಕ್ಕೆ ನನಗೆ ಅಧಿಕಾರ ಇಲ್ಲ. ಸದ್ಯಕ್ಕೆ ನನಗೆ ಯಾವುದೇ ಆಸಕ್ತಿ ಇಲ್ಲ. ಕೆಲಸ ಪ್ರಾರಂಭ ಆಗಿದೆ, ಅದನ್ನ ಮತ್ತೆ ಶುರು ಮಾಡಲಿ ಅಷ್ಟೇ'' ಎಂದು ತಮ್ಮ ನಿಲುವನ್ನ ವ್ಯಕ್ತಪಡಿಸಿದ್ದಾರೆ.

    ಅನಿರುದ್ಧ್ ಕೂಡ ವಿರೋಧ

    ಅನಿರುದ್ಧ್ ಕೂಡ ವಿರೋಧ

    ಡಿಸೆಂಬರ್ 31ರ ಒಳಗೆ ವಿಷ್ಣು ಸ್ಮಾರಕ ವಿವಾದವನ್ನ ಬಗೆಹರಿಸಬೇಕು. ಇಲ್ಲವಾದಲ್ಲಿ, ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಮಗೆ ಬಹಳ ನೋವಾಗಿದೆ, ಅಭಿಮಾನಿಗಳು ತಾಳ್ಮೆಯ ಕಳೆದುಕೊಂಡ್ರೆ ಅದರ ದುಷ್ಪರಿಣಾಮವನ್ನ ಸರ್ಕಾರ ಎದುರಿಸಬೇಕಾಗುತ್ತೆ. ಸ್ಮಾರಕ ಮೈಸೂರಿನಲ್ಲೇ ಆಗಬೇಕು. ಬದಲಾಯಿಸುವ ಅಗತ್ಯವಿಲ್ಲ ಎಂದು ಅನಿರುದ್ಧ್ ತಿಳಿಸಿದ್ದಾರೆ.

    ವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿ

    ವಿಷ್ಣು ಅಭಿಮಾನಿಗಳು ಅದೇ ನಿಲುವು

    ವಿಷ್ಣು ಅಭಿಮಾನಿಗಳು ಅದೇ ನಿಲುವು

    ಇನ್ನು ವಿಷ್ಣು ಸ್ಮಾರಕ ಸ್ಥಳಾಂತರದ ಬಗ್ಗೆ ಮಾತನಾಡಿದ ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು, ''ಸ್ಮಾರಕವನ್ನ ಎಲ್ಲಿ ಬೇಕಾದ್ರೂ ಮಾಡಿಕೊಳ್ಳಲಿ, ಆದ್ರೆ, ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಪುಣ್ಯಭೂಮಿ ಆಗಬೇಕು. ಅಲ್ಲಿಂದ ಒಂದೇ ಒಂದು ಕಲ್ಲನ್ನ ಕೂಡ ಯಾರೂ ಅಲುಗಾಡಿಸಲು ಬಿಡುವುದಿಲ್ಲ'' ಎಂದು ಎಚ್ಚರಿಕೆ ನೀಡಿದ್ದಾರೆ.

    ದಿಗ್ಗಜರ ಸ್ಮಾರಕ ವಿಚಾರ: ಖಡಕ್ ಎಚ್ಚರಿಕೆ ನೀಡಿದ ವೀರಕಪುತ್ರ ಶ್ರೀನಿವಾಸದಿಗ್ಗಜರ ಸ್ಮಾರಕ ವಿಚಾರ: ಖಡಕ್ ಎಚ್ಚರಿಕೆ ನೀಡಿದ ವೀರಕಪುತ್ರ ಶ್ರೀನಿವಾಸ

    ತ್ರಿಮೂರ್ತಿಗಳು ಸ್ಮಾರಕ ಒಂದೇ ಕಡೆ ಆಗಲ್ಲ

    ತ್ರಿಮೂರ್ತಿಗಳು ಸ್ಮಾರಕ ಒಂದೇ ಕಡೆ ಆಗಲ್ಲ

    ಸದ್ಯದ ಬೆಳವಣಿಗೆ ಗಮನಿಸಿದ್ರೆ ಡಾ ರಾಜ್-ವಿಷ್ಣು-ಅಂಬಿ ಸ್ಮಾರಕ ಒಂದು ಕಡೆ ಇರಲಿ ಎಂಬ ಅಭಿಮಾನಿಗಳ ಆಶಯ ನೆರವೇರುವುದಿಲ್ಲ ಎಂಬುದು ಖಚಿತವಾಗುತ್ತಿದೆ. ಇದನ್ನ ಮೀರಿಯೂ ಸರ್ಕಾರ ಒಂದು ಪ್ರಯತ್ನ ಮಾಡೋಣ ಎಂದು ಚರ್ಚೆಗೆ ಮುಂದಾದರೇ, ಏನಾಗುತ್ತೆ ಎಂದು ಕಾದುನೋಡಬೇಕಿದೆ.'

    ವಿಷ್ಣು ಸ್ಮಾರಕ ನಿರ್ಮಾಣಕ್ಕೆ 'ಕಂಠೀರವ' ನಾಲ್ಕನೇ ಜಾಗ, ಎಲ್ಲ ಕಡೆಯೂ ವಿವಾದ.!ವಿಷ್ಣು ಸ್ಮಾರಕ ನಿರ್ಮಾಣಕ್ಕೆ 'ಕಂಠೀರವ' ನಾಲ್ಕನೇ ಜಾಗ, ಎಲ್ಲ ಕಡೆಯೂ ವಿವಾದ.!

    English summary
    Dr Bharathi vishnuvardhan, anirudh and vishnu fans have expressed displeasure over the government.
    Wednesday, November 28, 2018, 16:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X