'ಕರುನಾಡ ಚಕ್ರವರ್ತಿ'ಗೆ ಬಾಲಿವುಡ್ ನಟನ ಬಹುಪರಾಕ್
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಜಾತಶತ್ರು. ಕನ್ನಡ ಕಲಾವಿದರು ಮಾತ್ರವಲ್ಲದೇ ಪರಭಾಷೆಯ ನಟ-ನಟಿಯರು ಕೂಡ ಕರುನಾಡ ಚಕ್ರವರ್ತಿಯನ್ನ ಹೆಚ್ಚು ಇಷ್ಟಪಡ್ತಾರೆ. ಅದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ.
ಹೌದು, ಬಾಲಿವುಡ್ ನಟ ವಿವೇಕ್ ಒಬೆರಾಯ್ ಸೆಂಚುರಿಸ್ಟಾರ್ ಜೊತೆ ಅಭಿನಯಿಸಿದ ಅನುಭವವನ್ನ ಶೇರ್ ಮಾಡಿದ್ದು, ರುಸ್ತುಂ ಚಿತ್ರದಲ್ಲಿ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
''ಸಾಹಸ ನಿರ್ದೇಶಕ ರವಿವರ್ಮ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಅವರೆಲ್ಲರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ದೊಡ್ಡ ಗೌರವ. ಚಿತ್ರದಲ್ಲಿ ನನ್ನದು ಅತ್ಯಂತ ಪುಟ್ಟ ಪಾತ್ರವಾದರೂ, ಸಿಕ್ಕ ಅನುಭವ ಅದ್ಭುತವಾಗಿತ್ತು. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ಶಿವಣ್ಣ ಅವರನ್ನ ನೋಡಿದ್ದೇನೆ. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ'' ಎಂದು ಹೇಳಿಕೊಂಡಿದ್ದಾರೆ.

ಈಗಾಗಲೇ ಗೊತ್ತಿರುವಾಗ ವಿವೇಕ್ ಒಬೆರಾಯ್ ಹ್ಯಾಟ್ರಿಕ್ ಹೀರೋ ಅಭಿನಯಿಸುತ್ತಿರುವ ರುಸ್ತುಂ ಚಿತ್ರದಲ್ಲಿ ವಿಶೇಷ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಶಿವಣ್ಣ ಪೊಲೀಸ್ ಅಧಿಕಾರಿಯಾಗಿದ್ದು, ವಿವೇಕ್ ಒಬೆರಾಯ್ ಕೂಡ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ವಿವೇಕ್ ಒಬೆರಾಯ್ ಅವರು ರುಸ್ತುಂ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿತ್ತು.
ಇನ್ನುಳಿದಂತೆ ಈ ಚಿತ್ರವನ್ನು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡುತ್ತಿದ್ದಾರೆ. ಇದು ರವಿವರ್ಮ ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಸಿನಿಮಾದಲ್ಲಿ ರಚಿತಾ ರಾಮ್, ಶ್ರದ್ಧಾ ಶ್ರೀನಾಥ್ ಹಾಗೂ ಮಯೂರಿ ನಾಯಕಿಯಾರಾಗಿ ನಟಿಸುತ್ತಿದ್ದಾರೆ.


Click it and Unblock the Notifications











