twitter
    For Quick Alerts
    ALLOW NOTIFICATIONS  
    For Daily Alerts

    ವರ್ಣಮಾಲೆಯಲ್ಲಿ ವಿಷ್ಣುವರ್ಧನ್ ಸಿನಿಮಾಗಳು: ಅಭಿಮಾನಿಗಳಿಂದ ಹೊಸ ಪ್ರಯತ್ನ

    |

    ಕನ್ನಡ ವರ್ಣಮಾಲೆ ಅ,ಆ,ಇ,ಈ ಎಲ್ಲರಿಗೂ ಗೊತ್ತಿರುವುದೇ. ವರ್ಣಮಾಲೆ ಮತ್ತು ಪದ ಗ್ರಹಿಕೆ ಕಲಿಸುವಾಗ ಅ=ಅರಸ, ಆ=ಆನೆ, ಇ=ಇಲಿ ಎಂದು ಕಲಿಸುವುದು ವಾಡಿಕೆ. ವಿಷ್ಣುವರ್ಧನ್ ಅಭಿಮಾನಿಗಳು ಇದನ್ನೇ ತುಸು ಭಿನ್ನವಾಗಿಸಿದ್ದಾರೆ.

    ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣುವರ್ಧನ್ ಚಿತ್ರಗಳುಳ್ಳ 'ಕೋಟಿಗೊಬ್ಬ' 2021 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದ್ದು, ಕ್ಯಾಲೆಂಡರ್‌ ನಲ್ಲಿ ವರ್ಣಮಾಲೆಯ ಮುಂದಿನ ಪದಗಳನ್ನು ಪದಲಾಯಿಸಿ ವಿಷ್ಣುವರ್ಧನ್ ಅವರು ನಟಿಸಿದ್ದ ಸಿನಿಮಾಗಳ ಹೆಸರು ಸೇರಿಸಲಾಗಿದೆ.

    ಅ=ಅಣ್ಣ-ಅತ್ತಿಗೆ, ಆ=ಆಪ್ತಮಿತ್ರ, ಇ=ಇಂದಿನ ರಾಮಾಯಣ, ಹೀಗೆ ವಿಷ್ಣುವರ್ಧನ್ ನಟಿಸಿರುವ ಹೆಸರುಗಳನ್ನು ಅಕ್ಷರ ಮಾಲೆ ಗುರುತಿಸಲು ಬಳಸಲಾಗಿದೆ.

     Vishnuvardhan Fans Released 2021 Calendar Named Kotigobba

    ಕ್ಯಾಲೆಂಡರ್‌ನಲ್ಲಿ ವಿಷ್ಣುವರ್ಧನ್ ಅವರ ಅಪರೂಪದ ಚಿತ್ರಗಳನ್ನು ಮುದ್ರಿಸಲಾಗಿದ್ದು, ಪ್ರತಿ ತಿಂಗಳಿಗೂ ವಿಶೇಷ ಬಣ್ಣಗಳ ಸಂಯೋಜನೆ ಮಾಡಲಾಗಿದೆ. ಜೊತೆಗೆ ರಜಾದಿನಗಳು, ಅಮಾವಾಸೆ, ಹುಣ್ಣಿಮೆ, ಹಬ್ಬಗಳು, ಗಣ್ಯರ ಜನ್ಮದಿನದಗಳನ್ನು ಒಳಗೊಂಡಿರುವ ಈ ಕ್ಯಾಲೆಂಡರ್ ವೃತಿಪರ ಕ್ಯಾಲೆಂಡರ್ ಗಳಿಗೆ ಸರಿ ಸಮಾನವಾಗಿದೆ ಎಂದಿದೆ ವಿಷ್ಣುಸೇನಾ ಸಮಿತಿ.

    Recommended Video

    ಅವಸರ ಪಟ್ಟುಬಿಟ್ರಾ Rajinikanth | Filmibeat Kannada

    ಕೋಟಿಗೊಬ್ಬ ಕ್ಯಾಲೆಂಡರ್ ಗೆ ಇದು 10ನೇ ವಾರ್ಷಿಕೋತ್ಸವ. ಕೋಟಿಗೊಬ್ಬ ಕ್ಯಾಲೆಂಡರ್‌ನ ಮೊದಲ ಸಂಚಿಕೆಯನ್ನು ದಿವಂಗತ ಅನಂತಕುಮಾರ್ ಮತ್ತು ಡಾ.ಭಾರತಿ ವಿಷ್ಣುವರ್ಧನ್ ಅವರು ಈ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದರು.

    English summary
    Dr Vishnu Sena Samithi released 'Kotigobba' calender for year 2021. Calendar has Vishnuvardhan's rare photos.
    Friday, December 25, 2020, 22:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X