ಶಿವಣ್ಣನ ಜೊತೆಗೆ ತೆರೆಹಂಚಿಕೊಳ್ತಾರೆ ಬಾಲಿವುಡ್ ನಟ.! ಯಾರದು.?

By Harshitha

Recommended Video

ರುಸ್ತುಂ ಶಿವಣ್ಣನಿಗಾಗಿ ಬಾಲಿವುಡ್‌ನಿಂದ ಬಂದ ಹೀರೋ...!! | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ರುಸ್ತುಮ್' ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಸ್ಟಂಟ್ ಮಾಸ್ಟರ್ ರವಿವರ್ಮ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

'ರುಸ್ತುಮ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ ಆಗಿದ್ದಾರೆ. ಅಲ್ಲದೇ, ಸಿನಿಮಾದಲ್ಲಿ ಮಹೇಂದ್ರ, ಶತ್ರು, ಹರೀಶ್ ಉಥಾಮನ್ ಎಂಬ ವಿಲನ್ ಗಳು ಶಿವಣ್ಣನ ವಿರುದ್ಧ ತೊಡೆ ತಟ್ಟಿ ನಿಲ್ಲಲಿದ್ದಾರೆ.

ಈ ಎಲ್ಲದರ ನಡುವೆ 'ರುಸ್ತುಮ್' ಅಡ್ಡದಿಂದ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. 'ರುಸ್ತುಮ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಬಾಲಿವುಡ್ ನಟ ತೆರೆಹಂಚಿಕೊಳ್ಳಲಿದ್ದಾರೆ. ಯಾರದು ಅಂತೀರಾ.? ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ಇವರೇ 'ಆ' ಬಾಲಿವುಡ್ ನಟ

ಇವರೇ 'ಆ' ಬಾಲಿವುಡ್ ನಟ

'ರುಸ್ತುಮ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಕಾಲಿವುಡ್ ಹಾಗೂ ಟಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿರುವ ವಿವೇಕ್ ಒಬೆರಾಯ್ ಇದೀಗ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದಾರೆ.

ಗಾಸಿಪ್ ಅಲ್ಲ.!

ಗಾಸಿಪ್ ಅಲ್ಲ.!

ಕನ್ನಡ ಚಿತ್ರರಂಗಕ್ಕೆ ವಿವೇಕ್ ಒಬೆರಾಯ್ ಕಾಲಿಡುತ್ತಿರುವ ಮ್ಯಾಟರ್ ಗಾಸಿಪ್ ಅಲ್ಲ. ವಿವೇಕ್ ಒಬೆರಾಯ್ ರನ್ನ ಭೇಟಿ ಮಾಡಿರುವುದು ನಿಜ ಅಂತ ಸ್ವತಃ ನಿರ್ಮಾಪಕ ಜಯಣ್ಣ ಖಚಿತ ಪಡಿಸಿದ್ದಾರೆ.

ಇದೇ ತಿಂಗಳು ಬೆಂಗಳೂರಿಗೆ ಬರ್ತಾರೆ ವಿವೇಕ್

ಇದೇ ತಿಂಗಳು ಬೆಂಗಳೂರಿಗೆ ಬರ್ತಾರೆ ವಿವೇಕ್

'ರುಸ್ತುಮ್' ಕಥೆ ಕೇಳಿ ಕ್ಲೀನ್ ಬೌಲ್ಡ್ ಆಗಿರುವ ವಿವೇಕ್ ಒಬೆರಾಯ್ ಇದೇ ತಿಂಗಳ ಕೊನೆಯ ವಾರದಂದು ಬೆಂಗಳೂರಿಗೆ ಬರ್ತಾರೆ. ಆಗಲೇ, 'ರುಸ್ತುಮ್' ಸೆಟ್ ಗೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ.

ವಿವೇಕ್ ಒಬೆರಾಯ್ ಪಾತ್ರವೇನು.?

ವಿವೇಕ್ ಒಬೆರಾಯ್ ಪಾತ್ರವೇನು.?

ಅಸಲಿಗೆ, 'ರುಸ್ತುಮ್' ಸಿನಿಮಾದಲ್ಲಿ ವಿವೇಕ್ ಒಬೆರಾಯ್ ಪಾತ್ರವನ್ನ ಎಂಬುದರ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. 20 ಕೋಟಿ ಬಜೆಟ್ ನಲ್ಲಿ ಜಯಣ್ಣ 'ರುಸ್ತುಮ್' ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Bollywood Actor Vivek Oberoi to make Sandalwood debut with Shiva Rajkumar's 'Rustom'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X