ಯಾವುದೇ ಕಟ್ ಇಲ್ಲದೇ ಸೆನ್ಸಾರ್ ಪಾಸ್ ಆದ ಪವನ್ ಒಡೆಯರ್ 'ಡೊಳ್ಳು'

ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ಹೊಸದಾಗಿ ಪ್ರೊಡಕ್ಷನ್ ಸಂಸ್ಥೆ ಆರಂಭಿಸಿದ್ದರು. ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾಗೆ 'ಡೊಳ್ಳು' ಎಂದು ಹೆಸರಿಟ್ಟಿರುವುದಾಗಿ ಈ ಹಿಂದೆ ಹೇಳಿದ್ದರು.

ಇದೀಗ, ಡೊಳ್ಳು ಚಿತ್ರ ಸೆನ್ಸಾರ್ ಮುಗಿಸಿದ್ದು, ಯಾವುದೇ ಕಟ್ ಹಾಗೂ ಮ್ಯೂಟ್ ಇಲ್ಲದೇ 'ಯು' ಪ್ರಮಾಣ ಪತ್ರ ಪಡೆದಿದೆ ಎಂಬ ಸಂತಸದ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

''ನನ್ನ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ ಡೊಳ್ಳು ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದೇ 'ಯು' ಸರ್ಟಿಫಿಕೇಟ್ ಪಡೆದಿದೆ'' ಎಂದು ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ.

Wadeeyar movies Dollu Has got clean U certificate with no cut

ಡೊಳ್ಳು ಹೆಸರೇ ಹೇಳುವ ಹಾಗೆ ಇದು ಜನಪ್ರಿಯ ಜಾನಪದ ನತ್ಯವಾದ ಡೊಳ್ಳು ಕುಣಿತದ ಬಗ್ಗೆ ಇರುವ ಸಿನಿಮಾವಾಗಿದೆ. ಈ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡುತ್ತಿದ್ದಾರೆ. ಸಾಗರ್ ಪುರಾಣಿಕ್ ಈ ಮೊದಲು ಕಿರುಚಿತ್ರ ನಿರ್ಮಾಣ ಮಾಡಿ, ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಕಿರುತೆರೆ ನಟ ಕಾರ್ತಿಕ್ ಮಾಹೇಶ್ ಡೊಳ್ಳು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕಿಯಾಗಿ ನಿಧಿ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ನಿಧಿ ಹೆಗ್ಡೆ ತೆಲುಗು ಮತ್ತು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

Recommended Video

ಕರ್ನಾಟಕದಿಂದ ಹೊರಗೆ ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಗ್ರೂಪ್ | Darshan Bike Ride | Filmibeat Kannada

More from Filmibeat

English summary
Director pavan wadeyar Production first movie 'Dollu' has got clean U certificate with no cut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X