ಕಾಲೇಜಿನಲ್ಲಿ ನೇಹಾ ಸೆರಗು ಹಿಡಿದು ಡ್ಯಾನ್ಸ್: 'ಮಂಗಾರು ಮಳೆ-2' ಬೆಡಗಿ ಹುಚ್ಚಾಟಕ್ಕೆ ನೆಟ್ಟಿಗರು ಗರಂ

'ಖುಷಿ' ಸಿನಿಮಾ ಈವೆಂಟ್‌ನಲ್ಲಿ ಸಮಂತಾ- ವಿಜಯ್ ದೇವರಕೊಂಡ ರೊಮ್ಯಾಂಟಿಕ್ ಡ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು. ವೇದಿಕೆಯಲ್ಲಿ ಇಷ್ಟೊಂದು ಬಿಂದಾಸ್ ಡ್ಯಾನ್ಸ್ ಮಾಡುವ ಅವಶ್ಯಕತೆ ಏನಿತ್ತು? ಎಂದು ಕೆಲವರು ಪ್ರಶ್ನಿಸಿದ್ದರು. ಇದೀಗ ತೆಲುಗು ನಟ ವಿಶ್ವಕ್ ಸೇನ್ ಹಾಗೂ ಕನ್ನಡ ನಟಿ ನೇಹಾ ಶೆಟ್ಟಿ ಕೂಡ ಇದೇ ರೀತಿ ಡ್ಯಾನ್ಸ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.

ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ- 2' ಚಿತ್ರದ ಮೂಲಕ ನೇಹಾ ಶೆಟ್ಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾದರು. ಆದರೆ ಆಕೆಗೆ ದೊಡ್ಡ ಬ್ರೇಕ್ ಮಾತ್ರ ಸಿಗಲೇಯಿಲ್ಲ. ಸದ್ಯ ಮಂಗಳೂರು ಚೆಲುವೆ ಈಗ 'ಗ್ಯಾಂಗ್ಸ್ ಆಫ್ ಗೋದಾವರಿ' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ವಿಶ್ವಕ್ ಸೇನ್ ಜೋಡಿಯಾಗಿ ಚಿತ್ರದಲ್ಲಿ ಮಿಂಚಿದ್ದಾರೆ. ಸಿನಿಮಾ ರಿಲೀಸ್‌ ಡೇಟ್ ಹತ್ತಿರವಾಗುತ್ತಿದೆ. ಚಿತ್ರದ ಒಂದೊಂದೇ ಸಾಂಗ್ ಸಿನಿರಸಿಕರ ಗಮನ ಸೆಳೆಯುತ್ತಿದೆ.

VishwakSen, Neha Shettys live romantic dance performance goes viral

ವಿಶ್ವಕ್ ಸೇನ್ ತಮ್ಮ ಬೋಲ್ಡ್ ನಟನೆ ಹಾಗೂ ಆಟಿಟ್ಯೂಡ್‌ನಿಂದ ಟಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಆದರೆ ಈವರೆಗೆ ಒಂದೊಳ್ಳೆ ಬ್ರೇಕ್ ಮಾತ್ರ ಸಿಕ್ಕಿಲ್ಲ. 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಸುಟ್ಟೇಸುಕೋ ಸೀರಲಾ' ಅಂತ ಶುರುವಾಗುವ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಸಾಂಗ್‌ನಲ್ಲಿ ಇಬ್ಬರೂ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್‌ನ ಕಾಲೇಜ್‌ವೊಂದರಲ್ಲಿ ಈ ಸಾಂಗ್ ರಿಲೀಸ್ ಮಾಡಲಾಯಿತು. ಈ ವೇಳೆ ವೇದಿಕೆಯಲ್ಲಿ ವಿಶ್ವಕ್‌ ಸೇನ್- ನೇಹಾ ಇಬ್ಬರೂ ಸಿನಿಮಾದಲ್ಲಿರುವಂತೆ ಸ್ಟೆಪ್ಸ್ ರೀ-ಕ್ರಿಯೇಟ್ ಮಾಡಿದ್ದಾರೆ.

