ಅರ್ಜುನ್ ಸರ್ಜಾ-ಶ್ರುತಿ ಕೇಸ್ ಗೆ ಟ್ವಿಸ್ಟ್: ಪೊಲೀಸರ ಮುಂದೆ 'ವಿಸ್ಮಯ' ನಿರ್ಮಾಪಕ ಹೇಳಿದ್ದೇನು.?

ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದ್ದ #ಮೀಟೂ ಅಭಿಯಾನ ಸ್ಯಾಂಡಲ್ ವುಡ್ ನಲ್ಲಿ ಕೋರ್ಟ್ ಮೆಟ್ಟಿಲೇರಿದೆ. ''ವಿನಾಕಾರಣ ನಟಿ ಶ್ರುತಿ ಹರಿಹರನ್ ನನ್ನ ವಿರುದ್ಧ ಆರೋಪ ಮಾಡಿದ್ದಾರೆ'' ಎಂದು ನಟ ಅರ್ಜುನ್ ಸರ್ಜಾ ಕೋರ್ಟ್ ಮೊರೆ ಹೋಗಿದ್ದಾರೆ.

ಇತ್ತ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರುತಿ ನೀಡಿದ ದೂರಿನ ಅನ್ವಯ ಎಫ್.ಐ.ಆರ್ ದಾಖಲು ಮಾಡಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಅದರಂತೆ ಇವತ್ತು ತಮ್ಮ ಹೇಳಿಕೆ ನೀಡಲು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಗೆ 'ವಿಸ್ಮಯ' ಚಿತ್ರದ ನಿರ್ಮಾಪಕ ಉಮೇಶ್ ಕುಮಾರ್ ಬಂದಿದ್ದರು.

ತಮ್ಮ ಗಮನಕ್ಕೆ ಬಂದ ಹಾಗೆ, ಶೂಟಿಂಗ್ ಸೆಟ್ ನಲ್ಲಿ ಶ್ರುತಿ ಹರಿಹರನ್ ಹೇಳಿರುವ ಯಾವುದೇ ಘಟನೆ ನಡೆದಿಲ್ಲ ಎಂದು ನಿರ್ಮಾಪಕ ಉಮೇಶ್ ಕುಮಾರ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಉಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿರುವುದು ಹೀಗೆ -

ಒಂಬತ್ತು ದಿನ ಶೂಟಿಂಗ್ ಗೆ ಬಂದಿದ್ದ ಶ್ರುತಿ

ಒಂಬತ್ತು ದಿನ ಶೂಟಿಂಗ್ ಗೆ ಬಂದಿದ್ದ ಶ್ರುತಿ

''ಮೀಡಿಯಾದಲ್ಲಿ ಬಂದ ಮೇಲೆಯೇ ನಮಗೆ ವಿಷಯ ಗೊತ್ತಾಗಿದ್ದು. ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆಗೆ ಕರೆದರು. ನಾವು ಬಂದು ನಮ್ಮ ಹೇಳಿಕೆಯನ್ನ ರಿಜಿಸ್ಟರ್ ಮಾಡಿದ್ದೇವೆ. ಒಂಬತ್ತು ದಿನ ಶ್ರುತಿ ಹರಿಹರನ್ ಶೂಟಿಂಗ್ ಗೆ ಬಂದಿದ್ದರು. ಎಂಟು ದಿನ ಶೂಟಿಂಗ್ ಇತ್ತು. ಇನ್ನೊಂದು ದಿನ ಪ್ಯಾಚ್ ವರ್ಕ್ ಮಾಡಿದ್ವಿ'' - ಉಮೇಶ್ ಕುಮಾರ್, 'ವಿಸ್ಮಯ' ಚಿತ್ರದ ನಿರ್ಮಾಪಕ

ಇಲ್ಲೂ ಚೇತನ್ ಗಿದೆ ಲಿಂಕ್.!

ಇಲ್ಲೂ ಚೇತನ್ ಗಿದೆ ಲಿಂಕ್.!

''ನಾವು ಎರಡು ಭಾಷೆಯಲ್ಲಿ ಈ ಚಿತ್ರವನ್ನ ಮಾಡಿದ್ವಿ. ತಮಿಳಿಗೆ ಒಂದು ವಿಲನ್, ಕನ್ನಡಕ್ಕೆ ಒಂದು ವಿಲನ್ ಅಂತ ಪ್ಲಾನ್ ಮಾಡಿದ್ವಿ. ಇಲ್ಲಿನ ಸಹಾಯಕ ನಿರ್ದೇಶಕರು ಕೆಲ ನಟರ ಹೆಸರನ್ನು ಸಜೆಸ್ಟ್ ಮಾಡಿದ್ದರು. ಆಗ ಚೇತನ್ ಅವರ ಹೆಸರೂ ಬಂದಿತ್ತು. ಚೇತನ್ ನ ಭೇಟಿ ಮಾಡಿ, ಕಥೆ ಹೇಳಿದ್ವಿ. ಕೊನೆಗೆ ನಾವು ಜೆ.ಕೆ ರನ್ನ ಸೆಲೆಕ್ಟ್ ಮಾಡಿದ್ವಿ. ಅದು ನಿರ್ದೇಶಕರ ಆಯ್ಕೆ'' - ಉಮೇಶ್ ಕುಮಾರ್, 'ವಿಸ್ಮಯ' ಚಿತ್ರದ ನಿರ್ಮಾಪಕ

ಆ ತರಹ ಘಟನೆ ನಡೆದಿಲ್ಲ

ಆ ತರಹ ಘಟನೆ ನಡೆದಿಲ್ಲ

''ಪ್ರೊಡಕ್ಷನ್ ಶುರುವಾಗಿದ್ದು ನವೆಂಬರ್ ನಲ್ಲಿ. ನಮ್ಮ ಗಮನಕ್ಕೆ ಬಂದ ಹಾಗೆ ಶ್ರುತಿ ಹೇಳಿದ ಘಟನೆಗಳು ನಡೆದಿಲ್ಲ. ಪ್ರೊಡ್ಯೂಸರ್ ಆಗಿ ಸೆಟ್ ನಲ್ಲಿ ನಾನಿದ್ದಾಗ, ಈ ತರಹ ಘಟನೆಗಳು ಯಾವುದೂ ನಡೆದಿಲ್ಲ'' ಎಂದಿದ್ದಾರೆ 'ವಿಸ್ಮಯ' ಚಿತ್ರದ ನಿರ್ಮಾಪಕ ಉಮೇಶ್ ಕುಮಾರ್.

ಶ್ರುತಿ ಹರಿಹರನ್ ಗೆ ಕಂಟಕ ಆಗಬಹುದೇ.?

ಶ್ರುತಿ ಹರಿಹರನ್ ಗೆ ಕಂಟಕ ಆಗಬಹುದೇ.?

'ವಿಸ್ಮಯ' ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ ಪರವಾಗಿ ನಿಂತಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಅಸಭ್ಯ ವರ್ತನೆ ನಡೆದಿಲ್ಲ ಅಂತ ಹೇಳಿರುವುದರಿಂದ ಈ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಇದು ಶ್ರುತಿ ಹರಿಹರನ್ ಗೆ ಕಂಟಕ ಆಗಬಹುದೇ.?

More from Filmibeat

English summary
Vismaya Producer Umesh Kumar register his statements with Cubbon Park Police, Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X