twitter
    For Quick Alerts
    ALLOW NOTIFICATIONS  
    For Daily Alerts

    2013: ಅತ್ಯಂತ ಯಶಸ್ವಿ ನಿರ್ದೇಶಕ ಯಾರು?

    By ಮಲೆನಾಡಿಗ
    |

    2013ರಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸತನವನ್ನು ಪರಿಚಯಿಸಿದ ಕೀರ್ತಿ ಪ್ರತಿಭಾವಂತ ನಿರ್ದೇಶಕರಿಗೆ ಸಲ್ಲುತ್ತದೆ. ಸಾಮಾನ್ಯವಾಗಿ ಒಂದು ಚಿತ್ರ ಹಿಟ್ ಆದ ತಕ್ಷಣ ಅದರ ಕ್ರೆಡಿಟ್ ಸಾಮಾನ್ಯವಾಗಿ ಹೀರೋ ಅಥವಾ ಹೀರೋಯಿನ್ ಗೆ ಸೇರುತ್ತದೆ. ಆದರೆ, ಇತ್ತೀಚೆಗೆ ಟ್ರೆಂಡ್ ಬದಲಾಗಿದ್ದು, ನಿರ್ದೇಶಕ ಯಾರು ಎಂದು ನೋಡಿಕೊಂಡು ಥೇಟರ್ ಗೆ ಜನ ಬರೋದಿಕ್ಕೆ ಶುರು ಮಾಡಿರೋದು ಒಳ್ಳೆ ಬೆಳವಣಿಗೆ.

    ಇನ್ನು ಕೆಲವು ಯಶಸ್ವಿ ನಾಯಕರು ಹಲವಾರು ನಿರ್ದೇಶಕರಿಗೆ ಹುರುಪು ತುಂಬಿದ ಉದಾಹರಣೆಗಳು ಕಾಣಸಿಕ್ಕಿವೆ. ಭಜರಂಗಿ ಚಿತ್ರದಲ್ಲಿ ವಿಜೃಂಭಿಸಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಕೂಡಾ ಚಿತ್ರದ ಯಶಸ್ಸು ಸಂಪೂರ್ಣವಾಗಿ ನಿರ್ದೇಶಕ ಎ.ಹರ್ಷ ಅವರಿಗೆ ಸಲ್ಲಬೇಕು ಎನ್ನುವ ಮೂಲಕ ನಿರ್ದೇಶಕನನ್ನು ಎತ್ತಿ ಹಿಡಿದರು. ಇನ್ನೊಂದೆಡೆ ಕಿಚ್ಚ ಸುದೀಪ್ ಅವರು ಕೇಸ್ ನಂ 18/9 ಚಿತ್ರವನ್ನು ಮತ್ತೊಮ್ಮೆ ರಿಲೀಸ್ ಮಾಡಿಸಿ ಚಿತ್ರ ತಂಡಕ್ಕೆ ಪ್ರೋತ್ಸಾಹ ತುಂಬಿದರು.

    ಈ ಬಾರಿ ಹೊಸ ಹೊಸ ನಿರ್ದೇಶಕರು, ನಟರಿಂದ ನಿರ್ಮಾಪಕರ ಜೋಳಿಗೆ ತುಂಬಿದೆ. ಆದರೆ, ಕನ್ನಡ ಚಿತ್ರಗಳ ಗುಣಮಟ್ಟ ಮಾತ್ರ ಬರಿದಾಗಿದೆ. ಸುಮಾರು 120 ಕ್ಕೂ ಅಧಿಕ ಚಿತ್ರಗಳು ಬೆಳ್ಳಿತೆರೆಯಲ್ಲಿ ಕಾಣಿಸಿವೆ. ಇದರಲ್ಲಿ ಸುಮಾರು 15 ಚಿತ್ರಗಳು ಗೆದ್ದಿದೆ. 2013 ರಲ್ಲಿ ಕನ್ನಡ ಚಿತ್ರರಂಗ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕಂಡಿದೆ. ಚಿತ್ರ ಗೆದ್ದ ಮಾತ್ರಕ್ಕೆ ನಿರ್ದೇಶಕನೂ ಗೆದ್ದ ಎನ್ನಲು ಬರುವುದಿಲ್ಲ.[ಕನ್ನಡ ಚಿತ್ರಗಳ ಪೋಸ್ಟ್ ಮಾರ್ಟಂ]

