2012ರ ಸೂಪರ್ ನಿರ್ದೇಶಕ ಯಾರು? ಮತ ಹಾಕಿ

By Mahesh

ಚಿತ್ರ ಹಿಟ್ ಆದ ತಕ್ಷಣ ಅದರ ಕ್ರೆಡಿಟ್ ಸಾಮಾನ್ಯವಾಗಿ ಹೀರೋ ಅಥವಾ ಹೀರೋಯಿನ್ ಗೆ ಸೇರುತ್ತದೆ. ಆದರೆ, ಇತ್ತೀಚೆಗೆ ಟ್ರೆಂಡ್ ಬದಲಾಗಿದ್ದು, ನಿರ್ದೇಶಕ ಯಾರು ಎಂದು ನೋಡಿಕೊಂಡು ಥೇಟರ್ ಗೆ ಜನ ಬರೋದಿಕ್ಕೆ ಶುರು ಮಾಡಿರೋದು ಒಳ್ಳೆ ಬೆಳವಣಿಗೆ.

2012 ಸುಮಾರು 90 ಕ್ಕೂ ಅಧಿಕ ಚಿತ್ರಗಳು ತೆರೆಗೆ ಅಪ್ಪಳಿಸಿದೆ. ಇದರಲ್ಲಿ ಸುಮಾರು 16 ಚಿತ್ರಗಳು ಗೆದ್ದಿದೆ. 2012ರಲ್ಲಿ ಕನ್ನಡ ಚಿತ್ರರಂಗ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕಂಡಿದೆ. ಚಿತ್ರ ಗೆದ್ದ ಮಾತ್ರಕ್ಕೆ ನಿರ್ದೇಶಕನೂ ಗೆದ್ದ ಎನ್ನಲು ಬರುವುದಿಲ್ಲ.

ಸದಾಶಿವ ಶೆಣೈ ಅವರ 'ಪ್ರಾರ್ಥನೆ', ಬರಗೂರು ರಾಮಚಂದ್ರಪ್ಪ ಅವರ 'ಭಾಗಿರಥಿ', ಕಾರ್ತಿಕ್ ಅವರ 12 AM ಮಧ್ಯರಾತ್ರಿ, ಶಶಿಕಾಂತ್ ಅವರ 'ಬಾಲ್ ಪೆನ್' ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದ ಚಿತ್ರಗಳಾಗಿದ್ದವು. [2013: ಅತ್ಯಂತ ಯಶಸ್ವಿ ನಿರ್ದೇಶಕ ಯಾರು?]

ಗಲ್ಲಾ ಪೆಟ್ಟಿಗೆಯಲ್ಲಿ ಸೋತ ಚಿತ್ರದ ನಿರ್ದೇಶಕನನ್ನು ಕೂಡಾ ಮೆಚ್ಚಿದ ಉದಾಹರಣೆಗಳಿದೆ. ಒಟ್ಟಾರೆ 2012ರ ಯಶಸ್ಸು ಕಂಡ ಚಿತ್ರಗಳ ಪಟ್ಟಿಯಲ್ಲಿ ನಿಮ್ಮ ಆಯ್ಕೆ ತಿಳಿಸಿದ್ದೀರಾ. ಅದರಂತೆ ಈಗ ಸ್ವಮೇಕ್ ಚಿತ್ರ ನೀಡಿ ಜನ ಮೆಚ್ಚುಗೆ ಗಳಿಸಿದ ನಿರ್ದೇಶಕ ಯಾರು ಎಂಬುದನ್ನು ತಪ್ಪದೇ ತಿಳಿಸಿ

ಚಿತ್ರ :ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಚಿತ್ರ :ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಬಿಗ್ ಬಜೆಟ್ ಚಿತ್ರ, ದೊಡ್ಡ ಸ್ಟಾರ್ ಪಡೆಯನ್ನು ಕಟ್ಟಿಕೊಂಡು ಚಿತ್ರ ನಿಭಾಯಿಸುವುದು ತುಂಬಾ ಕಷ್ಟ.