ನೇಹಾ ಸೀರೆ ಸೆರಗು ತೆಗೆದು ವಿಶ್ವಕ್‌ಗೆ ಕೊಡೋದು, ಆತ ಅದನ್ನು ಬಾಯಿಯಲ್ಲಿ ಕಚ್ಚಿಕೊಳ್ಳುವುದು, ಬಳಿಕ ಸುತ್ತಿಕೊಳ್ಳುವುದು, ಕೊನೆಗೆ ಇಬ್ಬರು ಟ್ಯೂನ್‌ಗೆ ತಕ್ಕಂತೆ ಹೆಜ್ಜೆ ಹಾಕುವುದು. ಹೀಗೆ ವೇದಿಕೆಯಲ್ಲಿ ಇಬ್ಬರ ರಂಗೇರಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಾಲೇಜ್ ಆಡಿಟೋರಿಯಂನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಕಾರ್ಯಕ್ರಮದಲ್ಲಿ ಈ ರೀತಿ ನಾಯಕ- ನಾಯಕಿ ಕುಣಿದಿದ್ದು ಎಷ್ಟು ಸರಿ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಇಂತಹ ಗಿಮಿಕ್‌ಗಳು ಬೇಕಾ? ಪ್ರಚಾರಕ್ಕಾಗಿ ನಟ-ನಟಿಯರು ಯಾವ ಹಂತಕ್ಕಾದರೂ ಇಳಿಯುತ್ತಾರಾ? ಎಂದು ಪ್ರಶ್ನಿಸುತ್ತಿದ್ದಾರೆ.

'ಖುಷಿ' ಸಿನಿಮಾ ಈವೆಂಟ್‌ನಲ್ಲಿ ವಿಜಯ್ ದೇವರಕೊಂಡ- ಸಮಂತಾ ಡ್ಯಾನ್ಸ್ ಮಾಡಿದ್ದು ಇದೇ ರೀತಿ ಸುದ್ದಿಯಾಗಿತ್ತು. ಕೆಲವರು ಸಮಂತಾಗೆ ಇದೆಲ್ಲಾ ಬೇಕಿತ್ತಾ? ಎಂದು ಟ್ರೋಲ್ ಮಾಡಿದ್ದರು. ಅದನ್ನೇ ಕಾಪಿ ಮಾಡಿ ವಿಶ್ವಕ್ ಹಾಗೂ ನೇಹಾ ಕೂಡ ಕುಣಿದಿದ್ದಾರೆ ಅನ್ನೋದು ಕೆಲವರ ವಾದ. ಗೋದಾವರಿಯ ಹಿನ್ನೆಲೆಯಲ್ಲಿ ಮೂಡಿ ಬರುತ್ತಿರುವ ಐತಿಹಾಸಿಕ ಕಥಾಹಂದರದ ಸಿನಿಮಾ 'ಗ್ಯಾಂಗ್ಸ್ ಆಫ್ ಗೋದಾವರಿ' ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿದೆ.

VishwakSen, Neha Shettys live romantic dance performance goes viral

ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಕೃಷ್ಣ ಚೈತನ್ಯ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನೇಹಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿದ್ದ 'ಡಿಜೆ ಟಿಲ್ಲು' ಚಿತ್ರದಲ್ಲಿ ವಿಶ್ವಕ್- ನೇಹಾ ಒಟ್ಟಿಗೆ ನಟಿಸಿದ್ದರು. ಸಿನಿಮಾ ಒಂದು ರೇಂಜ್‌ಗೆ ಸಕ್ಸಸ್ ಕಂಡಿತ್ತು. ಸಿನಿಮಾಗಿಂತ ಟೈಟಲ್ ಸಾಂಗ್ ಹೆಚ್ಚು ಸದ್ದು ಮಾಡಿತ್ತು. ಇದೀಗ ಮತ್ತೆ ಈ ಜೋಡಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದೆ.

'ಮುಂಗಾರು ಮಳೆ'- 2 ಬಳಿಕ ನೇಹಾ ಶೆಟ್ಟಿ 'ಮೆಹಬೂಬ', 'ಗಲ್ಲಿ ರೌಡಿ', 'ಮೋಸ್ಟ್ ಎಲಿಜಬಲ್ ಬ್ಯಾಚುಲರ್', 'ಡಿಜೆ ಟಿಲ್ಲು' ಹಾಗೂ 'ಬೆದುರರಲಂಕ 2012' ಸಿನಿಮಾಗಳಲ್ಲಿ ನಟಿಸಿದರು. 'ರೂಲ್ಸ್ ರಾಂಜನ್' ಎನ್ನುವ ಮತ್ತೊಂದು ಸಿನಿಮಾ ಕೂಡ ಈ ಕರಾವಳಿ ಚೆಲುವೆ ಕೈಯಲ್ಲಿದೆ.

More from Filmibeat

English summary
VishwakSen and Neha Shetty sets the stage on fire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X