ವಿವೇಕ್ ಒಬೆರಾಯ್ ಗೆ ಜೀವ ಬೆದರಿಕೆ : ಪೊಲೀಸ್ ರಕ್ಷಣೆಯಲ್ಲಿ ನಟ
ಬಾಲಿವುಡ್ ನಟ ವಿವೇಕ್ ಒಬೆರಾಯ್ ಇತ್ತೀಚಿಗಷ್ಟೆ ಹೊಸದೊಂದು ವಿವಾದ ಮಾಡಿಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಇದರ ನಡುವೆ ಮತ್ತೊಂದು ಮತ್ತೊಂದು ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ವಿವೇಕ್ ಒಬೆರಾಯ್ ಗೆ ಜೀವ ಬೆದರಿಕೆ ಕೆರಗಳು ಬರುತ್ತಿವೆಯಂತೆ.
ಸದ್ಯ ವಿವೇಕ್ ಪೊಲೀಸ್ ರಕ್ಷಣೆ ಕೇಳಿದ್ದು ಮುಂಬೈ ಪೊಲೀಸರ ಭದ್ರತೆಯಲ್ಲಿ ವಾಸಿಸುವಂತಾಗಿದೆ. ಅಷ್ಟಕ್ಕು ಜೀವ ಬೆದರಿಕೆ ಕರೆ ಬರುತ್ತಿರುವ ಕಾರಣ ವಿವೇಕ್ ಇತ್ತೀಚಿಗೆ ನಟಿ ಐಶ್ವರ್ಯ ರೈ ವಿರುದ್ಧ ಅವಿವೇಕ ಟ್ವೀಟ್ ಮಾಡಿ ವಿವಾದದಲ್ಲಿ ಸಿಲುಕಿಕೊಂಡಿದ್ದರು.
ಚುನಾವಣೆ ಫಲಿತಾಂಶಕ್ಕೆ ಹೋಲಿಸಿ ವಿವೇಕ್ ಒಬೆರಾಯ್ ಸೇರಿದಂತೆ ಐಶ್ವರ್ಯ ರೈ ಮತ್ತು ಸಲ್ಮಾನ್ ಫೋಟೋವನ್ನು ಟ್ರೋಲ್ ಮಾಡಲಾಗಿತ್ತು. ಆ ಫೋಟೋವನ್ನು ವಿವೇಕ್ ಒಬೆರಾಯ್ ಟ್ವಿಟ್ಟರ್ ನಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರ ಮತ್ತು ಬಾಲಿವುಡ್ ಸೆಲೆಬ್ರಿಟಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

ಅಷ್ಟೆಯಲ್ಲ ಕ್ಷಮೆಯಾಚಿಸದಿದ್ದರೆ ವಿವೇಕ್ ವಿರುದ್ಧ ಕಾನೂನು ಕ್ರಮ ಎದುರಿಸ ಬೇಕಾಗುತ್ತೆ. ಅಲ್ಲದೆ ಟ್ವಿಟ್ಟರ್ ಖಾತೆಯಲ್ಲೆ ಡಿಲಿಟ್ ಮಾಡಿಸಬೇಕಾಗುತ್ತೆ ಎಂದು ಮಹಿಳಾ ಆಯೋಗ ಎಚ್ಚರಿಕೆ ನೀಡಿತ್ತು.
ಈ ಟ್ವೀಟ್ ನಲ್ಲಿ ತಪ್ಪೇನಿದೆ ಕ್ಷಮೆ ಕೇಳುವ ಮಾತೆ ಇಲ್ಲ ಎಂದು ಖಡಕ್ ಆಗಿಯೆ ಹೇಳುವ ಮೂಲಕ, ಟ್ವೀಟ್ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದರು ವಿವೇಕ್ ಒಬೆರಾಯ್. ಆ ನಂತರ ಎಲ್ಲಾ ಕಡೆಯಿಂದ ಭಾರಿ ವಿವಾದ ವ್ಯಕ್ತವಾದ ಹಿನ್ನಲೆ ಟ್ವೀಟ್ ಡಿಲಿಟ್ ಮಾಡಿ ಕ್ಷಮೆಯಾಚಿಸಿದ್ದರು.


Click it and Unblock the Notifications











