ಸೆಟ್ ನಲ್ಲಿ ಶ್ರುತಿ ಹೇಳಿದ ಹಾಗೆ ಏನೂ ನಡೆದಿಲ್ಲ: ಪೊಲೀಸರ ಮುಂದೆ ನಿರ್ದೇಶಕ ಹೇಳಿಕೆ.!
Recommended Video

ನಟ ಅರ್ಜುನ್ ಸರ್ಜಾ ಹಾಗೂ ನಟಿ ಶ್ರುತಿ ಹರಿಹರನ್ ಕುರಿತಾದ #ಮೀಟೂ ಆರೋಪ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅತ್ತ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರಿದ್ದರೆ, ಇತ್ತ ಶ್ರುತಿ ಹರಿಹರನ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಶ್ರುತಿ ಹರಿಹರನ್ ನೀಡಿರುವ ದೂರಿನ ಅನ್ವಯ ಎಫ್.ಐ.ಆರ್ ದಾಖಲು ಮಾಡಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಅದರಂತೆ ಇವತ್ತು ತಮ್ಮ ಹೇಳಿಕೆ ನೀಡಲು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಗೆ 'ವಿಸ್ಮಯ' ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಬಂದಿದ್ದರು.
''ನಾನು ಅರ್ಜುನ್ ಸರ್ಜಾ ಪರವಾಗಿ ನಿಂತಿದ್ದೇನೆ. ಯಾಕಂದ್ರೆ ಶೂಟಿಂಗ್ ಸೆಟ್ ನಲ್ಲಿ ನನ್ನ ಮುಂದೆ ಅಂತಹ ಘಟನೆ ನಡೆದಿಲ್ಲ'' ಎಂದು ಪೊಲೀಸರ ಮುಂದೆ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಅರುಣ್ ವೈದ್ಯನಾಥನ್ ಪ್ರತಿಕ್ರಿಯೆ ನೀಡಿರುವುದು ಹೀಗೆ -

ಬೇಸರ ಆಗಿದೆ
''ಈ ತರಹ ಬೆಳವಣಿಗೆ ಆಗಿರುವ ಬಗ್ಗೆ ನನಗೆ ತುಂಬಾ ಬೇಸರ ಇದೆ. ಫೇಸ್ ಬುಕ್ ನಲ್ಲಿ ನಾನು ಬರೆದುಕೊಂಡಂತೆ ಪೊಲೀಸರ ಮುಂದೆ ವಿವರವಾಗಿ ಹೇಳಿಕೆ ಕೊಟ್ಟಿದ್ದೇನೆ. ಅರ್ಜುನ್ ಸರ್ಜಾ ನನ್ನ ಸ್ನೇಹಿತ, ಆತ ತುಂಬಾ ಒಳ್ಳೆಯ ಮನುಷ್ಯ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

ಸತ್ಯ ಗೆಲ್ಲಲಿ
''ಏನಾಯ್ತು ಅಂತ ಶ್ರುತಿ ಒಬ್ಬರೇ ಹೇಳಬೇಕು. ನನ್ನ ಮುಂದೆ ಏನಾಯ್ತು ಅಂತ ನಾನು ಪೊಲೀಸರಿಗೆ ಹೇಳಿದ್ದೇನೆ. ಪೊಲೀಸರು ತನಿಖೆ ಮಾಡಲಿ. ಸತ್ಯ ಗೆಲ್ಲಲಿ'' ಎನ್ನುತ್ತಾರೆ 'ವಿಸ್ಮಯ' ಡೈರೆಕ್ಟರ್ ಅರುಣ್ ವೈದ್ಯನಾಥನ್

ಶ್ರುತಿ ಯಾವತ್ತೂ ಕಂಪ್ಲೇಂಟ್ ಮಾಡಿಲ್ಲ
''ಶೂಟಿಂಗ್ ನಲ್ಲಿ ಎಲ್ಲರೂ ಚೆನ್ನಾಗಿದ್ವಿ. ಯಾವುದೇ ಸಮಸ್ಯೆ ಇರಲಿಲ್ಲ. ಆಗಸ್ಟ್ 2018 ರವರೆಗೂ ನಾನು ಶ್ರುತಿ ಜೊತೆ ಮಾತನಾಡುತ್ತಿದ್ದೆ. ಈ ತರಹ ಸಮಸ್ಯೆ ಆಗಿದೆ ಎಂದು ಶ್ರುತಿ ನನ್ನ ಬಳಿ ಯಾವತ್ತೂ ಕಂಪ್ಲೇಂಟ್ ಮಾಡಿಲ್ಲ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

ಅರ್ಜುನ್ ಸರ್ಜಾ ಪರವಾಗಿ ನಿಂತ ನಿರ್ದೇಶಕ
''ನಾನು ಅರ್ಜುನ್ ಸರ್ಜಾ ಪರವಾಗಿ ನಿಂತಿದ್ದೇನೆ. ಯಾಕಂದ್ರೆ ಶೂಟಿಂಗ್ ಸೆಟ್ ನಲ್ಲಿ ನನ್ನ ಮುಂದೆ ಅಂತಹ ಘಟನೆ ನಡೆದಿಲ್ಲ. ಇದನ್ನೇ ನಾನು ಪೊಲೀಸರ ಮುಂದೆ ಹೇಳಿದ್ದೇನೆ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ


Click it and Unblock the Notifications











