ಕನ್ನಡಕ್ಕೆ ಡಬ್ ಆಗಿದ್ದ ತಮಿಳು ಸಿನಿಮಾ ರಿಮೇಕ್ ನಲ್ಲಿ ಶಿವರಾಜ್ ಕುಮಾರ್?

Recommended Video

ತಮಿಳಿನ ಈ ಸೂಪರ್ ಹಿಟ್ ಚಿತ್ರ ಶಿವಣ್ಣನಿಗೆ ಇಷ್ಟ ಅಂತೆ..!? | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ 'ಕವಚ' ಚಿತ್ರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರ ಬೆನ್ನಲ್ಲೆ 'ರುಸ್ತುಂ', 'ದ್ರೋಣ' ಮತ್ತು 'ಆನಂದ್' ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಇದರ ನಡುವೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

ಸೆಂಚುರಿ ಸ್ಟಾರ್ ಮತ್ತೊಂದು ರಿಮೇಕ್ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೌದು, ತಮಿಳಿನ ಸೂಪರ್ ಹಿಟ್ 'ವಿಶ್ವಾಸಂ' ಚಿತ್ರ ಕನ್ನಡಕ್ಕೆ ರಿಮೇಕ್ ಆಗುತ್ತಿದೆಯಂತೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. 'ವಿಶ್ವಾಸಂ' ತಮಿಳು ನಟ ತಲಾ ಅಜಿತ್ ಅಭಿನಯ ಚಿತ್ರ.

'ವಿಶ್ವಾಸಂ' ಈಗಾಗಲೆ 'ಜಗಮಲ್ಲ' ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಿದೆ. ಆದ್ರೀಗ ರಿಮೇಕ್ ಮಾಡುವ ಪ್ಲಾನ್ ನಡೆಯುತ್ತಿದೆಯಂತೆ. ಯಾರು ನಿರ್ದೇಶನ ಮಾಡುತ್ತಾರೆ? ಯಾರು ರಿಮೇಕ್ ಮಾಡಲು ಮುಂದೆ ಬಂದಿದ್ದಾರೆ ಎನ್ನುವ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಈಗಾಗಲೆ ಶಿವಣ್ಣ ಜೊತೆ ಮಾತುಕತೆ ಕೂಡ ನಡೆಯುತ್ತಿದೆಯಂತೆ.

Viswasam movie all set to be remade in Kannada

ಅಂದ್ಹಾಗೆ ಶಿವಣ್ಣ ಅನೇಕ ವರ್ಷಗಳಿಂದ ರಿಮೇಕ್ ಚಿತ್ರಗಳಿಂದ ದೂರ ಉಳಿದಿದ್ದರು. ಆದ್ರೆ ಇತ್ತೀಚಿಗೆ ರಿಲೀಸ್ ಆದ ಮಲಯಾಳಂನ 'ಒಪ್ಪಂ' ಚಿತ್ರದ ಕನ್ನಡ ರಿಮೇಕ್ 'ಕಮಚ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಉತ್ತಮ ಸಿನಿಮಾಗಳನ್ನು ರಿಮೇಕ್ ಮಾಡಲು ಏನು ಅಭ್ಯಂತರವಿಲ್ಲ ಎಂದು ಈ ಹಿಂದೆ ಶಿವಣ್ಣನೆ ಹೇಳಿದ್ದರು. ಹಾಗಾಗಿ ಉತ್ತಮ ಸಿನಿಮಾಗಳ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಸೆಂಚುರಿ ಸ್ಟಾರ್.

More from Filmibeat

English summary
Tamil super hit 'Viswasam' movie all set to be remade in Kannada. It will be century star Shivarajkumar will getting into Ajith role in the remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X