ಉತ್ತರ ಕರ್ನಾಟಕ ಭಾಷೆ ಅರಿವಿಲ್ಲದಿದ್ದರೂ ಸಮರ್ಥವಾಗಿ ದರ್ಶನ್ ಸೇರಿದಂತೆ ಎಲ್ಲರಿಂದಲೂ ಉತ್ತಮ ಅಭಿನಯ ಹೊರ ತೆಗೆದ ನಾಗಣ್ಣ ಅವರಿಗೆ ಪ್ರೇಕ್ಷಕರ ಸಲಾಂ. ಹಾಡುಗಳ ಆಯ್ಕೆ ಮಾತ್ರ ನಾಗಣ್ಣ ಫೇಲಾಗಿದ್ದಾರೆ.

ಚಿತ್ರ: ಅದ್ದೂರಿ

ಚಿತ್ರ: ಅದ್ದೂರಿ

ಹೊಸ ನಟ, ಲವಲವಿಕೆಯ ಪ್ರೇಮ ಕಥೆ, ಪ್ರಬುದ್ಧ ನಟಿ ಜೊತೆಗೆ ಉತ್ತಮ ಸಂಗೀತ ಆಯ್ಕೆ ಮೂಲಕ ಬಹು ದಿನಗಳ ನಂತರ ಅರ್ಜುನ್ ಬಂಪರ್ ಹಿಟ್ ನೀಡಿದ್ದಾರೆ. ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಜೋಡಿಯನ್ನು ಸಮರ್ಥವಾಗಿ ನಿಭಾಯಿಸಿದ ಅರ್ಜುನ್ ಗೆದ್ದಿದ್ದಾರೆ.

ಚಿತ್ರ: ಅಣ್ಣಾ ಬಾಂಡ್

ಚಿತ್ರ: ಅಣ್ಣಾ ಬಾಂಡ್

ನಿರೀಕ್ಷೆಗೂ ಮೀರಿ ಚಿತ್ರ ಹಿಟ್ ಆಗದಿದ್ದರೂ ದುನಿಯಾ ಸೂರಿ ಎಂದಿನ ನಿರೂಪಣಾ ಶೈಲಿ, ಪವರ್ ಸ್ಟಾರ್ ಅಪ್ಪು ಅಭಿನಯ, ಖಳನಾಗಿ ಜಾಕಿ ಶ್ರಾಫ್ ಕರೆ ತಂದಿದ್ದು ವರ್ಕ್ ಔಟ್ ಆಗಿದೆ.

ಸೂಪರ್ ಡೂಪರ್ ಹಿಟ್ ಲಿಸ್ಟ್ ನಿಂದ ಕೆಳಗೆ ಜಾರಿದ್ದರೂ ಯಶಸ್ವಿ ಚಿತ್ರವಾಗಿಸುವಲ್ಲಿ ಸೂರಿ ಶ್ರಮ ಎದ್ದು ಕಾಣುತ್ತದೆ.
ಚಿತ್ರ : ಗೋವಿಂದಾಯ ನಮಃ

ಚಿತ್ರ : ಗೋವಿಂದಾಯ ನಮಃ

ಯೋಗರಾಜ ಭಟ್ಟರ ಶಿಷ್ಯ ಪವನ್ ಒಡೆಯರ್ ಮೊದಲ ಚಿತ್ರದಲ್ಲೇ ಗೆದ್ದಿದ್ದಾರೆ. ಕೋಮಲ್ ಕಾಮಿಡಿ ಟೈಂ, ವಿನೂತನ ಶೈಲಿಯಲ್ಲಿ ಹಾಡುಗಳ ಚಿತ್ರೀಕರಣ, ಸಂಭಾಷಣೆಯಲ್ಲಿ ದ್ವಂದ್ವಾರ್ಥ ಎಲ್ಲವನ್ನು ಸರಿಯಾದ ಪ್ರಮಾಣದಲ್ಲಿ ನೀಡಿರುವ ಪವನ್, ಕನ್ನಡ ಪಾಲಿಗೆ ಸಿಕ್ಕಿರುವ ಭರವಸೆಯ ಯುವ ನಿರ್ದೇಶಕ.