    ಓದುಗರಿಗೆ ಸೂಚನೆ: ವರದನಾಯಕ, ಬುಲ್ ಬುಲ್, ಬೃಂದಾವನ, ರಾಜಾ ಹುಲಿ ಚಿತ್ರದ ನಿರ್ದೇಶಕರನ್ನು ಪಟ್ಟಿಯಿಂದ ಕೈ ಬಿಡಲಾಗಿತ್ತು. ಎಲ್ಲವೂ ಯಶಸ್ವಿ ಚಿತ್ರಗಳಾದರೂ ರಿಮೇಕ್ ಚಿತ್ರಗಳಾದ್ದರಿಂದ ಸೇರಿಸಲಾಗಿಲ್ಲ. ಇಲ್ಲಿರುವ ಇತರೆ ಚಿತ್ರಗಳು ಹಲವು ಚಿತ್ರಗಳ ಕಿಚಡಿ ಏನಿಸಿದರೆ ನಾವು ಅದಕ್ಕೆ ಜವಾಬ್ದಾರರಲ್ಲ.

    ಗಲ್ಲಾ ಪೆಟ್ಟಿಗೆಯಲ್ಲಿ ಸೋತ ಚಿತ್ರದ ನಿರ್ದೇಶಕನನ್ನು ಕೂಡಾ ಮೆಚ್ಚಿದ ಉದಾಹರಣೆಗಳಿದೆ. ಒಟ್ಟಾರೆ 2013ರ ಯಶಸ್ಸು ಕಂಡ ಹಾಗೂ ಭರವಸೆ ಮೂಡಿಸಿದ ನಿರ್ದೇಶಕರ ಪಟ್ಟಿಯಲ್ಲಿ ನಿಮ್ಮ ಆಯ್ಕೆ ತಪ್ಪದೇ ತಿಳಿಸಿ ನಿಮ್ಮ ಮೆಚ್ಚಿನ ನಿರ್ದೇಶಕ ಯಾರು ಎಂಬುದನ್ನು ಕೊನೆ ಸ್ಲೈಡ್ ನಲ್ಲಿ ಆಯ್ಕೆ ಮಾಡಿ...

    ಶಶಾಂಕ್ : ಬಚ್ಚನ್

    ಶಶಾಂಕ್ : ಬಚ್ಚನ್

    ಸುದೀಪ್, ಪರುಲ್ ಯಾದವ್ ಹಾಗೂ ಭಾವನಾ ಅಭಿನಯ, ವಿಭಿನ್ನ ನಿರೂಪಣೆ ಮೂಲಕ ಬಚ್ಚನ್ ಚಿತ್ರ ಯಶಸ್ವಿಗೆ ಶಶಾಂಕ್ ಕಾರಣರಾದರು.

    ಚಿತ್ರದಲ್ಲಿ ಗಣಿಗಾರಿಕೆ ಸಮಸ್ಯೆ, ಮುಗ್ಧಜನರ ಶೋಷಣೆ ಜತೆಗೆ ಸುದೀಪ್ ಅವರಿಗೆ ಹೊಸ ಬಗೆ ಲುಕ್ ಹಾಗೂ ಇಮೇಜ್ ತಂದುಕೊಟ್ಟ ಇದಾಗಿದ್ದು, ಶಶಾಂಕ್ ಕೂಡಾ ತಮ್ಮ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ ಕಥೆ ಹೇಳಿದ್ದು ಇಲ್ಲಿ ಜನ ಮೆಚ್ಚುಗೆ ಗಳಿಸಿತು. 8 ವಾರಗಳ ಕಾಲ ಓಡಿದ ಈ ಚಿತ್ರ ಗಳಿಕೆಯಲ್ಲೂ ಭರ್ಜರಿಯಾಗಿ ಲಾಭ ಮಾಡಿದ ಚಿತ್ರ.
     ಪವನ್ ಒಡೆಯರ್ : ಗೂಗ್ಲಿ

    ಪವನ್ ಒಡೆಯರ್ : ಗೂಗ್ಲಿ

    ಗೋವಿಂದಾಯ ನಮ: ಯಶಸ್ಸಿನ ನಂತರ ಗೂಗ್ಲಿ ಚಿತ್ರ ಕೈಗೆತ್ತಿಕೊಂಡು ಟ್ರೇಲರ್ ಮೂಲಕವೇ ಕ್ರೇಜ್ ಹುಟ್ಟು ಹಾಕಿದರು. ಈ ಚಿತ್ರ ತೆಲುಗು, ತಮಿಳು ಚಿತ್ರರಂಗಕ್ಕೂ ಹಾರಿದ್ದು ಯಶಸ್ಸಿಗೆ ಸಾಕ್ಷಿಯಾಗಿದೆ.

