twitter
    For Quick Alerts
    ALLOW NOTIFICATIONS  
    For Daily Alerts

    'ನಾಗರಹಾವು' ಚಿತ್ರಕ್ಕಾಗಿ ವಿಷ್ಣು ಅಭಿಮಾನಿಗಳು ಮಾಡ್ತಿರೋ ಒಳ್ಳೆ ಕೆಲಸ

    By Pavithra
    |

    Recommended Video

    Nagarahaavu : ನಾಗರಹಾವು ಸಿನಿಮಾಗಾಗಿ ಅಭಿಮಾನಿಗಳು ಮಾಡ್ತಿದ್ದಾರೆ ಒಂದೊಳ್ಳೆ ಕೆಲಸ...! | Oneindia Kannada

    'ನಾಗರಹಾವು' 46 ವರ್ಷಗಳ ಹಿಂದೆ ತೆರೆಕಂಡು ಕನ್ನಡ ಸಿನಿಮಾರಂಗದಲ್ಲಿ ಸಂಚಲನವನ್ನು ಮೂಡಿಸಿದ್ದ ಸಿನಿಮಾ. ಈ ಚಿತ್ರದ ಮೂಲಕವೇ ಡಾ ವಿಷ್ಣುವರ್ಧನ್, ಅಂಬರೀಶ್, ಆರತಿ ಎನ್ನುವ ಅದ್ಬುತ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದು.

    ಅಂದಿನಿಂದ ಇಂದಿನವರೆಗೂ 'ನಾಗರಹಾವು' ಚಿತ್ರಕ್ಕಿರುವ ಕ್ರೇಜ್ ಕಡಿಮೆ ಆಗಿಲ್ಲ. ಚಿತ್ರದ ಹಾಡುಗಳು, ಸಂಭಾಷಣೆಗಳು ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದು ಬಿಟ್ಟಿವೆ.

    ''ಕಲಿಯುಗ ಇರುವವರೆಗೆ ನಾಗರಹಾವು ಸಿನಿಮಾ ಇರುತ್ತದೆ'' - ಭಾರತಿ ವಿಷ್ಣುವರ್ಧನ್ ''ಕಲಿಯುಗ ಇರುವವರೆಗೆ ನಾಗರಹಾವು ಸಿನಿಮಾ ಇರುತ್ತದೆ'' - ಭಾರತಿ ವಿಷ್ಣುವರ್ಧನ್

    ಇದೇ ತಿಂಗಳು 20 ರಂದು 'ನಾಗರಹಾವು' ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡಿರುವ ಪ್ರತಿಯೊಬ್ಬರಿಗೂ ರಾಮಚಾರಿಯನ್ನು ಬೆಳ್ಳಿತೆರೆ ಮೇಲೆ ನೋಡುವ ಅವಕಾಶ ಮತ್ತೆ ಸಿಕ್ಕಿದೆ. 'ನಾಗರಹಾವು' ಚಿತ್ರಕ್ಕಾಗಿ ವಿಷ್ಣು ಅಭಿಮಾನಿಗಳು ಹೊಸ ನಿರ್ಧಾರವನ್ನು ಮಾಡಿಕೊಂಡಿದ್ದಾರೆ. ಕರುನಾಡಿನ ಯಜಮಾನನ್ನು ಮುಂದಿನ ತಲೆಮಾರಿಗೆ ತಲುಪಿಸುವುದಕ್ಕಾಗಿ ಪಣತೊಟ್ಟಿದ್ದಾರೆ. ಹಾಗಾದರೆ ಅಂತಹ ಕೆಲಸವಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

    'ನಾಗರಹಾವು' ಚಿತ್ರ ನೋಡುವ ಅವಕಾಶ

    'ನಾಗರಹಾವು' ಚಿತ್ರ ನೋಡುವ ಅವಕಾಶ

    'ನಾಗರಹಾವು' ಸಿನಿಮಾ ಆ ಕಾಲದ ಒಂದು ಅದ್ಬುತವಾಗಿತ್ತು. ಯುವ ಜನಾಂಗವನ್ನು ವಿಷ್ಣುವರ್ಧನ್ ಹುಚ್ಚೆಬ್ಬಿಸಿದ್ದರು. ಈಗ ಮತ್ತದೇ ಸಮಯ ಕೂಡಿ ಬಂದಿದೆ. 'ನಾಗರಹಾವು' ಸಿನಿಮಾ ಹೊಸ ರೀತಿಯಲ್ಲಿ ಮರು ಬಿಡುಗಡೆಗೆ ಸಿದ್ದವಾಗಿದೆ. ಈ ಸಂದರ್ಭದಲ್ಲಿ ಈಗಿನ ಯುವಕರಿಗೆ ವಿದ್ಯಾರ್ಥಿಗಳಿಗೆ 'ನಾಗರಹಾವು' ಸಿನಿಮಾವನ್ನು ಉಚಿತವಾಗಿ ತೋರಿಸುವ ಕೆಲಸಕ್ಕೆ ವಿಷ್ಣು ಅಭಿಮಾನಿಗಳು ಮುಂದಾಗಿದ್ದಾರೆ.