ಚಿತ್ರ : ದಂಡುಪಾಳ್ಯ

ಚಿತ್ರ : ದಂಡುಪಾಳ್ಯ

ಈ ಚಿತ್ರ ಗೆಲ್ಲುವಲ್ಲಿ ನಿರ್ದೇಶಕ ಪಾತ್ರ ಅಷ್ಟೇನು ಇಲ್ಲ ಎಂದೆನಿಸಿದರೂ ದೊಡ್ಡ ಸ್ಟಾರ್ ಪಡೆಯನ್ನು ನಿಭಾಯಿಸಿ, ವಿವಾದಗಳ ನಡುವೆ ಯಶಸ್ವಿ ಇತ್ರ ಕೊಟ್ಟ ಶ್ರೀನಿವಾಸ ರಾಜುಗೂ ಪ್ರೇಕ್ಷಕರ ಮೆಚ್ಚುಗೆ ಇದೆ. ಪೂಜಾ ಗಾಂಧಿ ಈ ರೇಂಜ್ ಗೆ ನಟನೆ ಮಾಡಿದ್ದಾರೆ ಎಂದರೆ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ ಎಂದು ಪ್ರೇಕ್ಷಕರು ಹೇಳೋದು ನಿಜ.

ಚಿತ್ರ: ಡ್ರಾಮಾ

ಚಿತ್ರ: ಡ್ರಾಮಾ

ವರ್ಷದ ಕೊನೆ ಒಳ್ಳೆ ಬೆಳೆ ತೆಗೆಯುವುದು ಭಟ್ಟರ ಅಭ್ಯಾಸ. ಕಥೆ ಇಲ್ಲದೆ ರೀಲು ಸುತ್ತಿ ಮನರಂಜನೆ ಫಾರ್ಮ್ಯೂಲಾವೇ ಬಂಡವಾಳ ಹಾಕಿಕೊಂಡಿರುವ ಭಟ್ಟರು, ಹೊಸ ನಟ, ನಟಿಯರ ತಂಡ, ಉದ್ದುದ್ದಾದ ಡೈಲಾಗ್ಸ್ ಗೆ ಕಟ್, ಬೇರೆ ಪ್ರಾಂತ್ಯ, ಭಾಷೆ ಬಳಕೆ ಮಾಡಿದ ಪರಿಣಾಮ ಯಶಸ್ವಿ ನಿರ್ದೇಶಕರ ಪಟ್ಟಿ ಸೇರಿದ್ದಾರೆ.

ಚಿತ್ರ: ಎದೆಗಾರಿಕೆ

ಚಿತ್ರ: ಎದೆಗಾರಿಕೆ

ವಿಮರ್ಶಕರು, ಪ್ರೇಕ್ಷಕರು ಒಕ್ಕೊರಲಿನಿಂದ ಮೆಚ್ಚುಗೆ ಸೂಸಿರುವ ಎದೆಗಾರಿಕೆ ಚಿತ್ರ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಆ ದಿನಗಳು ಶೈಲಿಯ ಚಿತ್ರಕ್ಕೆ ಹಾತೊರೆಯುತ್ತಿದ್ದ ಪ್ರೇಕ್ಷಕರಿಗೆ ಕಾಸಿಗೆ ತಕ್ಕ ಕಜ್ಜಾಯ ನೀಡುವಲ್ಲಿ ಅಗ್ನಿ ಶ್ರೀಧರ್ ಹಾಗೂ ಸುಮನಾ ಕಿತ್ತೂರು ಅವರ ತಂಡ ಯಶಸ್ವಿಯಾಗಿದೆ. ಆದಿತ್ಯ ಅವರಿಗೂ ಉತ್ತಮ ಬ್ರೇಕ್ ನೀಡುವ ಚಿತ್ರ ಇದಾಗಲಿದೆ.

