»   » ‘ಸಿಂಹ ಘರ್ಜನೆ’ ಸಿನಿಮಾದಲ್ಲಿ ವಿಷ್ಣುಗೆ ಜೋಡಿ

‘ಸಿಂಹ ಘರ್ಜನೆ’ ಸಿನಿಮಾದಲ್ಲಿ ವಿಷ್ಣುಗೆ ಜೋಡಿ

Posted By: Super
Subscribe to Filmibeat Kannada

'ನನ್ನ ಚಿತ್ರಕ್ಕೆ ನಾನೇ ಹೀರೋ.." 'ಲೇಡಿ ಅಮಿತಾಭ್‌" ವಿಜಯಶಾಂತಿ ಭರ್ಜರಿ ಆತ್ಮ ವಿಶ್ವಾಸದಲ್ಲಿದ್ದರು. ಈ ಸಿನಿಮಾ ನನ್ನ ಹಿಂದಿನ ಕನ್ನಡ ಸಿನಿಮಾಗಳಂತಲ್ಲ; ಪಾತ್ರವೂ ಡಿಫರೆಂಟ್‌ ಎಂದು ಇನ್ಸ್‌ಪೆಕ್ಟರ್‌ ಶಿಸ್ತಿನಲ್ಲಿ ವಿಜಯಶಾಂತಿ ಹೇಳಿದರು. ಹೌದು, ವಿಜಯಶಾಂತಿ ವಾಪಸ್ಸಾಗಿದ್ದಾರೆ. ಆಯುಧಂ ಹಾಗೂ ವಂದೇ ಮಾತರಂ ಕ್ಲಿಕ್ಕಾಗದೆ ಕನ್ನಡದಿಂದ ದೂರ ಸರಿದಿದ್ದ ಅವರು ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ; ಯಥಾ ಪ್ರಕಾರ ದುಷ್ಟ ಶಿಕ್ಷಕಿಯ ರೂಪದಲ್ಲಿ . ಪ್ರಾಮಾಣಿಕ- ದಕ್ಷ ಪೊಲೀಸ್‌ ಅಧಿಕಾರಿಣಿ ಪಾತ್ರಕ್ಕೆ ಯೂನಿಫಾರಂ ರೆಡಿಯಾಗಿದೆ.

ಇದು ನನ್ನ ಆರನೇ ಕನ್ನಡ ಸಿನಿಮಾ ಎಂದ ವಿಜಯಶಾಂತಿ, ನಿರ್ದೇಶಕರ ಬಗೆಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದರು. ವಿಶ್ವಪ್ರಿಯಂ ಲಾಂಛನದಲ್ಲಿ ತಯಾರಾಗುತ್ತಿರುವ ವಿಜಯಶಾಂತಿ ಅವರ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ . ಅಂದಹಾಗೆ, ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಹಾಗೂ ತಮಿಳಲ್ಲೂ ತಯಾರಾಗಲಿದೆ. ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು.

ವಿಜಯಶಾಂತಿ ಅವರ ಯಶಸ್ವಿ ತೆಲುಗು ಚಿತ್ರ ವೈಜಯಂತಿಯ ನಿರ್ದೇಶಕರಾದ ನಾಗೇಶ್ವರ್‌ ರಾವ್‌ ಈ ಹೊಸ ತ್ರಿಭಾಷಾ ಚಿತ್ರದ ಸೂತ್ರಧಾರರು. ಕನ್ನಡದಲ್ಲಿದು ನನ್ನ ಮೊದಲನೇ ಚಿತ್ರ. ಆದರಿದು ರಿಮೇಕ್‌ ಅಲ್ಲ - ಸ್ವಮೇಕ್‌ ; ನೇರ ನಿರೂಪಣೆ ಇರುವ ಮೆಸೇಜ್‌ ಓರಿಯೆಂಟೆಡ್‌ ಚಿತ್ರ ಎನ್ನುವುದು ಚಿತ್ರದ ಬಗೆಗೆ ನಿರ್ದೇಶಕರು ಹೇಳಿಕೊಳ್ಳುವ ಅಂಡರ್‌ಲೈನ್‌ ಮಾತುಗಳು.

ನಿರ್ದೇಶಕರ ಬಯೋಡೇಟಾ ಇಂತಿದೆ : ಹತ್ತು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಉಪೇಂದ್ರ ಅಭಿನಯದ ರಾ ಕೂಡ ಸೇರಿದೆ. ಸಾಂಬಯ್ಯ, ವೈಜಯಂತಿ ಹಾಗೂ ಪೊಲೀಸ್‌ ರೌಡಿ ಯಶಸ್ವಿ ಚಿತ್ರಗಳು ಎಂದು ನಾಗೇಶ್ವರ್‌ರಾವ್‌ ಅವರೇ ಹೇಳಿಕೊಳ್ಳುತ್ತಾರೆ.

ಗುರುಕಿರಣ್‌ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ನಾಯಕಿ ಪಾತ್ರದ ಆಯ್ಕೆ ಅಂತಿಮವಾಗಿಲ್ಲ ; ಕನ್ನಡದ ಹುಡುಗಿಯಾದರೆ ಚೆನ್ನ ಎಂದು ನಿರ್ಮಾಪಕ ನಿರ್ದೇಕರು ಅಂದುಕೊಂಡಿದ್ದಾರೆ. ಛಾಯಾಗ್ರಹಣ- ಕಿಶನ್‌ ಸಾಗರ್‌ ಅವರದು.

English summary
Lady Amitabh Vijaya Shantis begins third innings in Sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada