ಸೆಪ್ಟೆಂಬರ್‌ ನಲ್ಲಿ ನಡೆಯಲಿದೆ ಸಾಹಸ ಸಿಂಹನ ರಾಷ್ಟ್ರೀಯ ಉತ್ಸವ

By Pavithra

Recommended Video

ಹೇಗಿರಲಿದೆ ವಿಷ್ಣು ದಾದಾ ಹುಟ್ಟುಹಬ್ಬ..? | Filmibeat Kannada

ಕಳೆದ ವರ್ಷದಂತೆಯೇ ಈ ವರ್ಷವೂ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'ವನ್ನು ಅದ್ದೂರಿಯಾಗಿ ಮಾಡಲು ವಿಷ್ಣು ಸೇನಾ ಸಮಿತಿ ಹಾಗೂ ಸಾಹಸ ಸಿಂಹನ ಅಭಿಮಾನಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್‌ 16, 17 ಮತ್ತು 18 ರಂದು ಕೆ.ಆರ್‌. ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವ ನಡೆಯಲಿದೆ.

ಸೆಪ್ಟೆಂಬರ್‌ 16ರಂದು ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಯಿಂದ ಕಲಾಕ್ಷೇತ್ರದವರೆಗೂ ಬೃಹತ್‌ ಮೆರವಣಿಗೆಯನ್ನು ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು, ಸಿನಿಮಾ ಕಲಾವಿದರು ಮತ್ತು 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗಿ ಆಗಲಿದ್ದಾರೆ.

ಈ ವರ್ಷದ ವಿಶೇಷವೆಂದರೆ, 'ವೀರಪ್ಪನಾಯ್ಕ' ಚಿತ್ರದಲ್ಲಿ ವಿಷ್ಣುವರ್ಧನ್‌ ಕಾಣಿಸಿಕೊಂಡ ರೀತಿಯಲ್ಲಿನ ಪುತ್ಥಳಿಯನ್ನು ಅನಾವರಣ ಮಾಡಲಾಗುತ್ತಿದೆ. ಅದಲ್ಲದೆ ಡಾ. ವಿಷ್ಣು ಅವರ ಬದುಕು ಮತ್ತು ಸಾಧನೆಗಳನ್ನು ಚಿತ್ರಗಳಲ್ಲಿ ಕಟ್ಟಿಕೊಡುವ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇನ್ನು ಕಳೆದ ವರ್ಷದಂತೆ ಡಾ.ವಿಷ್ಣುವರ್ಧನ್‌ ಅವರ ಛಾಯಾಚಿತ್ರ ಪ್ರದರ್ಶನ ಜೊತೆಗೆ ಡಾ. ವಿಷ್ಣು ಅವರೊಂದಿಗೆ ನಟಿಸಿದ ನಟಿಯರು ಮತ್ತು ಯುವ ನಟರನ್ನೊಳಗೊಂಡ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

Vishnuvardhan National Festival is held in Bangalore

ಇದೆಲ್ಲದರ ಜೊತೆಗೆ ಸೆಪ್ಟೆಂಬರ್‌ 16, 17 ಮತ್ತು 18ರ ಸಂಜೆ ಡಾ. ವಿಷ್ಣು ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮಗಳು ಇರುತ್ತದೆ. ಮೊದಲನೇ ದಿನ ವಿಷ್ಣು ಅವರ ಯುಗಳ ಗೀತೆಗಳು, ಎರಡನೇ ದಿನ ಕನ್ನಡಪರ ಗೀತೆಗಳು ಮತ್ತು ಮೂರನೇ ದಿನ ವಿಷ್ಣು ಅಭಿಮಾನದ ಗೀತೆಗಳನ್ನುಆಲಿಸಲು ಅಭಿಮಾನಿಗಳಿಗೆ ಅವಕಾಶವಿದೆ. ಸಮಾರಂಭದಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಮಾಡಲಾಗಿದೆ.

Vishnuvardhan National Festival is held in Bangalore

ಡಾ. ವಿಷ್ಣುವರ್ಧನ ರಾಷ್ಟ್ರೀಯ ಉತ್ಸವದ ಉತ್ಸವ ಗೀತೆಯನ್ನು ಮಾಡಿಕೊಳ್ಳಲಾಗುತ್ತಿದ್ದು ಕೆ. ಕಲ್ಯಾಣ ಅವರು ಸಾಹಿತ್ಯ ಮತ್ತು ಸಂಗೀತವನ್ನು ನೀಡಿ ಹಾಡನ್ನು ತಯಾರು ಮಾಡುತ್ತಿದ್ದಾರೆ. ಭಾರತಿ ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬವಾದ ಆಗಸ್ಟ್‌ 15ರಂದು ಹಾಡು ಬಿಡುಗಡೆ ಆಗಲಿದೆ. ಇಂತಹ ಕಾರ್ಯಕ್ರಮದ ಮೂಲಕ ವಿಷ್ಣು ನಮ್ಮೆಲ್ಲರ ಮಧ್ಯೆ ಇನ್ನು ಉಳಿದುಕೊಂಡಿದ್ದಾರೆ ಎನ್ನುವ ಭಾವನೆ ಮೂಡಿಸುತ್ತಿದ್ದಾರೆ ಅಭಿಮಾನಿಗಳು.

More from Filmibeat

English summary
The Vishnuvardhan National Festival is held in Bangalore on September 16, 17 and 18.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X