ಪ್ರೇಮ್ ಅನ್ನು ದೊಡ್ಡ ನಿರ್ದೇಶಕರಿಗೆ ಹೋಲಿಸಿದ್ದ ವಿಷ್ಣುವರ್ಧನ್

ವಿಷ್ಣುವರ್ಧನ್ ಹುಟ್ಟುಹಬ್ಬದಂದು ಹಲವು ನಟ-ನಟಿಯರು ಅವರ ಆಪ್ತೇಷ್ಟರು ವಿಷ್ಣುವರ್ಧನ್ ಅವರೊಟ್ಟಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ.

ವಿಷ್ಣುವರ್ಧನ್ ಅವರು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ, ಅವರಿಗೆ ಹುರುಪು ತುಂಬುವುದರಲ್ಲಿ ಪ್ರಮುಖರು. ಒಳ್ಳೆಯ ನಿರ್ದೇಶಕ, ನಟರನ್ನು ವೈಯಕ್ತಿಕವಾಗಿ ಅಭಿನಂದಿಸುತ್ತಿದ್ದರು ಅವರು.

ವಿಷ್ಣುವರ್ಧನ್ ಅವರಿಂದ ಹೊಗಳಿಸಿಕೊಂಡವರಲ್ಲಿ ನಿರ್ದೇಶಕ ಪ್ರೇಮ್ ಸಹ ಒಬ್ಬರು. ಇಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನ ವಿಷ್ಣು ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ನಿರ್ದೇಶಕ ಪ್ರೇಮ್, ವಿಷ್ಣುವರ್ಧನ್ ಅವರೊಂದಿಗೆ ಕಳೆದ ಕೆಲವು ಸಿಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಪ್ರೇಮ್ ಅನ್ನು ಪುಟ್ಟಣ್ಣ ಕಣಗಾಲ್‌ ಗೆ ಹೋಲಿಸಿದ್ದ ವಿಷ್ಣು

ಪ್ರೇಮ್ ಅನ್ನು ಪುಟ್ಟಣ್ಣ ಕಣಗಾಲ್‌ ಗೆ ಹೋಲಿಸಿದ್ದ ವಿಷ್ಣು

ನಿರ್ದೇಶಕ ಪ್ರೇಮ್ ಅವರ ಸೂಪರ್ ಹಿಟ್ ಸಿನಿಮಾ 'ಜೋಗಿ' ಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ವಿಷ್ಣುವರ್ಧನ್, 'ಕನ್ನಡಕ್ಕೆ ಮತ್ತೊಬ್ಬ ಪುಟ್ಟಣ್ಣ ಕಣಗಾಲ್ ಸಿಕ್ಕರು' ಎಂದು ಪ್ರೇಮ್ ಅನ್ನು ಹೊಗಳಿದ್ದರಂತೆ. ಈ ಬಗ್ಗೆ ಅವರೇ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಒಟ್ಟಿಗೆ ಸಿನಿಮಾ ಮಾಡುವ ಎಂದಿದ್ದರಂತೆ ವಿಷ್ಣು

ಒಟ್ಟಿಗೆ ಸಿನಿಮಾ ಮಾಡುವ ಎಂದಿದ್ದರಂತೆ ವಿಷ್ಣು

ಅಷ್ಟೇ ಅಲ್ಲ, ಪ್ರೇಮ್ ಅವರನ್ನು ಮನೆಗೆ ಕರೆಸಿ, 'ಒಂದು ಕತೆ ಮಾಡು ಸಿನಿಮಾ ಮಾಡುವ' ಎಂದಿದ್ದರಂತೆ ವಿಷ್ಣುವರ್ಧನ್. ಅಂತೆಯೇ ಪ್ರೇಮ್ ಸಹ ಸ್ಕ್ರಿಪ್ಟ್ ಕೆಲಸದಲ್ಲಿ ನಿರತಾದರಂತೆ ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ತಡವಾಗಿದೆ. ಕೊನೆಗೆ ವಿಷ್ಣು ಅವರೊಟ್ಟಿಗೆ ಸಿನಿಮಾ ಮಾಡಲು ಆಗಲೇ ಇಲ್ಲವೆಂದು ನೊಂದುಕೊಂಡರು ಪ್ರೇಮ್.

ರಕ್ಷಿತಾ ಗೆ ಸಲಹೆ ನೀಡಿದ್ದ ವಿಷ್ಣುವರ್ಧನ್

ರಕ್ಷಿತಾ ಗೆ ಸಲಹೆ ನೀಡಿದ್ದ ವಿಷ್ಣುವರ್ಧನ್

ಮತ್ತೊಂದು ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ ಪ್ರೇಮ್, 'ರಕ್ಷಿತಾ ನಾನು ಮದುವೆಯಾದ ಹೊಸದರಲ್ಲಿ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಪ್ರೇಮ್ ಮನೆಗೆ ಬಂದಿದ್ದರು. ಆಗ ರಕ್ಷಿತಾರನ್ನು ಕರೆದು, ನಿನ್ನ ಗಂಡ ನಟ-ನಿರ್ದೇಶಕ. ಅವನು ಹೊರಗೆ ಹೆಚ್ಚು ಇರಬೇಕಾಗುತ್ತದೆ. ಅವನ ಬಗ್ಗೆ ಅನುಮಾನ ಪಡುಪೇಡ, ತುಸು ಫ್ರೀ ಬಿಡು' ಎಂದಿದ್ದರಂತೆ.

Recommended Video

ಫಸ್ಟ್ ಯಾವನ್ ಹೊಡಿತಾನೋ ಅವನೇ ಹೀರೊ | Filmibeat Kannada
ನೀವೂ ನಮ್ಮಂತೆಯೇ ಇರಬೇಕೆಂದು ಹಾರೈಕೆ

ನೀವೂ ನಮ್ಮಂತೆಯೇ ಇರಬೇಕೆಂದು ಹಾರೈಕೆ

'ನಮ್ಮಗಳ ಸಂಸಾರವನ್ನು ನೋಡು, ನಾವೆಲ್ಲಾ ಎಷ್ಟು ಅನ್ಯೋತ್ಯತೆಯಿಂದ ಇದ್ದೇವೆ. ನೀವೂ ಸಹ ನಮ್ಮಂತೆಯೇ ಇರಬೇಕು' ಎಂದು ಹಾರೈಸಿದ್ದರಂತೆ ವಿಷ್ಣುವರ್ಧನ್. ಅವರ ಹಾರೈಕೆಯಿಂದ ಇಂದಿಗೂ ನಾವು ಅನ್ಯೋನ್ಯತೆಯಿಂದ ಇದ್ದೀವಿ ಎಂದರು ಪ್ರೇಮ್.

More from Filmibeat

English summary
Late actor Vishnuvardhan once praised director Prem. He compared Prem with director Puttanna Kanagal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X