    ಯಶ್ ಹಾಗೂ ಕೃತಿ ಕರಬಂದ ಅವರ ಲವಲವಿಕೆಯ ಅಭಿನಯ. ಮಾಮೂಲಿ ಪ್ರೇಮ ಕಥೆಯಲ್ಲಿ ಸ್ವಲ್ಪ ಟ್ವಿಸ್ಟ್ ಹಾಗೂ ಕುತೂಹಲ ಕಾಯ್ದುಕೊಳ್ಳುವಿಕೆ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಪವನ್ ಯಶಸ್ವಿಯಾದರು. ಸುಮಾರು 16 ವಾರಗಳ ಕಾಲ ಓಡಿದ ಚಿತ್ರದ ಹಣಗಳಿಕೆ, ಜನಪ್ರಿಯತೆ, ಸಂಗೀತಮಯವಾಗಿ ಕೂಡಾ ಹಿಟ್ ಚಿತ್ರ ಎನಿಸಿತು.
    ನಂದ ಕಿಶೋರ್ : ವಿಕ್ಟರಿ

    ನಂದ ಕಿಶೋರ್ : ವಿಕ್ಟರಿ

    ಶರಣ್ ಅವರು ಅಳುಕಿನಿಂದಲೇ ಆರಂಭಿಸಿದ ವಿಕ್ಟರಿ ಚಿತ್ರ ಭರ್ಜರಿ ಯಶಸ್ಸು ಕಾಣಲು ನಟ, ನಿರ್ದೇಶಕ ನಂದಕಿಶೋರ್ ಕೂಡಾ ಕಾರಣ.

    ಚಿತ್ರದ ಪ್ರತಿ ಸನ್ನಿವೇಶದಲ್ಲೂ ಲವಲವಿಕೆ ಹಾಸ್ಯದ ಹೊನಲು ಹರಿಯುವಂತೆ ಮಾಡುವ ಮೂಲಕ ನಂದಕಿಶೋರ್ ಅವರು ಸಮರ್ಥ ನಿರ್ದೇಶಕ ನಾಗುವ ಎಲ್ಲಾ ಕುರುಹುಗಳನ್ನು ತೋರಿದ್ದಾರೆ. ಖಾಲಿ ಬಾಟ್ಲಿಯಂತೆ ಲೈಫು, ಕಣ್ಣಾ ಮಿಂಚೆ ಹಾಡುಗಳು, ಶರಣ್ ಅವರ ಕಾಮಿಡಿ ಟೈಮಿಂಗ್ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಚಿತ್ರ ಸುಮಾರು 9 ವಾರಗಳ ಓಡುವ ಮೂಲಕ ನಿರ್ಮಾಪಕರ ಜೋಳಿಗೆಯನ್ನು ತುಂಬಿಸಿತು.
    ಪವನ್ ಕುಮಾರ್ : ಲೂಸಿಯಾ

    ಪವನ್ ಕುಮಾರ್ : ಲೂಸಿಯಾ

    ಪ್ರೇಕ್ಷಕರೇ ಪ್ರಭುಗಳು ಎಂಬ ತತ್ವದಂತೆ ಸಾರ್ವಜನಿಕರ ಹಣ ಬಳಸಿ 'ಲೂಸಿಯಾ' ಎಂಬ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಪವನ್ ಕುಮಾರ್ ಹೊಸ ಹಾದಿಯನ್ನು ಹಾಕಿಕೊಟ್ಟಿದ್ದಾರೆ. ಇಂದು ದೇಶ, ವಿದೇಶದಲ್ಲಿ ಲೂಸಿಯಾ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಚಿತ್ರದ ಮೂಲಕ ಹೊಸ ಸಂಗೀತ ನಿರ್ದೇಶಕ, ಗಾಯಕ, ನಾಯಕಿ ಹಾಗೂ ನೀನಾಸಂ ಸತೀಶ್ ಗೆ ಸ್ಟಾರ್ ಗಿರಿ ಹಾಗೂ ಕನ್ನಡದ ಹತಾಶ ಪ್ರೇಕ್ಷಕರಿಗೆ ಹೊಸ ಭರವಸೆ ಅಷ್ಟನ್ನು ನೀಡುವಲ್ಲಿ ಪವನ್ ಯಶ ಕಂಡಿದ್ದಾರೆ.

