»   » ತಮಿಳು ಚಿತ್ರ ಬೆಳಗಲಿದ್ದಾಳೆ ಕನ್ನಡದ ಹುಡುಗಿ!

ತಮಿಳು ಚಿತ್ರ ಬೆಳಗಲಿದ್ದಾಳೆ ಕನ್ನಡದ ಹುಡುಗಿ!

Posted By:
Subscribe to Filmibeat Kannada

ಇವಳಿಗೆ ಜಗತ್ತು ಕತ್ತಲೆ. ಏನೇನೂ ಗೊತ್ತಾಗೋದಿಲ್ಲ. ಆದ್ರೆ ಜಗತ್ತು ಮಾತ್ರ ಈಕೆಯೆಡೆಗೆ ಒಂದು ಕಣ್ಣಿಡುವಂತೆ ಮಾಡಿದ್ದಾಳೆ. ನಿಜ. ಇವಳ ಹೆಸರು ನಂದಿನಿ. 20 ವರ್ಷ. ಬೆಂಗಳೂರಿನಲ್ಲಿರುವ ಸಮರ್ಥನಂ ವಿಕಲಚೇತನರ ಸಂಸ್ಥೆಯ ನೆರವಿನಿಂದ ಹೊಸ ಬದುಕು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಅಚ್ಚರಿಯೆಂದರೆ, ಈಕೆಯನ್ನು ನೋಡುತ್ತಿದ್ದರೆ ಈಕೆ ದೃಷ್ಟಿವಿಹೀನಳು ಎಂದು ಅನ್ನಿಸುವುದೇ ಇಲ್ಲ.

ನಂದಿನಿ ಹುಟ್ಟಿನಿಂದಲೇ ಬೆಳಕನ್ನು ನೋಡಿಲ್ಲ. ಆದ್ರೆ ಈ ದೃಷ್ಟಿ ವಿಕಲಚೇತನ ಹೆಣ್ಣು ಮಗಳು ಈಗ ತಮಿಳು ಚಿತ್ರವೊಂದರಲ್ಲಿ ನಟಿಸಲು ಆಯ್ಕೆ ಆಗಿದ್ದಾಳೆ. ಕುಕ್ಕೂ ಅನ್ನೋ ತಮಿಳು ಚಿತ್ರ ನಂದಿನಿಯ ಬದುಕಿಗೆ ಮಹತ್ವದ ತಿರುವು ನೀಡುತ್ತಿದೆ. ಫಾಕ್ಸ್ ಸ್ಟಾರ್ ಸ್ಟುಡಿಯೋ ಅನ್ನೋ ಬ್ಯಾನರ್ ಮೂಲಕ ಚಿತ್ರೀಕರಣಗೊಳ್ಳುತ್ತಿರುವ ಕುಕ್ಕೂ ಚಿತ್ರವನ್ನು ಖ್ಯಾತ ನಿರ್ದೇಶಕ ರಾಜು ಮುರುಗದಾಸ್ ನಿರ್ದೇಶಿಸುತ್ತಿದ್ದಾರೆ.

Visually impaired Kannada girl in Tamil movie

ಕುಕ್ಕೂ ಚಿತ್ರ ದೃಷ್ಟಿ ವಿಕಲಚೇತನರ ನಿಜ ಜೀವನದ ಕಥೆ ಅನ್ನೋದು ಗಮನ ಸೆಳೆಯುತ್ತಿದೆ. ದೃಷ್ಟಿ ವಿಕಲಚೇತನರು ಅನುಭವಿಸುತ್ತಿರುವ ಕಷ್ಟ, ಅವೆಲ್ಲವನ್ನು ಮೆಟ್ಟಿನಿಂತು ಯಶಸ್ಸು ಸಾಧಿಸಿದಾಗ ಉಂಟಾಗುವ ಸಂಭ್ರಮ, ಅವರ ಮುಂದಿರುವ ಸವಾಲುಗಳೇ ಚಿತ್ರದ ಹೈಲೈಟ್. 2ನೇ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ನಂದಿನಿ ಕುಕ್ಕೂನಲ್ಲಿ ನಾಯಕಿಯ ಕ್ಲೋಸ್ ಫ್ರೆಂಡ್ ಆಗಿರುತ್ತಾಳೆ. ಕಾಲೇಜ್ ಹುಡುಗಿಯ ಪಾತ್ರ ಮಾಡುತ್ತಿರುವ ನಂದಿನಿ ಪ್ರೊಫೆಸರ್ ಆಗುವ ಕನಸು ಕಾಣುತ್ತಿರುತ್ತಾಳೆ.

ಕುಕ್ಕೂ ಚಿತ್ರದ ಬಗ್ಗೆ ಮಾತನಾಡಿದ ನಂದಿನಿ, "ಸಮರ್ಥನಂ ಸಂಸ್ಥೆಗೆ ನಾನು ಚಿರಋಣಿಯಾಗಿದ್ದೇನೆ. ಸಮರ್ಥನಂ ನನ್ನ ಶಿಕ್ಷಣದ ಜೊತೆಗೆ ನನ್ನಲ್ಲಿರುವ ಪ್ರತಿಭೆಯನ್ನು ಹೊರತೆಗೆಯುತ್ತಿದೆ. ಕುಕ್ಕೂ ಚಿತ್ರಕ್ಕೆ ಆಯ್ಕೆ ಆಗಿದ್ದಕ್ಕೆ ಸಂತೋಷ ಆಗಿದೆ. ಅಷ್ಟೇ ಅಲ್ಲ ದೊಡ್ಡ ಬ್ಯಾನರ್‌ನಲ್ಲೇ ಚಿತ್ರ ಮಾಡುತ್ತಿರೋದನ್ನ ನಂಬಲು ಕಷ್ಟವಾಗುತ್ತಿದೆ" ಎಂದರು.

ಸಮರ್ಥನಂ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ, ಜಿ.ಕೆ. ಮಹಾಂತೇಶ್ ನಂದಿನಿಗೆ ದೊರೆತ ಅವಕಾಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ನಂದಿನಿಗೆ ಸಿಕ್ಕಿರುವಂತಹ ಅವಕಾಶಗಳು ಸಮಾಜಿಕ ಬದಲಾವಣೆಯನ್ನು ತರಬಲ್ಲ ಪ್ರಯತ್ನವಾಗಿದೆ. ನಂದಿನಿ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಭವಿಷ್ಯವನ್ನು ಬೆಳಕಾಗಿಸಿಕೊಳ್ಳುತ್ತಾಳೆ ಅನ್ನೋ ಭರವಸೆ ಇದೆ" ಎಂದರು.

ಕುಕ್ಕೂ ಚಿತ್ರ ಜುಲೈ ಅಂತ್ಯದಲ್ಲಿ ಶೂಟಿಂಗ್ ಆರಂಭಿಸಲಿದೆ. ಆಗಸ್ಟ್ 30ರ ತನಕ ಶೂಟಿಂಗ್ ನಡೆಲಿದೆ. ದಕ್ಷಿಣದ ಖ್ಯಾತ ನಟಿ ಲಕ್ಷ್ಮೀ ಮೆನನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.

English summary
It is dream come true for Nandini, 20-year-old visually impaired girl of Samarthanam organization, trust for the disabled in Bangalore. Nandini has been selected by Tamil movie Cukkoo to enact second lead role. The movie is based on real story based on visually impaired person. All the best to Nandini.
Please Wait while comments are loading...