ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಶ್ವಾನದ ಪ್ರೀತಿಯ ಸಿನಿಮಾ 'ಯಾವ ಮೋಹನ ಮುರಳಿ ಕರೆಯಿತು'

ಕವಿ ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಳಿ ಕರೆಯಿತು' ಹಾಡಿನ ಸಾಲನ್ನೇ ಟೈಟಲ್ ಆಗಿಟ್ಟು ಇಲ್ಲೊಂದು ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಶ್ವಾನ ಪ್ರೀತಿಯ ಕಥೆಯಿದೆ. ಕನ್ನಡದಲ್ಲಿ ಈಗಾಗಲೇ ಶ್ವಾನ ಮತ್ತು ಮನುಷ್ಯ ಸುತ್ತಾ ಸುತ್ತುವ ಒಂದಷ್ಟು ಸಿನಿಮಾಗಳು ಬಂದೋಗಿದೆ. ಕಳೆದ ವರ್ಷ '777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು.

'777 ಚಾರ್ಲಿ' ರೀತಿಯ ಕಥೆ ಇರುವ 'ಯಾವ ಮೋಹನ ಮುರಳಿ ಕರೆಯಿತು' ಸಿನಿಮಾ ಈಗ ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ಚಿತ್ರದ ಟೀಸರ್ ಸಖತ್ ಸದ್ದು ಮಾಡ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ಭಿನ್ನ ಎನ್ನುತ್ತಿದೆ ಚಿತ್ರತಂಡ.

Vishwas Krishna Directed Yaava Mohana Murali Kareyithu Teaser Released

ಭರವಸೆಯ ಹುಡುಕಾಟದಲ್ಲಿರುವ ವಿಶೇಷ ಚೇತನ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವ ಶ್ವಾನ ಸಿಗುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಅಂತಹ ಸಮಯದಲ್ಲೇ ಇವರಿಬ್ಬರ ನಡುವೆ ಮತ್ತೊಬ್ಬ ವ್ಯಕ್ತಿಯ ಪ್ರವೇಶವಾಗುತ್ತದೆ. ನಂತರ ಏನಾಗುತ್ತದೆ ಅನ್ನೋದು 'ಯಾವ ಮೋಹನ ಮುರಳಿ ಕರೆಯಿತು' ಚಿತ್ರದ ಒನ್‌ಲೈನ್ ಸ್ಟೋರಿ. ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದವಾಗಿದೆ. ಮೂರು ಹಾಡುಗಳಿದೆ. ಸದ್ಯದಲ್ಲೇ ಟ್ರೇಲರ್ ಬರಲಿದೆ. ಇದು ನಿರ್ದೇಶಕ ವಿಶ್ವಾಸ್ ಕೃಷ್ಣ ಚೊಚ್ಚಲ ಸಿನಿಮಾ.

Vishwas Krishna Directed Yaava Mohana Murali Kareyithu Teaser Released

ನಿರ್ಮಾಪಕರಾದ ಶರಣಪ್ಪ ಗೌರಮ್ಮ ಮಾತನಾಡಿ ನಾನು ಉದ್ಯಮಿ‌. ಕಿಕ್ ಬಾಕ್ಸಿಂಗ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದೇನೆ. ಸಿನಿಮಾ ಬಗ್ಗೆ ಅಷ್ಟು ಗೊತ್ತಿಲ್ಲ. ಸಾಹಿತಿ ಗೌಸ್ ಫಿರ್ ಅವರ ಮೂಲಕ ನಿರ್ದೇಶಕರ ಪರಿಚಯವಾಯಿತು. ಕಥೆ ಇಷ್ಟವಾಯಿತು. ಹಾಗಾಗಿ ಸಿನಿಮಾ ಮಾಡಿದ್ದಾಗಿ ಹೇಳಿದ್ದಾರೆ.
.
'ಯಾವ ಮೋಹನ ಮುರಳಿ ಕರೆಯಿತು' ಚಿತ್ರದ ಪ್ರಮುಖ ಪಾತ್ರಧಾರಿ ಬೇಬಿ ಪ್ರಕೃತಿ ನಟಿಸಿದ್ದಾರೆ. ನಾಯಕ ಮಾಧವ, ನಾಯಕಿ ಸ್ವಪ್ನಾ ಶೆಟ್ಟಿಗಾರ್, ಪಟೇಲ್ ವರುಣ್ ರಾಜ್ ತಾರಾಗಣದಲ್ಲಿದ್ದಾರೆ. ಅನಿಲ್ ಸಿ ಜೆ ಸಂಗೀತ ಚಿತ್ರಕ್ಕಿದೆ. '777 ಚಾರ್ಲಿ' ಸಿನಿಮಾ ರೀತಿಯಲ್ಲೇ ಇಲ್ಲೂ ಒಂದು ಲ್ಯಾಬ್ರೆಡಾರ್ ನಾಯಿ ಕಾಣಿಸಿಕೊಂಡಿದೆ. ಚಿತ್ರದಲ್ಲಿ ರಾಕಿ ಆಗಿ ಕ್ಯಾಮರಾ ಎದುರಿಸಿರುವ ಶ್ವಾನ ಕೂಡ ಟೀಸರ್ ರಿಲೀಸ್ ಸುದ್ದಿಗೋಷ್ಠಿಗೆ ಆಗಮಿಸಿತ್ತು.

More from Filmibeat

English summary
Vishwas Krishna Directed Yaava Mohana Murali Kareyithu Teaser Released. Labrador dog playing prominent role in this movie. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X