ಚಿತ್ರ: ಸಿದ್ಲಿಂಗು

ಚಿತ್ರ: ಸಿದ್ಲಿಂಗು

ಸಂಭಾಷಣೆಯನ್ನೇ ಬಂಡವಾಳ ಮಾಡಿಕೊಂಡಿರುವ ದ್ವಂದ್ವಾರ್ಥ, ಅನಗತ್ಯ ಸನ್ನಿವೇಶಗಳನ್ನು ಒಳಗೊಂಡಿರುವ ಸಿದ್ಲಿಂಗು ಯಾಕೋ ಯುವ ಜನಾಂಗಕ್ಕೆ ಭಾರಿ ಇಷ್ಟವಾಗಿದೆ. ವಿಜಯ ಪ್ರಸಾದ್ ಅವರ ಸ್ಟೋರಿ ಐಡಿಯಾ ಹಾಗೂ ಕಥಾ ವಿಸ್ತರಣೆಗೆ ಫುಲ್ ಮಾರ್ಕ್ಸ್ ಆದರೆ, ಬೆಳ್ಳಿತೆರೆಗೂ ಕಿರುತೆರೆಗೂ ಇನ್ನೂ ವ್ಯತ್ಯಾಸ ಕಾಣಬೇಕು.

ಚಿತ್ರ : ಭೀಮಾತೀರದಲ್ಲಿ

ಚಿತ್ರ : ಭೀಮಾತೀರದಲ್ಲಿ

ವಿವಾದಗಳಿಂದಲೇ ಚಿತ್ರ ಜನರ ಕಿವಿಗೆ ಬಿದ್ದರೂ, ಥೇಟರ್ ಗೆ ಹೋದವರಿಗೆ ಮೋಸವಾಗುವುದಿಲ್ಲ. ಒಂದು ಪ್ರದೇಶದ ಕಥೆಯಾದರೂ ಅದನ್ನು ಸಮರ್ಥವಾಗಿ ಓಂ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಸಾಹಸ ದೃಶ್ಯಗಳು, ಸಂಭಾಷಣೆ ಮೂಲಕ ವಿಜಯ್ ಹಾಗೂ ಪ್ರಣೀತಾ ಚಿತ್ರ ಹಿಟ್ ಆಗುವಲ್ಲಿ ಓಂ ಹಾಗೂ ಅಣಜಿ ಅವರ ಶ್ರಮ ಎದ್ದು ಕಾಣುತ್ತದೆ.

ಚಿತ್ರ : ಕಠಾರಿ ವೀರ ಸುರಸುಂದರಾಂಗಿ

ಚಿತ್ರ : ಕಠಾರಿ ವೀರ ಸುರಸುಂದರಾಂಗಿ

ಮತ್ತೊಂದು ಭಾರಿ ತಾರಾಗಣವಿದ್ದ, ಕನ್ನಡದ ಮಟ್ಟಿಗೆ ಹೊಸ ಬಗೆಯ ಕಥೆ ಇದ್ದ ಈ ಚಿತ್ರವನ್ನು ಆಮದು ನಿರ್ದೇಶಕ ಸುರೇಶ್ ಕೃಷ್ಣ ಹಾಗೂ ಹೀಗೂ ನಿಭಾಯಿಸಿದ್ದಾರೆ.

ಹಲವು ಸಿನಿಮಾಗಳ ರೀಮಿಕ್ಸ್ ನಂತಿದ್ದರೂ ಕನ್ನಡದಲ್ಲಿ 3ಡಿ ಚಿತ್ರ, ಉಪೇಂದ್ರ ಹಾಗೂ ರಮ್ಯಾ ಜೋಡಿ ಚಿತ್ರ ನಿರ್ದೇಶಿಸಿದ ಕೀರ್ತಿ ಸುರೇಶ್ ಕೃಷ್ಣಗೆ ಸಲ್ಲುತ್ತದೆ.
ಸೂಪರ್ ನಿರ್ದೇಶಕ ಯಾರು?

ಸೂಪರ್ ನಿರ್ದೇಶಕ ಯಾರು?

2012ರ ಸೂಪರ್ ನಿರ್ದೇಶಕ ಯಾರು? ಮತ ಹಾಕಿ http://polls.oneindia.in/5/kannada-polls.html

More from Filmibeat

English summary
Here, we are giving an opportunity for our readers to choose the best Kannada movie director of the year 2012 from the list. Follow the slideshow to see the list and vote for your favourite director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X