    ವಿಷ್ಣು ಸಂಘಟನೆಯಿಂದ ಹೊಸ ಯೋಜನೆ

    ವಿಷ್ಣು ಸಂಘಟನೆಯಿಂದ ಹೊಸ ಯೋಜನೆ

    ವಿಷ್ಣುವರ್ಧನ್ ಶಾಖೆ ಅಥವಾ ಸಂಘ ಇರುವಂತಹ ಊರು, ಹೋಬಳಿ, ತಾಲೂಕು, ಜಿಲ್ಲೆಗಳಿಗೆ ಸನಿಹದಲ್ಲಿರುವ ಕಾಲೇಜುಗಳಿಗೆ ಭೇಟಿಕೊಟ್ಟು ಪದಾಧಿಕಾರಿಗಳು ಪ್ರಾಂಶುಪಾಲರಿಗೊಂದು ಮನವಿ ಸಲ್ಲಿಸಲಿದ್ದಾರೆ. 'ನಾಗರಹಾವು' ಸಿನಿಮಾ ನಾಲ್ಕು ದಶಕಗಳ ನಂತರ ಹೊಸ ರೂಪದಲ್ಲಿ ಮರು ಬಿಡುಗಡೆಗೊಳ್ಳುತ್ತಿದೆ. ಮತಾಂಧತೆ, ಉತ್ಕಟ ಪ್ರೀತಿ, ಹೆಣ್ಣಿನ ಶೋಷಣೆ, ಗುರುಭಕ್ತಿ, ಶೌರ್ಯ ಮುಂತಾದುವುಗಳ ಕನ್ನಡಿಯಂತೆ ಚಿತ್ರಿತವಾಗಿದೆ. ನಾಲ್ಕು ದಶಕಗಳ ಹಿಂದೆ ಯುವ ಜನಾಂಗ ಅತ್ಯದ್ಬುತ ರೀತಿಯಲ್ಲಿ ಚಿತ್ರವನ್ನು ಸ್ವೀಕರಿಸಿತ್ತು. ಅದೇ ತರ ಈಗಿನ ಯುವ ಜನಾಂಗವೂ ಈ ಸಿನಿಮಾವನ್ನು ನೋಡುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾಗಲಿದೆ.

    ಅಭಿಮಾನಿಗಳ ಹಣದಿಂದ ಟಿಕೆಟ್

    ಅಭಿಮಾನಿಗಳ ಹಣದಿಂದ ಟಿಕೆಟ್

    ಎಲ್ಲಾ ವಿದ್ಯಾರ್ಥಿಗಳಿಗೆ ಸಿನಿಮಾ ನೋಡುವಷ್ಟು ಹಣಕಾಸಿನ ಅನುಕೂಲವಿಲ್ಲದ ಕಾರಣ ಅಭಿಮಾನಿಗಳು ಅವರಿಗೆ ಉಚಿತವಾಗಿ ಟಿಕೆಟ್ ಗಳನ್ನು ಒದಗಿಸಲು ಮುಂದಾಗಿದ್ದಾರೆ. ಸಂಘಟನೆ ಹಾಗೂ ಪದಾಧಿಕಾರಿಗಳ ಹಣದಿಂದಲೇ ಟಿಕೆಟ್ ಕೊಡಿಸುತ್ತಿದ್ದಾರೆ.

    ಮುಂದಿನ ತಲೆಮಾರಿಗೆ ತಲುಪಿಸುವ ಪ್ರಯತ್ನ

    ಮುಂದಿನ ತಲೆಮಾರಿಗೆ ತಲುಪಿಸುವ ಪ್ರಯತ್ನ

    ಕರುನಾಡಿನ ಯಜಮಾನನ್ನು ಮುಂದಿನ ತಲೆಮಾರಿಗೆ ತಲುಪಿಸುವುದಕ್ಕಾಗಿ ಅಭಿಮಾನಿಗಳಿಂದ ಈ ರೀತಿಯ ಕೆಲಸ ಮಾಡಿಸಲು ವಿ ಎಸ್ ಎಸ್ ನ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮುಂದಾಗಿದ್ದಾರೆ.

    English summary
    Kannada Nagarahaavu movie is being re-released. Vishnuvardhan fans show Nagarahaavu cinema free of charge for college students.
    Monday, July 16, 2018, 11:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X