    ನಾಗಶೇಖರ್ : ಮೈನಾ

    ನಾಗಶೇಖರ್ : ಮೈನಾ

    ನಾಗಶೇಖರ್ ಯಾಕೋ 'ಸ್ಯಾಡ್ ಎಂಡಿಂಗ್ ಮೂವಿ' ಮಾಡ್ತಾರೆ ಎಂದು ಜನ ಗೊಣಗಿಕೊಂಡರೂ ಕನ್ನಡದ ಪಾಲಿಗೆ ನೋವಿನ ಕಥೆಯನ್ನು ನಿರೂಪಿಸಿ ಗೆಲ್ಲುವ ಶಕ್ತಿಯನ್ನು ನಾಗಶೇಖರ್ ಸಮರ್ಥವಾಗಿ ಪಡೆದುಕೊಂಡಿದ್ದಾರೆ.

    ಚೇತನ್, ನಿತ್ಯಾ ಮೆನನ್ ಜೋಡಿ, ಆ ಜಲಪಾತ, ಮೊದಲ ಮಳೆಯಂತೆ ಸಾಂಗ್.. ಸತ್ಯ ಕಥೆಯನ್ನು ನಿರೂಪಿಸಿದ ರೀತಿ ಪ್ರೇಕ್ಷಕರ ಮನತಟ್ಟಿದೆ. ಛೇ ಕೊನೆಯಲ್ಲಿ ಕ್ಲೈಮ್ಯಾಕ್ಸ್ ಬದಲಾಯಿಸಬಾರದಿತ್ತಾ? ಎನಿಸುತ್ತದೆ. ಈ ಮಟ್ಟಿಗೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ನಾಗಶೇಖರ್ ಯಶ ಕಂಡಿದ್ದಾರೆ.
    ಸುನಿಲ್ : ಸಿಂಪಾಲ್ಲಾಗೊಂದು ಲವ್ ಸ್ಟೋರಿ

    ಸುನಿಲ್ : ಸಿಂಪಾಲ್ಲಾಗೊಂದು ಲವ್ ಸ್ಟೋರಿ

    ಮಾತಿನಲ್ಲೇ ಚಿತ್ರ ಕಟ್ಟಿ ಚೆಂದದ ಹಾಡುಗಳು ನಿತ್ಯ ನೋಡಿರುವ ಲೊಕೇಷನ್ ಗಳನ್ನೇ ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಸುನಿ ಯಶಸ್ವಿಯಾಗಿದ್ದರು. ಟ್ರೇಲರ್ ನಲ್ಲೇ ಫಿಲಂ ತೋರಿಸಿಬಿಡ್ತಾರೆ ಎಂಬ ಅಪವಾದ ಡಬ್ಬಲ್ ಮೀನಿಂಗ್ ಡೈಲಾಗ್ ಎಲ್ಲದರ ಜತೆಗೆ ಸುಂದರ ಹಾಡುಗಳನ್ನು ಸಂಯೋಜನೆ ನೀಡಿದ ಭರತ್ ಬಿಜೆ, ರಕ್ಷಿತ್ ಶೆಟ್ಟಿ, ಶ್ವೇತಾ ಅವರಿಗೂ ಒಳ್ಳೆ ಬ್ರೇಕ್ ನೀಡಿದ ಚಿತ್ರ.

    ಎ. ಹರ್ಷ : ಭಜರಂಗಿ

    ಎ. ಹರ್ಷ : ಭಜರಂಗಿ

    ಶಿವಣ್ಣನ ಸಿಕ್ಸ್ ಪ್ಯಾಕ್, ಭರ್ಜರಿ ಸೆಟ್ಟಿಂಗ್, ಹೊಸ ಬಗೆ ವಿಲನ್ ಗಳು, ಸುಂದರ ಲೋಕೇಷನ್ ಹಾಡುಗಳು, ಒಂದೊಳ್ಳೆ ಟೀಂ ವರ್ಕ್ ನಿಂದ ಹುಟ್ಟಿದ ಭಜರಂಗಿ ಚಿತ್ರವನ್ನು ಸಮರ್ಥವಾಗಿ ಪ್ರೇಕ್ಷಕರ ಮುಂದಿಟ್ಟು ಹರ್ಷ ಗೆದ್ದಿದ್ದಾರೆ. ಬಹು ಕಾಲದ ಕನಸು ನನಸಾಗಿದೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಣೆಗೂ ಈ ಚಿತ್ರ ನಾಂದಿ ಹಾಡಲಿದೆ ಎನ್ನಲಾಗಿದೆ. ಹರ್ಷ ಅವರು ರಂಜನೀಯ ಚಿತ್ರ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

    ಅಶೋಕ್ ಕೆಎಸ್ : 6-5=2

    ಅಶೋಕ್ ಕೆಎಸ್ : 6-5=2

    ಚಿತ್ರರಂಗಕ್ಕೆ ಕಾಲಿಟ್ಟು ಏಳೆಂಟು ವರ್ಷವಾದರೂ ಯಶ ಸಿಗದೇ ಸೈಕಲ್ ಹೊಡೆಯುತ್ತಿದ್ದ ಮೈಸೂರಿನ ಅಶೋಕ್ ಅವರು 6-5=2 ಎಂಬ ಹಾರರ್ ಕಮ್ ನೈಜ ಅನುಭವ ಚಿತ್ರವನ್ನು ನೀಡಿ ಕನ್ನಡ ಚಿತ್ರರಂಗಕ್ಕೆ ಹೊಸ ಸಾಧ್ಯತೆಯನ್ನು ತೋರಿಸಿದವರು. ಚಿತ್ರದ ಕಥೆ ಸತ್ಯಾಸತ್ಯತೆ, ನಟ ನಟಿಯರು ಜೀವಂತ ಇದ್ದಾರಾ? ಎಂಬ ಪ್ರಶ್ನೆಗಳ ನಡುವೆ ಹೊಸ ಪ್ರಯತ್ನ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

    ಬಿಎಂ ಗಿರಿರಾಜ್ : ಜಟ್ಟ

    ಬಿಎಂ ಗಿರಿರಾಜ್ : ಜಟ್ಟ

    ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಪ್ರಬುದ್ಧ ನಿರ್ದೇಶಕರ ಪೈಕಿ ಒಬ್ಬರಾದ ಬಿಎಂ ಗಿರಿರಾಜ್ ಅವರು ಹೊಸತನದಿಂದ ಕೂಡಿದ ನಿರೂಪಣೆ ಕಥೆ ಹಾಗೂ ಕರ್ನಾಟಕದ ಬೇರೆ ಪ್ರಾಂತ್ಯದ ಭಾಷೆ ಬಳಕೆ ಕೂಡಾ ಸಿನಿಮಾದಲ್ಲಿ ಸಾಧ್ಯ ಎಂಬುದನ್ನು ಜಟ್ಟ ಚಿತ್ರದ ಮೂಲಕ ನಿರೂಪಿಸಿದರು. ಸುಶ್ರುತಾ ವಾಗ್ಲೆ, ಕಿಶೋರ್ ಅವರ ಅಭಿನಯ, ಚಿತ್ರ ಹಾಡುಗಳು ಪ್ರೇಕ್ಷಕರ ಮನ ಮುಟ್ಟಿತು. ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರದಿಂದಲೇ ಚಿತ್ರ ಯಶಸ್ಸು ಕಂಡಿತ್ತು.

    ವಿಜಯ್ ಗಡ್ಡ : ದ್ಯಾವ್ರೇ

    ವಿಜಯ್ ಗಡ್ಡ : ದ್ಯಾವ್ರೇ

    ನಿರ್ದೇಶಕ ಯೋಗರಾಜ್ ಭಟ್ ರಿಂದ ನಟನೆ ಮಾಡಿಸಿ. ಹಲವು ಕಥೆಗಳನ್ನು ಒಮ್ಮೆಗೆ ಒಂದೇ ಮಾಧ್ಯಮದ ಮೂಲಕ ಹೇಳುವ ಮೂಲಕ ಹೊಸ ಬಗೆಯ ಯತ್ನ ಮಾಡಿದ ಗಡ್ಡ ವಿಜಯ್ ಅವರ ಪ್ರಯತ್ನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

    ಆಯ್ಕೆ ಮಾಡಿ

    ಆಯ್ಕೆ ಮಾಡಿ

    ಒಟ್ಟಾರೆ 2013ರ ಯಶಸ್ಸು ಕಂಡ ಹಾಗೂ ಭರವಸೆ ಮೂಡಿಸಿದ ನಿರ್ದೇಶಕರ ಪಟ್ಟಿಯಲ್ಲಿ ನಿಮ್ಮ ಆಯ್ಕೆ ತಪ್ಪದೇ ತಿಳಿಸಿ

    English summary
    Here, we are giving an opportunity for our readers to choose the best Kannada movie director of the year 2013 from the list. Follow the slideshow to see the list and vote for your favourite director. 
    Tuesday, December 24, 2013, 17:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X